ಕಾಂಗ್ರೆಸ್‌ ಕಟ್ಟಿದ ಸಂಸ್ಥೆ ಮೋದಿ ಮಾರುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

Published : May 23, 2022, 03:25 AM IST
ಕಾಂಗ್ರೆಸ್‌ ಕಟ್ಟಿದ ಸಂಸ್ಥೆ ಮೋದಿ ಮಾರುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಸಾರಾಂಶ

ಕಾಂಗ್ರೆಸ್‌ ಕಟ್ಟಿಬೆಳೆಸಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರುವುದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲಸವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ಮಾರಿ ಶೇ.60 ರಷ್ಟಿರುವ ಬಡ ವರ್ಗಗಳ ಕೆಲಸ ಹಾಗೂ ಮೀಸಲಾತಿ ಕಸಿಯುವ ಷಡ್ಯಂತ್ರ ಎಸಗುತ್ತಿದ್ದಾರೆ.

ಬೆಂಗಳೂರು (ಮೇ.23): ಕಾಂಗ್ರೆಸ್‌ ಕಟ್ಟಿಬೆಳೆಸಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರುವುದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲಸವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ಮಾರಿ ಶೇ.60 ರಷ್ಟಿರುವ ಬಡ ವರ್ಗಗಳ ಕೆಲಸ ಹಾಗೂ ಮೀಸಲಾತಿ ಕಸಿಯುವ ಷಡ್ಯಂತ್ರ ಎಸಗುತ್ತಿದ್ದಾರೆ. ಈ ಕುರಿತು ನಾವು ಪ್ರತಿ ಹಳ್ಳಿಯ ಮನೆ-ಮನೆಗೂ ಹೋಗಿ ಪ್ರಚಾರ ಮಾಡಬೇಕು ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್‌ ಗಾಂಧಿ ಅವರ ಪುಣ್ಮಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ದುರ್ಬಲರ ಮೇಲೆ ಆಗುತ್ತಿರುವ ದಬ್ಬಾಳಿಕೆಗಳ ವಿರುದ್ಧ ಜನರಿಗೆ ಜಾಗೃತಿ ಮೂಡಿಸಬೇಕು. ನಮ್ಮ ನಾಯಕರು ಯಾರೇ ಅಭಿಪ್ರಾಯ ವ್ಯಕ್ತಿಪಡಿಸಿದರೂ ಅದನ್ನು ನೀವು ಜನರೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದರು. ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ದೇಶಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಈಗಿನ ಪ್ರಧಾನಮಂತ್ರಿಗಳು ಕೇವಲ ಹೆಸರು ಬದಲಾವಣೆ ಮಾಡುತ್ತಿದ್ದಾರೆ. 

ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

ಜತೆಗೆ ನಾವು ಕಟ್ಟಿಬೆಳಸಿದ ಸಂಸ್ಥೆಗಳನ್ನು ಮಾರುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರಿಗೆ ಎರಡು ಗುರಿ ಇವೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಿದರೆ ಬಡವರಿಗೆ ಕೆಲಸ ಹಾಗೂ ಮೀಸಲಾತಿ ಸಿಗುವುದಿಲ್ಲ. ಹೀಗಾಗಿ ಬಡವರ 60% ಮೀಸಲಾತಿ ದಲಿತರು, ಹಿಂದುಳಿದವರು ಹಾಗೂ ಆರ್ಥಿಕ ಹಿಂದುಳಿದವರನ್ನು ಕೆಲಸದಿಂದ ದೂರ ಇಟ್ಟಂತಾಗುತ್ತದೆ.  ಈ ಷಡ್ಯಂತ್ರ ವಿರುದ್ದ ಹೋರಾಟ ಮಾಡುವ ಮೂಲಕ ಈ ವಲಯಗಳಿಗೆ ರಕ್ಷಣೆ ನೀಡಿ, ನೇಮಕಾತಿ ಬಾಕಿ ಇರುವ 26 ಲಕ್ಷ ಹುದ್ದೆಗಳ ಭರ್ತಿಗೆ ಒತ್ತಾಯಿಸಬೇಕು. ತನ್ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೋರಾಡಬೇಕು ಎಂದರು. 

ರಾಜೀವ್‌ಗಾಂಧಿ ಅವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದರು. ಐಟಿ ಕ್ರಾಂತಿ ಮಾಡಿದರು. ಯುವಕರಿಗೆ ಕಾಂಗ್ರೆಸ್‌ ಎಷ್ಟೆಲ್ಲ ಕೊಡುಗೆ ನೀಡಿದೆ. ಮೋದಿ ಅವರು ಈಗ ಯುವಕರಿಗೆ ಪಕೋಡ ಮಾರಿ ಎಂದು ಹೇಳಿದ್ದಾರೆ. ನಾವು ಇಷ್ಟೆಲ್ಲಾ ಮಾಡಿದರು ನಮ್ಮ ಮೇಲೆ ಮುನಿಸಿಕೊಂಡಿರುವುದೇಕೆ? ಎಂದು ಬೇಸರ ವ್ಯಕ್ತಪಡಿಸಿದರು.  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿ, ದೇಶದಲ್ಲಿ ಕೋಮುವಾದದ ಸಂಘಟನೆಗಳನ್ನು ಹದ್ದು ಬಸ್ತಿನಲ್ಲಿಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದೊಂದು ನಿರ್ಜೀವ ಸರ್ಕಾರ, ಇದಕ್ಕೆ ಬದ್ಧತೆ ಇಲ್ಲ. 

Loudspeaker Guidelines ಲೌಡ್‌ ಸ್ಪೀಕರ್‌ ವಿಷಯದಲ್ಲಿ ನಾವು ಮುಸ್ಲಿಮರ ಪರ ನಿಲ್ಲುತ್ತೇವೆ, ಖರ್ಗೆ!

ಸರ್ವಜನಾಂಗದ ಶಾಂತಿಯ ತೋಟದಂತಿರುವ ರಾಜ್ಯವನ್ನು ನಾಶ ಮಾಡಲು ಹೊರಟಿರುವ ಸಂಘಟನೆಗಳ ವಿರುದ್ಧ ಸರ್ಕಾರ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದರೂ ಜನ ಇನ್ನು ಇದರ ವಿರುದ್ಧ ತಿರುಗಿ ಬಿದ್ದಿಲ್ಲ. ಕೊರೋನಾ ಸಾವುಗಳ್ನು ಮುಚ್ಚಿಟ್ಟಿದ್ದರೂ ಜನ ಎಚ್ಚೆತ್ತುಕೊಂಡಿಲ್ಲ. ಜನ ಸಿಡಿದೇಳುವವರೆಗೂ ಕಠಿಣ ದಿನಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಮಾಜಿ ಸಚಿವರಾದ ಎಚ್‌. ಆಂಜನೇಯ, ಯು.ಟಿ. ಖಾದರ್‌, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹಾಜರಿದ್ದರು.

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ