
ಬೆಂಗಳೂರು: ಸಾಕ್ಷಿಧಾರನಾಗಿ ಬಂದಿದ್ದ ಅನಾಮಿಕ ಉರ್ಫ್ ಚಿನ್ನಯ್ಯ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿದ್ದಾನೆ. ಚಿನ್ನಯ್ಯ ನ್ಯಾಯಾಧೀಶರ ಮುಂದೆ ಹೇಳಿದ ಕೆಲವು ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ತಮಿಳುನಾಡಿನ ಇರೋಡ್‌ನ ಸ್ಪಿನ್ನಿಂಗ್ ಮಿಲ್‌ನಲ್ಲಿ ಚಿನ್ನಯ್ಯ ಕೆಲಸ ಮಾಡಿಕೊಂಡಿದ್ದನು. ಸೋದರಿ ಕರೆದಳು ಎಂಬ ಕಾರಣಕ್ಕೆ ಕೆಲಸ ಅರಸಿಕೊಂಡು ಉಜಿರೆಗೆ ಬರುತ್ತಾನೆ. ಇಲ್ಲಿ ಬಂದು ಕೆಲಸ ಮಾಡುತ್ತಿರುವಾಗ ಚಿನ್ನಯ್ಯನನ್ನು ಸೌಜನ್ಯ ಸೋದರಮಾವ ವಿಠಲ್ ಗೌಡ ಗುರುತಿಸುತ್ತಾನೆ. ನಂತರ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಮಹೇಶ್ ಶೆಟ್ಟಿ ತಿಮರೋಡಿ ಮುಂದೆ ನದಿಯಲ್ಲಿ ತೇಲಿಬಂದ ಅನಾಮಧೇಯ ಹೆಣಗಳನ್ನು ಹೂತಿರೋ ವಿಷಯ ಹೇಳುತ್ತಾನೆ. ಈತನ ಮಾತು ಕೇಳಿ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಖತರ್ನಾಕ್ ಪ್ಲಾನ್ ಮಾಡುತ್ತದೆ.
ಎರಡು ವರ್ಷಗಳ ಹಿಂದೆ ಚಿನ್ನಯ್ಯ ಮತ್ತೆ ಇರೋಡ್‌ಗೆ ಹೋಗುತ್ತಾನೆ. ಎರಡು ವರ್ಷದಿಂದ ಚಿನ್ನಯ್ಯನೊಂದಿಗೆ ಕುಡ್ಲ Rampage ಯುಟ್ಯೂಬ್ ಚಾನೆಲ್ ನ ಅಜಯ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮೆಟ್ಟನ್ನವರ್ ಗ್ಯಾಂಗ್ ಸಂಪರ್ಕದಲ್ಲಿರುತ್ತದೆ. ಜೂನ್ 18ರಂದು ಚಿನ್ನಯ್ಯನನ್ನು ಕರೆಸಿಕೊಳ್ಳಲಾಗುತ್ತದೆ. ಜಯಂತ್ ಟಿ. ತಂದುಕೊಟ್ಟ ಬುರುಡೆ ತೆಗೆದುಕೊಂಡು ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ದಾಖಲಿಸುತ್ತಾನೆ. ನಂತರ ಸರ್ಕಾರ ಎಸ್‌ಐಟಿ ರಚನೆ ಮಾಡುತ್ತದೆ.
ಎಸ್‌ಐಟಿ ರಚನೆಯಾದಗಿನಿಂದ ಚಿನ್ನಯ್ಯನ ಸುತ್ತ ನಾಲ್ಕೈದು ವಕೀಲರು ಇರುತ್ತಾರೆ. ಒಂದು ದಿನ ವಕೀಲರು ಇಲ್ಲದ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ಸತ್ಯ ಹೇಳೋದಾಗಿ ಹೇಳುತ್ತಾನೆ. ಅಷ್ಟರಲ್ಲಿಯೇ ವಕೀಲರು ಬರುತ್ತಾರೆ. ಈ ವಿಷಯ ತಿಳಿದು ಮಹೇಶ್ ಶೆಟ್ಟಿ ತಿಮರೋಡಿ ರಾತ್ರಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸುತ್ತದೆ. ಇಲ್ಲಿಂದ ತಾನು ಜಾಲವೊಂದರಲ್ಲಿ ಸಿಲುಕಿರೋದು ಚಿನ್ನಯ್ಯನಿಗೆ ಗೊತ್ತಾಗುತ್ತದೆ. ಚಿನ್ನಯ್ಯನಿಗೆ ದಿನಕ್ಕೆ 4 ಹೊತ್ತು ಊಟ ಮಾಡುವ ವೀಕ್‌ನೆಸ್ ಇತ್ತು. ಅದು ಊಟ ರುಚಿಯಾಗಿರಬೇಕು. ಈ ವೀಕ್‌ನೆಸ್‌ನನ್ನು ತಿಮರೋಡಿ ಗ್ಯಾಂಗ್ ಬಳಸಿಕೊಂಡಿತ್ತು.
ಎಸ್‌ಐಟಿ ಗುಂಡಿಗಳನ್ನು ಅಗೆದ್ರೂ ಯಾವುದೇ ಕಳೇಬರ ಸಿಗದಿದ್ದಾಗ ತಿಮರೋಡಿ ಗ್ಯಾಂಗ್ ಒತ್ತಡದಲ್ಲಿ ಸಿಲುಕುತ್ತದೆ. ಚಿನ್ನಯ್ಯನ ಮೇಲೆ ಆಕ್ರೋಶ ಹೊರಹಾಕುತ್ತದೆ. ಪ್ರತಿದಿನ ಎಸ್‌ಐಟಿ ತನಿಖೆ, ರಾತ್ರಿಯಾದ್ರೆ ತಿಮರೋಡಿ ಗ್ಯಾಂಗ್ ಚಿನ್ನಯ್ಯನಿಗೆ ಕಿರುಕುಳ ನೀಡುತ್ತದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ತಿಮರೋಡಿ ಬಂಧನವಾಗುತ್ತದೆ. ಈ ಸಮಯದಲ್ಲಿ ಚಿನ್ನಯ್ಯನ ಸುತ್ತಲಿದ್ದ ವಕೀಲರ ಸಂಖ್ಯೆಯೂ ಕಡಿಮೆಯಾಗುತ್ತದೆ. ಶುಕ್ರವಾರ ಚಿನ್ನಯ್ಯನ ಜೊತೆ ವಕೀಲ ಸಚಿನ್ ದೇಶಪಾಂಡೆ ಮಾತ್ರ ಬಂಧಿದ್ದರು. ಮಧ್ಯಾಹ್ನದ ವೇಳೆಗೆ ಚಿನ್ನಯ್ಯನನ್ನು ಆರೋಪಿಯನ್ನಾಗಿ ವಶಕ್ಕೆ ಪಡೆದುಕೊಳ್ಳುತ್ತಿರೋ ಮಾಹಿತಿಯನ್ನು ವಕೀಲರಿಗೆ ಎಸ್‌ಐಟಿ ಅಧಿಕಾರಿಗಳು ಹೇಳುತ್ತಾರೆ.
ಇಂದು ಬೆಳಗಿನ ಜಾವ 5 ಗಂಟೆಯವರೆಗೆ ಎಲ್ಲಾ ಪ್ರಕ್ರಿಯೆಗಳನ್ನು ಮಾಡಿಕೊಂಡ ಎಸ್‌ಐಟಿ, 9 ಗಂಟೆಗೆ ನ್ಯಾಯಾಧೀಶರ ಮುಂದೆ ಚಿನ್ನಯ್ಯನನ್ನು ಹಾಜರುಪಡಿಸಲಾಗುತ್ತದೆ. ಈ ವೇಳೆ ಚಿನ್ನಯ್ಯ, ಇಷ್ಟು ದಿನ ನನ್ನೊಂದಿಗಿದ್ದ ವಕೀಲರು ಬೇಡ ಎಂದು ಮನವಿ ಮಾಡಿಕೊಳ್ಳುತ್ತಾನೆ. ಸರ್ಕಾರಿ ವಕೀಲರನ್ನು ನೀಡಿ ಎಂದು ಚಿನ್ನಯ್ಯ ಮನವಿ ಮಾಡಿಕೊಳ್ಳುತ್ತಾನೆ. ಟ್ರಯಲ್ ನ್ಯಾಯಾಧೀಶರ ಮುಂದೆ BNS 183 ಹೇಳಿಕೆ ದಾಖಲಿಸಲು ಆಗಲ್ಲ. ಹಾಗಾಗಿ ಎರಡಮೂರು ದಿನದಲ್ಲಿ ಹೇಳಿಕೆ ದಾಖಲಾಗಿಸಲಾಗುತ್ತೆ ಎಂದು ತಿಳಿದು ಬಂದಿದೆ.