ರಾಯಚೂರು: ಲಿಂಗಸೂಗೂರು , ದೇವದುರ್ಗ ತಾಲೂಕಿನಲ್ಲಿ ಕಾಡುತ್ತಿದೆ ಅತೀ ಹೆಚ್ಚು ಅಪೌಷ್ಟಿಕತೆ

By Suvarna News  |  First Published Jun 29, 2022, 10:55 AM IST

ರಾಯಚೂರು ಜಿಲ್ಲೆಗೆ ಕಂಟಕವಾಗಿ ಕಾಡುತ್ತಿರುವ ಅಪೌಷ್ಟಿಕತೆ ‌ಹೊಗಲಾಡಿಸಲು ಕೇಂದ್ರ ‌ಮತ್ತು ರಾಜ್ಯ ಸರ್ಕಾರ ಹತ್ತಾರು ‌ಯೋಜನೆಗಳು ಜಾರಿಗೆ ತಂದಿದೆ. ಆದ್ರೂ ಜಿಲ್ಲೆಯ ಲಿಂಗಸೂಗೂರು ‌ಮತ್ತು ದೇವದುರ್ಗ ‌ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಪೌಷ್ಟಿಕತೆ ‌ಪ್ರಮಾಣ ಮಾತ್ರ ಕಡಿಮೆ ಆಗುತ್ತಿಲ್ಲ. 


ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ‌ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ‌ಸಭೆ ನಡೆಯಿತು. ಕೇಂದ್ರ ಸರ್ಕಾರ ಮತ್ತು ‌ರಾಜ್ಯ ಸರ್ಕಾರ ಬಡ ಜನರಿಗಾಗಿ ಕೋಟಿ ಕೋಟಿ ರೂಪಾಯಿ ‌ಅನುಮಾನ ನೀಡುತ್ತಿದೆ.

ಆ ಅನುದಾನ ಫಲಾನುಭವಿಗಳಿಗೆ ಮುಟ್ಟಿಸುವ ಸಲುವಾಗಿ ಈ ಸಭೆ ಮಾಡಲಾಗುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಕಾಯ್ದುಕೊಳ್ಳುವ ಮೂಲಕ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಎ.ನಾರಾಯಣಸ್ವಾಮಿ  ನಿರ್ದೇಶನ ನೀಡಿದರು. 

Tap to resize

Latest Videos

 ಅವಧಿ ಪೂರ್ವ ಹೆರಿಗೆ ‌ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಳ: 

ರಾಯಚೂರು ಜಿಲ್ಲೆಗೆ ಕಂಟಕವಾಗಿ ಕಾಡುತ್ತಿರುವ ಅಪೌಷ್ಟಿಕತೆ ‌ಹೊಗಲಾಡಿಸಲು ಕೇಂದ್ರ ‌ಮತ್ತು ರಾಜ್ಯ ಸರ್ಕಾರ ಹತ್ತಾರು ‌ಯೋಜನೆಗಳು ಜಾರಿಗೆ ತಂದಿದೆ. ಆದ್ರೂ ಜಿಲ್ಲೆಯ ಲಿಂಗಸೂಗೂರು ‌ಮತ್ತು ದೇವದುರ್ಗ ‌ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಪೌಷ್ಟಿಕತೆ ‌ಪ್ರಮಾಣ ಮಾತ್ರ ಕಡಿಮೆ ಆಗುತ್ತಿಲ್ಲ. ರಾಯಚೂರಿಗೆ ಆಗಮಿಸಿದ ‌ಕೇಂದ್ರ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಅಧಿಕಾರಿಗಳ ಸಭೆಯಲ್ಲಿ ಅವಧಿ ಪೂರ್ವ ಹೆರಿಗೆ ಮತ್ತು ‌ಜನಿಸಿದ ನವಜಾತ ಶಿಶುಗಳ ತೂಕ ಕಡಿಮೆ ಇರುವ ಪ್ರದೇಶಗಳ ಕಡೆಗಳಲ್ಲಿಗೆ ಹೆಚ್ಚು  ಪ್ರಾಶಸ್ತ್ಯ ನೀಡಬೇಕು. ಅವಧಿ ಪೂರ್ವ ಹೆರಿಗೆ ಮೂಲ ಕಾರಣವೇನು ಎಂಬುವುದು ಪತ್ತೆ ಹಚ್ಚಬೇಕು. ಈ ಸಮಸ್ಯೆ ಕುರಿತು ವರದಿಯೊಂದನ್ನು ಸಿದ್ಧಪಡಿಸಬೇಕು ಅಂತ ಖಡಕ್ ಆಗಿ ಆರೋಗ್ಯ ‌ಇಲಾಖೆ ಹಾಗೂ ಮಹಿಳಾ ಮತ್ತು ‌ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ರಾಯಚೂರು DC ಹೆಸರಲ್ಲಿ ವಂಚನೆಗೆ ಯತ್ನ, ಸಚಿವರ ಸಭೆಯಲ್ಲೇ ಅಧಿಕಾರಿಗಳಿಗೆ ಬಂತು ಮೆಸೇಜ್

 ಆಸ್ಪತ್ರೆಗಳಲ್ಲಿ ಹೆರಿಗೆಯಾದರೂ ಅಪೌಷ್ಟಿಕತೆಗೆ ಕಾರಣವೇನು? 

ರಾಯಚೂರು ಜಿಲ್ಲೆಯಲ್ಲಿ ರಿಮ್ಸ್ ವೈದ್ಯಕೀಯ ಸಂಸ್ಥೆಯಿದೆ. 4 ತಾಲೂಕಾ ಆಸ್ಪತ್ರೆಗಳು ಇವೆ.6 ಸಮುದಾಯ ಆಸ್ಪತ್ರೆಗಳು ಇದ್ದು, 50ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ.ರಾಯಚೂರು ಸಿಟಿಯಲ್ಲಿ 06 ನಗರ ಆರೋಗ್ಯ ‌ಕೇಂದ್ರಗಳು ಇವೆ. ಜಿಲ್ಲೆಯಾದ್ಯಂತ 213 ಆರೋಗ್ಯ ಉಪ ಕೇಂದ್ರಗಳು ಇವೆ. ಗರ್ಭಿಣಿಯರಿಗೆ ತಾಯಿ ಕಾರ್ಡ್ ನೀಡಿ ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುತ್ತೆ..ಅದರ ಜೊತೆಗೆ ಬಹುತೇಕ ಹೆರಿಗೆಗಳು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿವೆ.

ಆದ್ರೂ ಸಹ ಮಹಿಳೆಯಲ್ಲಿ ಅನಿಮಿಯಾ ಮಾತ್ರ ಕಡಿಮೆ ಆಗುತ್ತಿಲ್ಲ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನವರಿಕೆ ಮಾಡುವ ಕೆಲಸ ಆಗಬೇಕು. ಅಲ್ಲದೆ ಗರ್ಭಿಣಿಯರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಜೊತೆಗೆ ಪೌಷ್ಟಿಕ ಆಹಾರ ನೀಡಬೇಕೆಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗರ್ಭಿಣಿಯರಲ್ಲಿನ ಅಪೌಷ್ಟಿಕತೆಯಿಂದಾಗಿ ಕಡಿಮೆ ತೂಕದ ಮಕ್ಕಳು ಜನಿಸುತ್ತಿವೆ. ಹೀಗಾಗಿ ರಾಯಚೂರು ‌ಜಿಲ್ಲೆಯಲ್ಲಿ 6 ವರ್ಷದೊಳಗಿನ 40 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಕಡಿಮೆ ‌ತೂಕ ಇರುವುದು ಕಂಡು ಬಂದಿದೆ. ಸರ್ಕಾರ ‌ನೀಡುವ ಪೌಷ್ಟಿಕ  ಆಹಾರ ಪದಾರ್ಥಗಳು ಏಕೆ ಹಂಚಿಕೆ  ಆಗುತ್ತಿಲ್ಲವೇ.ಗರ್ಭಿಣಿಯರ ಬಗ್ಗೆ ಕಾಳಜಿವಹಿಸಿ ಅವರಿಗೆ ಅಗತ್ಯ ಪೌಷ್ಟಿಕಾಂಶವುಳ್ಳ ಆಹಾರವನ್ನು ಅಂಗನವಾಡಿ ಕೇಂದ್ರಗಳ ಮೂಲಕ ಸಮರ್ಪಕವಾಗಿ  ಒದಗಿಸಬೇಕು. ಅಲ್ಲದೆ ಈ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಿ ಪೌಷ್ಟಿಕಾಹಾರ ಫಲಾನುಭವಿಗಳಿಗೆ ಮುಟ್ಟಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಖಡಕ್ ಆಗಿ ವಾರ್ನಿಂಗ್ ‌ನೀಡಿದ್ರು.

 ರಾಯಚೂರು ಜಿಲ್ಲೆಗೆ ಶಾಪವಾದ ಬಾಲ ಕಾರ್ಮಿಕರ ‌ಪದ್ಧತಿ

ರಾಯಚೂರು ಜಿಲ್ಲೆ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ನೀರಾವರಿ ಹೊಂದಿದರೂ ಜಿಲ್ಲೆಯಲ್ಲಿ ಮಾತ್ರ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ.ಇಂತಹ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ  ನಿರ್ಮೂಲನೆವಾಗಬೇಕು. ಅಲ್ಲದೆ ಈ ಬಗ್ಗೆ ವಿವಿಧ ಇಲಾಖೆಯಗಳ ಸಂಯುಕ್ತಾಶ್ರಯದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ‌ ಸಚಿವ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.

ಸೋರುತಿಹುದು ಬೀಳುತಿಹುದು ಸರ್ಕಾರಿ ಶಾಲೆಯ ಮಾಳಿಗೆ

 ರಾಯಚೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ: 

ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ವಿವಿಧ ಸಂಘ- ಸಂಸ್ಥೆಗಳು ಜಾಗೃತಿ ಮೂಡಿಸಿದರು. ಸಹ ರಾಯಚೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ‌ನಿರಂತರವಾಗಿ ನಡೆಯುತ್ತಿವೆ. ಬ್ಯಾಲ ವಿವಾಹಗಳು ಯಾವ ಜಾತಿಯವರಲ್ಲಿ ಹೆಚ್ಚಾಗಿದೆ ಪತ್ತೆಮಾಡಿ, ಬಾಲ್ಯ ವಿವಾಹದ ಅಡ್ಡ ಪರಿಣಾಮಗಳ ಕುರಿತು ವ್ಯಾಪಕವಾಗಿ ಜಾಗೃತಿ ‌ಮೂಡಿಸಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಮತ್ತು ‌ಮಹಿಳಾ ಮತ್ತು ಮಕ್ಕಳ ‌ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.

ಇನ್ನೂ ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ‌ನಾಯಕ, ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ,
ಜಿ.ಪಂ. ಜಹರಾ ಖಾನಂ, ಎಸ್ ಪಿ  ನಿಖಿಲ್ .ಬಿ. ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್. ದುರುಗೇಶ್, ಜಿ.ಪಂ.ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಡಿಎಚ್ ಒ ಡಾ.ಸುರೇಂದ್ರ ಬಾಬು, ಕೃಷಿ ಡಿಡಿ ದೇವಿಕಾ ಆರ್. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

- ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

click me!