ಕಳೆದ ಎರಡ್ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲು ಜಿಲ್ಲೆಯಲ್ಲಿ ಡೋಣಿ ನದಿಗೆ ಪ್ರವಾಹ ಉಂಟಾಗುವ ಭೀತಿಯು ಕಾಡ್ತಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ.22): ಕಳೆದ ಎರಡ್ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲು ಜಿಲ್ಲೆಯಲ್ಲಿ ಡೋಣಿ ನದಿಗೆ ಪ್ರವಾಹ ಉಂಟಾಗುವ ಭೀತಿಯು ಕಾಡ್ತಿದೆ. ಈ ನಡುವೆ ತಾಳಿಕೋಟೆ ತಾಲೂಕಿನ ಹಡಗಿನ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ..
undefined
ಮಳೆ ಹಿನ್ನೆಲೆ ಡೋಣಿ ನದಿ ಪ್ರವಾಹ ಭೀತಿ: ಕಳೆದ ಎರೆಡು ದಿನಗಳ ಕಾಲ ವಿಜಯಪುರ ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದೆ. ಪರಿಣಾಮ ಮಳೆ ನೀರು ಡೋಣಿ ನದಿ ಮೂಲಕ ಹರಿಯುತ್ತಿದ್ದು ನದಿ ತೀರದ ಪ್ರದೇಶಗಳಲ್ಲಿ ಡೋಣಿ ಪ್ರವಾಹದ ಆತಂಕ ಕಾಡ್ತಿದೆ. ಮಳೆಯಾದಾಗಲೇ ಉಕ್ಕಿ ಹರಿದು ರೈತರ ಜಮೀನುಗಳಿಗೆ ನುಗ್ಗಿ ಡೋಣಿ ನದಿ ತಾಳಿಕೋಟೆ ಭಾಗದಲ್ಲಿ ಜನರಲ್ಲಿ ಆತಂಕ ಮೂಡಿಸಿದೆ.
ಹಡಗಿನಾಳ ರಸ್ತೆ ಸಂಚಾರದಲ್ಲಿ ವ್ಯತ್ಯಯ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಡಗಿನಾಳ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದಲ್ಲದೇ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ರಾಜ್ಯ ಹೆದ್ದಾರಿ ಸಂಚಾರ ಮತ್ತೆ ಬಂದ್ ಆಗುವ ಭೀತಿ ಎದುರಾದಂತಾಗಿದೆ. ತಾಳಿಕೋಟಿ ಪಟ್ಟಣದ ಮೂಲಕ ಬಿಜ್ಜಳ ರಾಜ್ಯ ಹೆದ್ದಾರಿ 60 ಎಂದು ಕರೆಯಲ್ಪಡುವ ಮನಗೂಳಿ - ದೇವಾಪುರ ರಾಜ್ಯ ಹೆ್ದಾರಿ ಹಾದು ಹೋಗುತ್ತದೆ. ತಾಳಿಕೋಟಿ ಪಟ್ಟಣ ತಲುಪುವ ಮುಂಚೆ ಇದೇ ಡೋಣಿ ನದಿಗೆ ಮುಖ್ಯ ಸೇತುವೆ ಕಳೆದ ಕೆಲ ತಿಂಗಳ ಹಿಂದೆ ಶಿಥಿಲಗೊಂಡ ಕಾರಣ ದುರಸ್ಥಿಗೊಳಪಡಿಸಿ ಇದರ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರ ಬದಲಾಗಿ ಪಕ್ಕದಲ್ಲಿಯೇ ತಾತ್ಕಾಲಿಕ ರಸ್ತೆಯೊಂದನ್ನ ನಿರ್ಮಾಣ ಮಾಡಿ ಅದು ಮುಕ್ತಾಯದ ಹಂತ ತಲುಪಿದೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಕಾರಣದಿಂದ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಮತ್ತೆ ರಾಜ್ಯ ಹೆದ್ದಾರಿ ಸಂಚಾರ ವ್ಯತ್ಯಯವಾಗುವ ಭೀತಿ ಎದುರಾಗಿದೆ.
Vijayapura: ಬಾಣಂತಿಯರ ನರಳಾಟ ಪ್ರಕರಣ : ಜಿಲ್ಲಾಸ್ಪತ್ರೆಗೆ ಉಪಲೋಕಾಯುಕ್ತರ ಭೇಟಿ!
ತುರ್ತು ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ: ಇನ್ನಷ್ಟು ಮಳೆಯಾಗಿ ಡೋಣಿಗೆ ಪ್ರವಾಹ ಉಂಟಾದ್ರೆ ಹೆದ್ದಾರಿ ಸಂಚಾರವು ಬಂದ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಕುರಿತು ತುರ್ತು ಪರಿಹಾರೋಪಾಯ ಕಾಮಗಾರಿ ಕೈಗೊಳ್ಳಬೇಕೆನ್ನುವುದು ಸ್ಥಳೀಯರ ಹಾಗೂ ಈ ಮಾರ್ಗದ ಮೂಲಕ ಸಂಚರಿಸುವ ಜನತೆಯ ಆಗ್ರಹವಾಗಿದೆ.
ರಜೆ ಮೇಲೆ ತೆರಳದಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ: ಈಗಾಗಲೇ ಮಳೆಗಳು ಆರಂಭವಾಗಿವೆ. ಆದ್ದರಿಂದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ರಜೆಯ ಮೇಲೆ ತೆರಳದೇ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಇಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿಗಳ ನಿರ್ದೇಶನ: ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮೇ 21ರಂದು ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಮಹತ್ವದ ಸಭೆ ನಡೆದಿದೆ. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ, ಹೆಸ್ಕಾಂ, ಪಂಚಾಯತ್ ರಾಜ್ ವಿಭಾಗ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಣ್ಣ ನೀರಾವರಿ, ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಕೆ.ಬಿ.ಜೆ.ಎನ್.ಎಲ್. ಮತ್ತು ಕೆ.ಎನ್.ಎನ್.ಎಲ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯು ರಜೆಯ ಮೇಲೆ ತೆರಳದಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುತ್ತಾರೆ.
ಈ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು: ಮಾನ್ಯ ಮುಖ್ಯಮಂತ್ರಿಗಳವರ ನಿರ್ದೇಶನದ ಹಿನ್ನೆಲೆಯಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ, ಹೆಸ್ಕಾಂ, ಪಂಚಾಯತ್ ರಾಜ್ ವಿಭಾಗ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಣ್ಣ ನೀರಾವರಿ, ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಕೆ.ಬಿ.ಜೆ.ಎನ್.ಎಲ್. ಮತ್ತು ಕೆ.ಎನ್.ಎನ್.ಎಲ್‌ನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯು ಮಳೆಗಾಲ ಪೂರ್ಣಗೊಳ್ಳುವವರೆಗೆ ರಜೆಯ ಮೇಲೆ ತೆರಳದೇ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಹಾಗೂ ಕರ್ತವ್ಯದ ದಿನಗಳಲ್ಲಿ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯು ತಮ್ಮ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಕೂಡದು ಎಂದು ಈ ಮೂಲಕ ಸೂಚಿಸಿದೆ.
ಅಕಾಲಿಕ ಮಳೆ ಆಪತ್ತು: ಈರುಳ್ಳಿ ಬೆಲೆಗೆ ವಿಪತ್ತು, ಕಂಗಾಲಾದ ರೈತ..!
ವಿನಾಕಾರಣ ರಜೆ ಹೋದರೆ ಕಠಿಣ ಕ್ರಮದ ಎಚ್ಚರಿಕೆ: ತುರ್ತು ಕಾರ್ಯ ಸಂದರ್ಭಗಳಲ್ಲಿ ಮಾತ್ರ ರಜೆ, ಕೇಂದ್ರ ಸ್ಥಾನ ಬಿಡುವ ಕುರಿತು ಜಿಲ್ಲಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆದುಕೊಳ್ಳತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಜಿಲ್ಲಾ ವಿಪತ್ತು ನಿರ್ವಹಣಾ ಕಾಯ್ದೆ-2005ರನ್ವಯ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.