ಮತ್ತೆ 5 ವರ್ಷದವರೆಗೂ ನಿಮ್ಮ ಜೊತೆಗಿರುವಂತೆ ಮಾಡಿ

By Kannadaprabha News  |  First Published Apr 15, 2023, 6:10 AM IST

ಬೃಹತ್‌ ಗಾತ್ರದ ಹಾರವನ್ನು ಹಾಕಿಸಿಕೊಳ್ಳುವಷ್ಟುದೊಡ್ಡ ವ್ಯಕ್ತಿ ನಾನಲ್ಲ, ಮುಂದಿನ 25 ದಿನಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದು ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡಿದರೆ ಮುಂದಿನ 5 ವರ್ಷಗಳವರೆಗೂ ನಿಮ್ಮಗಳ ಜೊತೆಗೆ ಇರುವೆ ಎಂದು ಜೆಡಿಎಸ್‌ ಅಭ್ಯರ್ಥಿ ಎಂ. ಅಶ್ವಿನ್‌ಕುಮಾರ್‌ ಹೇಳಿದರು.


  ಟಿ. ನರಸೀಪುರ :  ಬೃಹತ್‌ ಗಾತ್ರದ ಹಾರವನ್ನು ಹಾಕಿಸಿಕೊಳ್ಳುವಷ್ಟುದೊಡ್ಡ ವ್ಯಕ್ತಿ ನಾನಲ್ಲ, ಮುಂದಿನ 25 ದಿನಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದು ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡಿದರೆ ಮುಂದಿನ 5 ವರ್ಷಗಳವರೆಗೂ ನಿಮ್ಮಗಳ ಜೊತೆಗೆ ಇರುವೆ ಎಂದು ಜೆಡಿಎಸ್‌ ಅಭ್ಯರ್ಥಿ ಎಂ. ಅಶ್ವಿನ್‌ಕುಮಾರ್‌ ಹೇಳಿದರು.

ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಗುರುವಾರ ಮತಯಾಚನೆ ಆಗಮಿಸಿ, ಕಾರ್ಯಕರ್ತರಿಂದ 350 ಕೆಜಿ ಬೃಹತ್‌ ಗಾತ್ರದ ಸೇಬಿನ ಹಾರ, ಪುಷ್ಪ ವೃಷ್ಟಿಯ ಅದ್ಧೂರಿ ಸ್ವಾಗತವನ್ನು ಸ್ವೀಕರಿಸಿ ಹಾಗೂ ಹಲವು ಕಾಂಗ್ರೆಸ್‌ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

Tap to resize

Latest Videos

ಕಳೆದ ಯಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರಿಂದ ಜನರ ಸೇವೆಯನ್ನು ಮಾಡಿದ್ದೇನೆ. ಮತ್ತೊಮ್ಮೆ ಬೆಂಬಲಿಸಿ ಆಯ್ಕೆ ಮಾಡಿದರೆ ಮಂದಿಯೂ ಜನರೊಂದಿಗೆ ಇದ್ದುಕೊಂಡು ಅಭಿವೃದ್ಧಿಗೆ ನಿಮ್ಮೊಂದಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಸ್ಫಟಿಕ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಜೆಡಿಎಸ್‌ ಮುಖಂಡ ಎಂ. ಕುಮಾರ್‌ ಮಾತನಾಡಿದರು.

ಮತಯಾಚನೆ, ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್‌ ಅಭ್ಯರ್ಥಿ, ಶಾಸಕ ಎಂ. ಅಶ್ವಿನ್‌ಕುಮಾರ್‌ ಅವರನ್ನು ಅದ್ದೂರಿ ಸ್ವಾಗತದೊಂದಿಗೆ ಕಾರ್ಯಕರ್ತರು ಬರಮಾಡಿಕೊಂಡರು. ಗ್ರಾಮದ ಶ್ರೀ ಬಸವೇಶ್ವರ, ಶ್ರೀ ಕನಕದಾಸರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಯೊಂದು ಬೀದಿಗಳನ್ನು ಸಂಚರಿಸಿ ಮತಯಾಚಿಸಿದರು. ಕಾಂಗ್ರೆಸ್‌ನ ನೂರಾರು ಮುಖಂಡರು, ಯುವಕರು ಜೆಡಿಎಸ್‌ಗೆ ಸೇರ್ಪಡೆಯಾದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಸ್‌.ಎನ್‌. ಸಿದ್ಧಾರ್ಥ, ಮಾಜಿ ಸದಸ್ಯ ಎಸ್‌.ವಿ. ಜಯಪಾಲ ಭರಣಿ, ಮಾಜಿ ಪ್ರಧಾನ ಬಿ. ಮಲ್ಲಿಕಾರ್ಜುನಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷÜ ಮಹದೇವಯ್ಯ, ಪ್ರೀತಂ, ಹಾಲಿ ಸದಸ್ಯ ಕೆ.ಎನ್‌. ಅಶೋಕ್‌, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ ಇದ್ದರು.

click me!