ಮಳಲಿ ಮಸೀದಿ ವಿವಾದ ಸಂಬಂಧ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದೆ. ಎರಡೂ ಕಡೆಯ ವಕೀಲರು ವಾದ-ಪ್ರತಿವಾದ ಆರಂಭಿಸಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಮೇ.3): ಮಳಲಿ ಮಸೀದಿ (Malali mosque) ವಿವಾದ ಸಂಬಂಧ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದೆ. ವಿಎಚ್ ಪಿ (VHP -Vishwa Hindu Parishad) ಅರ್ಜಿ ವಜಾಗೆ ಆಗ್ರಹಿಸಿ ಮಸೀದಿ ಕಮಿಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುರುವಾಗಿದ್ದು, ಎರಡೂ ಕಡೆಯ ವಕೀಲರು ವಾದ-ಪ್ರತಿವಾದ ಆರಂಭಿಸಿದ್ದಾರೆ.
ವಿಎಚ್ ಪಿ ಪರ ವಕೀಲರ ವಾದವೇನು?
ಮಂಗಳೂರು (Mangaluru) ಕೋರ್ಟ್ ನಲ್ಲಿ ವಿಎಚ್ ಪಿ ವರ್ಸಸ್ ಮಳಲಿ ಮಸೀದಿ ಫೈಟ್ ವಿಚಾರದಲ್ಲಿ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಆರಂಭದಲ್ಲೇ ಮಸೀದಿ ಕಮಿಟಿ ವಾದಕ್ಕೆ ವಿಎಚ್ ಪಿ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಸೀದಿ ಕಮಿಟಿ ವಾದಕ್ಕೆ ವಿಎಚ್ ಪಿ ವಕೀಲ ಚಿದಾನಂದ ಕೆದಿಲಾಯ ಪ್ರತಿ ವಾದ ಸಲ್ಲಿಸಿದ್ದಾರೆ. ನವೀಕರಣ ಸಮಯದಲ್ಲಿ ಅಲ್ಲಿ ದೇವಸ್ಥಾನದ ಮಾದರಿ ಸಿಕ್ಕಿದೆ, ಅದರ ಫೋಟೋಗಳನ್ನು ನೀಡಲಾಗಿದೆ.
ಪರೀಕ್ಷಾ ತಯಾರಿ ಬಗ್ಗೆ UPSC ಟಾಪರ್ SHRUTI SHARMA ಮಾತು
ಆ ಜಾಗದಲ್ಲಿ ಹಿಂದೂ ಧಾರ್ಮಿಕ ಕೇಂದ್ರ ಇದ್ದ ಬಗ್ಗೆ ಸಾಕಷ್ಟು ಐತಿಹಾಸಿಕ ಸಾಕ್ಷ್ಯ ಇದೆ. ಇದೊಂದು ಜ್ಞಾನವಾಪಿ ಮಾದರಿ ಪ್ರಕರಣ, ಸತ್ಯಾಸತ್ಯತೆ ತಿಳಿಯಬೇಕು. ಹೀಗಾಗಿ ಜ್ಞಾನವಾಪಿ ಮಾದರಿಯಲ್ಲಿ ಮಸೀದಿ ಜಾಗದ ಸರ್ವೇ ನಡೆಯಬೇಕು. ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸುವಂತೆ ನ್ಯಾಯಾಲಯಕ್ಕೆ ಮನವಿ. ತಕ್ಷಣ ಕೋರ್ಟ್ ಕಮಿಷನರ್ ನೇಮಿಸಿ ಜಾಗದ ಸರ್ವೆ ನಡೆಸಲು ವಿಎಚ್ ಪಿ ವಕೀಲರ ಮನವಿ. ಅಲ್ಲದೇ ಸದ್ಯ ವಿಧಿಸಲಾಗಿರೋ ತಡೆಯಾಜ್ಞೆ ತೆರವುಗೊಳಿಸಬಾರದು. ವಿವಾದಿತ ಜಾಗವಾದ ಕಾರಣ ಯಥಾಸ್ಥಿತಿಯಲ್ಲೇ ವಿಚಾರಣೆ ನಡೆಯಲಿ ಎಂದರು.
ಮಸೀದಿ ಕಮಿಟಿ ವಾದವೇನು?
ಇನ್ನು ವಿಎಚ್ ಪಿ ಪರ ವಕೀಲರ ವಾದಕ್ಕೆ ಮಸೀದಿ ಕಮಿಟಿ ವಕೀಲರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಸೀದಿಗೆ 700 ವರ್ಷಗಳ ಇತಿಹಾಸವಿದೆ, ಮತ್ತೆ ಅದು ಸರಕಾರಿ ಜಾಗ. ಇಲ್ಲಿ ಯಾವ ದೇವಸ್ಥಾನ ಇತ್ತು ಅಂತ ಸಾಕ್ಷ್ಯ ಒದಗಿಸಲಿ. ಮಳಲಿ ಮುಸ್ಲಿಮರು ಹಲವು ವರ್ಷಗಳಿಂದ ಇಲ್ಲಿ ಅವರ ಧಾರ್ಮಿಕ ಕ್ರಿಯೆ ಮಾಡ್ತಿದಾರೆ. ಮಸೀದಿ ಆಡಳಿತದ ಬಳಿ ಎಲ್ಲಾ ರೀತಿಯ ಜಾಗದ ದಾಖಲೆಗಳೂ ಇವೆ. ಅದರ ಜೊತೆಗೆ ನವೀಕರಣದ ವೇಳೆ ಸ್ಥಳೀಯ ಪಂಚಾಯತ್ ಅನುಮತಿ ಪಡೆಯಲಾಗಿದೆ.
ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ
ಹೀಗಾಗಿ ತಕ್ಷಣ ನವೀಕರಣ ಕಾಮಗಾರಿ ಮಾಡಲು ಅನುಮತಿ ಕೊಡಿ. ಇಲ್ಲಿ ಹಲವು ವರ್ಷಗಳಿಂದ ಧಫನ ಭೂಮಿ ಕೂಡ ಇದೆ. ಇದೊಂದು ಪಾಲಿಟಿಕಲ್ ಗಿಮಿಕ್ ಅಷ್ಟೇ, ಇದರ ಹಿಂದೆ ಬೇರೆ ಉದ್ದೇಶ ಇಲ್ಲ. ನ್ಯಾಯಾಲಯ ಅವರ ಅರ್ಜಿ ವಜಾ ಮಾಡಿ ಮಸೀದಿ ನವೀಕರಣದ ಅನುಮತಿ ಕೊಡಲಿ ಎಂದು ಮಸೀದಿ ಕಮಿಟಿ ಪರ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದ್ದಾರೆ.
Kuvempu Row; ರೋಹಿತ್ ಚಕ್ರತೀರ್ಥ ಪದಚ್ಯುತಿಗೆ ಗಣ್ಯರಿಂದ ಸಿಎಂ ಮೇಲೆ ಒತ್ತಡ
ವಿಶ್ವಹಿಂದೂ ಪರಿಷತ್ ಅರ್ಜಿ ವಜಾ ಮಾಡಲು ಮಂಗಳೂರು ಕೋರ್ಟ್ ಗೆ ಮಸೀದಿ ಆಡಳಿತ ಅರ್ಜಿ ಸಲ್ಲಿಸಿತ್ತು. ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ಅರ್ಜಿ ಸಲ್ಲಿಕೆ ಆಗಿತ್ತು. ವಕ್ಫ್ ಬೋರ್ಡ್ ಕಾಯ್ದೆ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಯಡಿ ವಜಾಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.