15 ದಿನದಲ್ಲಿ ಮೇಕ್‌ ಇನ್‌ ಇಂಡಿಯಾ ಚಾಲಕರಹಿತ ಮೆಟ್ರೋ ರೈಲು ಬೆಂಗ್ಳೂರಿಗೆ!

By Kannadaprabha News  |  First Published Jan 7, 2025, 6:00 AM IST

ಚೀನಾದ ಸಿಆರ್‌ಆರ್‌ಸಿ ರೈಲ್ವೆ ಬೋಗಿ ಉತ್ಪಾದನೆ ಕಂಪನಿಯ ಜೊತೆಗಿನ ಒಪಂದದ ಭಾಗವಾಗಿ ಟೆಆರ್ ಎಸ್ಎಲ್ ನಿರ್ಮಿಸಿದ ಈ ರೈಲಿಗೆ ಸೋಮವಾರ ಚಾಲನೆ ದೊರೆತಿದ್ದು, ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದೆ. ಚೀನಾದಿಂದ 2023ರ ಫೆಬ್ರವರಿಯಲ್ಲಿ ಬಂದಿರುವ ಮೂಲ ಮಾದರಿ ರೈಲಿನ ಬಳಿಕ ಇದೀಗ ದೇಶಿಯವಾಗಿ ಸಿಆರ್‌ಆರ್‌ಸಿ ನಿರ್ಮಿಸಿದ ರೈಲು ನಮ್ಮ ಮೆಟ್ರೋಗೆ ಸೇರ್ಪಡೆ ಆಗುತ್ತಿದೆ. 


ಬೆಂಗಳೂರು(ಜ.07):  ಕೊಲ್ಕತ್ತಾದ ತೀನಾಘಡ ರೈಲ್ ಸಿಸ್ಟಂ ಲಿ. (ಟಿಆರ್ ಎಸ್ಎಲ್) 'ನಮ್ಮ ಮೆಟ್ರೋ'ದ ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗಕ್ಕಾಗಿ ತಯಾರಿಸಿದ ಮೊದಲ ಚಾಲಕ ರಹಿತ ದೇಶೀಯ ರೈಲ್ವೆ ಬೋಗಿಗಳು (ಸಿಬಿಟಿಸಿ ತಂತ್ರಜ್ಞಾನ) ಹದಿನೈದು ದಿನಗಳಲ್ಲಿ ಬೆಂಗಳೂರು ತಲುಪಲಿದೆ. 

ಚೀನಾದ ಸಿಆರ್‌ಆರ್‌ಸಿ ರೈಲ್ವೆ ಬೋಗಿ ಉತ್ಪಾದನೆ ಕಂಪನಿಯ ಜೊತೆಗಿನ ಒಪಂದದ ಭಾಗವಾಗಿ ಟೆಆರ್ ಎಸ್ಎಲ್ ನಿರ್ಮಿಸಿದ ಈ ರೈಲಿಗೆ ಸೋಮವಾರ ಚಾಲನೆ ದೊರೆತಿದ್ದು, ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದೆ. ಚೀನಾದಿಂದ 2023ರ ಫೆಬ್ರವರಿಯಲ್ಲಿ ಬಂದಿರುವ ಮೂಲ ಮಾದರಿ ರೈಲಿನ ಬಳಿಕ ಇದೀಗ ದೇಶಿಯವಾಗಿ ಸಿಆರ್‌ಆರ್‌ಸಿ ನಿರ್ಮಿಸಿದ ರೈಲು ನಮ್ಮ ಮೆಟ್ರೋಗೆ ಸೇರ್ಪಡೆ ಆಗುತ್ತಿದೆ. 

Tap to resize

Latest Videos

ಬಸ್‌ ಟಿಕೆಟ್‌ ಬಳಿಕ ಮೆಟ್ರೋ ದರವೂ ಹೆಚ್ಚಳ?

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ 18.82 ಕಿ.ಮೀ. ಅಂತರದಲ್ಲಿ ಈ ರೈಲು ಸಂಚರಿಸಲಿದೆ. ಈ ಮೂಲಕ ಹಳದಿ ಮಾರ್ಗದಲ್ಲಿ ಓಡಾಡಲು ಎರಡನೇ ರೈಲು ಬಂದಂತಾಗಲಿದೆ. ಟಿಆರ್‌ಎಸ್‌ಎಲ್‌ನಿಂದ ಇನ್ನೊಂದು ರೈಲು ಬಂದ ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ ವಾಣಿಜ್ಯ ಸಂಚಾರ ಆರಂಭಿಸುವ ಉದ್ದೇಶ ಹೊಂದಿದೆ. ಬಹುತೇಕ ಮಾರ್ಚ್ ಅಂತ್ಯಕ್ಕೆ ಇಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. 

ಚೀನಾದಿಂದ ಬಂದ ರೈಲಿನ 36 ಪರೀಕ್ಷೆಗಳು ಮುಗಿಯುತ್ತಿವೆ. ದೇಶಿಯವಾಗಿ ನಿರ್ಮಿಸಲಾದ ಕಾರಣ ಈಗ ಬರುವ ರೈಲನ್ನೂ ಕೂಡ ಹಲವು ಬಗೆಯ ತಪಾಸಣೆಗೆ ಒಳಪಡಿಸಲಾಗುವುದು. ರೈಲಿನ ವೇಗ, ತಿರುವಿ ನಲ್ಲಿ ಸಂಚಾರ, ನಿಲ್ದಾಣದಲ್ಲಿ ನಿಲುಗಡೆ, ನಿಲುಗಡೆ ಆಗುವಾಗ ವೇಗದ ಇಳಿಕೆ, ಬ್ರೇಕ್ ಸಿಸ್ಟಂ, ಸಿಗ್ನಲಿಂಗ್ ಸಿಸ್ಟಂ, ರೈಲಿನ ಒಳಗಡೆಯ ಸ್ಥಿತಿ ಸೇರಿ ಹಲವು ತಪಾಸಣೆ ಮಾಡಿಕೊಳ್ಳಲಾಗುವುದು. ರೈಲ್ವೇ ಮಂಡಳಿಯ ಸುರಕ್ಷತಾ ವಿಭಾಗ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ ಆಗಮಿಸಿ ಒಪ್ಪಿಗೆ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ ಬಹುತೇಕ ಈ ರೈಲು ಚಾಲಕ ಸಹಿತವಾಗಿಯೇ ಓಡಾಡಲಿದ್ದು, ನಂತರವಷ್ಟೇ ಚಾಲಕರಹಿತವಾಗಿ ಸಂಚರಿಸಲು ಬಿಎಂಆ‌ರ್ ಸಿಎಲ್ ಯೋಜಿಸಿದೆ. ದೆಹಲಿಯಲ್ಲೂ ಆರಂಭದಲ್ಲಿ 2 ವರ್ಷ ಚಾಲಕ ಸಹಿತವಾಗಿಯೇ ಚಾಲಕ ರಹಿತ ರೈಲು ಓಡಾಡಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು. 

ಸಿಆರ್‌ಆರ್‌ಸಿ ಕಂಪನಿಯ ಜೊತೆಗೆ ಒಟ್ಟು 36 ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಒದಗಿಸುವ ಒಪ್ಪಂ ದವಾಗಿತ್ತು. ಅದರಲ್ಲಿ ಸಿಬಿಟಿಸಿ ತಂತ್ರಜ್ಞಾನ ಹಾಗೂ ಡಿಟಿಜಿ ತಂತ್ರಜ್ಞಾನದ ತಲಾ ಒಂದು ಮೂಲ ಮಾದರಿ ರೈಲು ಚೀನಾದಿಂದ ಬರಲಿದೆ. ಉಳಿದ 34 ರೈಲುಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಭಾಗವಾಗಿ ಸಿಆರ್‌ಆರ್‌ಸಿ ಕೊಲ್ಕತ್ತಾದ ಟಿಆರ್‌ಎಸ್ ಎಲ್ ಕಂಪನಿ ಮೂಲಕ ಒದಗಿಸುತ್ತಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ತಿಳಿಸಿದರು. 

ಮೆಟ್ರೋ ಯೆಲ್ಲೋ ಲೈನ್‌ ವಿಳಂಬದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌, ಅಪ್‌ಡೇಟ್‌ ನೀಡಿದ BMRCL!

ಚೀನಾದಿಂದ ನೇರಳೆ ಮಾರ್ಗಕ್ಕಾಗಿ ಡಿಟಿಜಿ ತಂತ್ರಜ್ಞಾನದ ಮೂಲ ಮಾದರಿ ರೈಲು ಕೂಡ ಬರುತ್ತಿದೆ. ಏಪ್ರಿಲ್ ನಂತರ ತಿಂಗಳಿಗೆ 2 ರೈಲುಗಳು ಸೇರ್ಪಡೆ ಆಗಲಿವೆ.

ದೇಶಿ ಮೆಟ್ರೋ ರೈಲು 

• ಚಾಲಕರಹಿತ ಮೆಟ್ರೋ ರೈಲು ಪೂರೈಕೆ ಗುತ್ತಿಗೆ ಚೀನಾ ಕಂಪನಿಗೆ 
• ಚೀನಾದಿಂದ ಕೋಲ್ಕತ್ತಾದ ತೀತಾಘಡ ಕಂಪನಿಗೆ ಉಪಗುತ್ತಿಗೆ ನೀಡಿಕೆ 
• ಚೀನಾದಿಂದ ತಂತ್ರಜ್ಞಾನ ಪೂರೈಕೆ, ಭಾರತದಲ್ಲಿ ರೈಲು ನಿರ್ಮಾಣ 
# 36 ವಿವಿಧ ಪರೀಕ್ಷೆಗಳ ಬಳಿಕ ಸೇವೆಗೆ ನಿಯೋಜಿಸಲಿರುವ ನಿಗಮ 
• ಹಳದಿ ಮಾರ್ಗಕ್ಕೆ ಇದು 2ನೇ ರೈಲು, ಮಾರ್ಚ್ ವೇಳೆಗೆ ಸಂಚಾರ

click me!