ನಿಷೇಧಿತ ಅವಧಿ ಮುಗಿದರೂ, ಮಲ್ಪೆ ಬೀಚ್ ಇನ್ನೂ ಪ್ರವಾಸಿಗರಿಗೆ ತೆರೆದುಕೊಂಡಿಲ್ಲ. ಆದರೆ ಪ್ರವಾಸಿಗರಿಗೊಂದು ಸಿಹಿಸುದ್ದಿ ಇದೆ. ಮಲ್ಪೆ ಬೀಚ್ ದೇಶದಲ್ಲೇ ಅತಿ ಸುಂದರ ಮತ್ತು ಅಪಾಯವಿಲ್ಲದ ಕಡಲ ತಡಿ ಎಂಬ ಕೀರ್ತಿ ಪಡೆದಿದೆ.
ಉಡುಪಿ (ಸೆ.23): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮಳೆಯು ಕೃಷಿ ಸೇರಿದಂತೆ ಎಲ್ಲಾ ವ್ಯವಹಾರಗಳ ನಷ್ಟಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದ್ದು , ನಿಷೇಧಿತ ಅವಧಿ ಮುಗಿದರೂ , ಮಲ್ಪೆ ಬೀಚ್ ಇನ್ನೂ ಪ್ರವಾಸಿಗರಿಗೆ ತೆರೆದುಕೊಂಡಿಲ್ಲ. ಆದರೆ ಪ್ರವಾಸಿಗರಿಗೊಂದು ಸಿಹಿಸುದ್ದಿ ಇದೆ. ಮಲ್ಪೆ ಬೀಚ್ ದೇಶದಲ್ಲೇ ಅತಿ ಸುಂದರ ಮತ್ತು ಅಪಾಯವಿಲ್ಲದ ಕಡಲ ತಡಿ ಎಂಬ ಕೀರ್ತಿ ಪಡೆದಿದೆ. ರಾಜ್ಯ ಹೊರ ರಾಜ್ಯ ವಿದೇಶದಿಂದಲೂ ಪ್ರವಾಸಿಗರು ಮಲ್ಪೆಯನ್ನು ಹುಡುಕಿಕೊಂಡು ಬರುತ್ತಾರೆ. ಆದ್ರೆ ಮಲ್ಪೆ ಬೀಚ್ ಪ್ರವಾಸಿಗರಿಗೆ ಮುದ ನೀಡದೆ ಐದು ತಿಂಗಳು ಕಳೆದಿದೆ. ಮೇ 15ರ ನಂತರ ಚಂಡಮಾರುತ ಆಮೇಲೆ ನಾಲ್ಕು ತಿಂಗಳು ಮಳೆ. ಇದೀಗ ಮಳೆಯ ಅಬ್ಬರ ಕೊಂಚ ಕಡಿಮೆಯಾದರೂ ವಾಟರ್ ಸ್ಪೋರ್ಟ್ಸ್ ಇನ್ನೂ ಆರಂಭವಾಗಿಲ್ಲ. ವಾಸ್ತವದಲ್ಲಿ ಅವಧಿಗೂ ಮುನ್ನವೇ ಬೀಚಿಗೆ ಪ್ರವಾಸಿಗರ ಎಂಟ್ರಿ ನಿಷೇಧಿಸಲಾಗಿತ್ತು. ಅನೇಕ ಅವಘಡಗಳು ನಡೆದ ಕಾರಣ, ಮಳೆ ಆರಂಭವಾಗುತ್ತಿದ್ದಂತೆ ಮೇ ಮೊದಲ ವಾರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಸೆಪ್ಟೆಂಬರ್ 15ಕ್ಕೆ ನಿಷೇಧಿತ ಅವಧಿ ಮುಗಿದರೂ, ಪ್ರವಾಸಿಗರಿಗೆ ನೀರಿಗಿಳಿಯುವ ಅವಕಾಶ ಸಿಕ್ಕಿಲ್ಲ.
ಇದು ಮಲ್ಪೆ ಬೀಚ್ ನ ಕಥೆಯಾದರೆ ಭೂಮಿ ಮೇಲಿನ ಸ್ವರ್ಗ ಎಂದು ಹೆಸರು ಪಡೆದಿರೋ ಸೈಂಟ್ ಮೇರಿಸ್ ದ್ವೀಪಕ್ಕೆ ಇನ್ನೂ ದೋಣಿಯಾನ ಆರಂಭವಾಗಿಲ್ಲ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಗಾಳಿಯ ಒತ್ತಡ ಕಡಲಿನ ಅಬ್ಬರ ಹೆಚ್ಚಿರುವ ಕಾರಣ ಪ್ರವಾಸೋದ್ಯಮ ಇಲಾಖೆ ಸೈಟ್ ಮೇರಿ ಪ್ರವಾಸ ಆರಂಭಿಸಲು ಧೈರ್ಯ ಮಾಡುತ್ತಿಲ್ಲ.
ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಬೀಚ್ ಅಭಿವೃದ್ಧಿ ಸಮಿತಿ ಮೂರು ಸಭೆಗಳನ್ನು ಮಾಡಿ ಈ ಬಾರಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದೆ. ಕಳೆದ ಬಾರಿ ಸೈಂಟ್ ಮೇರೀಸ್ ದ್ವೀಪದಲ್ಲಾದ ಅವಘಡಗಳನ್ನ ಗಮನದಲ್ಲಿಟ್ಟುಕೊಂಡು ಈ ಬಾರಿ ಕಠಿಣ ನಿಯಮಗಳನ್ನ ಜಾರಿಗೆ ತರಲು ನಿರ್ಧರಿಸಲಾಗಿದೆ.
ಕಡಲ್ಕೊರೆತದಿಂದ Honnavar Eco Beach ಗೆ ಭಾರಿ ಹಾನಿ
ಬೀಚ್ ಮತ್ತು ದ್ವೀಪದಲ್ಲಿ ಲೈಫ್ ಗಾರ್ಡ್ ಗಳು, ನಿಯಮ ಫಲಕಗಳು ಹೆಚ್ಚಾಗಲಿವೆ. ತೋನ್ಸೆ ಪಾರ್ ನ ಶುಚಿತ್ವ ಕೆಲಸಗಳು ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ಪ್ರವಾಸಿಗರು ದ್ವೀಪಕ್ಕೆ ಹೋಗಿ ಮೋಜು ಮಸ್ತಿ ಮಾಡಬಹುದು.ಡಿಸೆಂಬರ್ ತಿಂಗಳವರೆಗೂ ಜಿಲ್ಲೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ದೇಗುಲ ಪ್ರವಾಸೋದ್ಯಮ ಆರಂಭವಾಗಿದ್ದು, ಬೀಚ್ ಟೂರಿಸಂ ಚುರುಕು ಪಡೆಯಲು ನೂರಾರು ಅಂಗಡಿ ಮಾಲೀಕರು ಕಾಯುತ್ತಿದ್ದಾರೆ.
ಉಡುಪಿಯ ವರ್ಲ್ಡ್ ನಂಬರ್ ವನ್ ಸೈಕ್ಲಿಂಗ್ ಬೀಚ್‌ಗೆ ವಿದೇಶಿಗರ ಮೆಚ್ಚುಗೆ
ಈ ಬಗ್ಗೆ ವಿಶೇಷ ಸಭೆ ನಡೆಸಿರುವ ಜಿಲ್ಲಾಡಡಳಿತ, ನವರಾತ್ರಿ ಆರಂಭವಾಗುತ್ತಿದ್ದಂತೆ ಜನರು ಸಮುದ್ರದ ಕಡೆಗೆ ಬರುವ ಅವಕಾಶ ನೀಡಲು ನಿರ್ಧಾರ ಮಾಡಿದೆ. ಹಾಗಾಗಿ ನವರಾತ್ರಿ ರಜೆಯಲ್ಲಿ ಟೂರ್ ಪ್ಲಾನ್ ಮಾಡಿಕೊಂಡವರು, ಮಲ್ಪೆ ಬೀಚ್ ಗೆ ಬರಬಹುದು.