ಉಡುಪಿಯನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸಲು, ಜಿಲ್ಲಾ ಪೋಲಿಸ್ ನೇತೃತ್ವದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿದ್ದೇವೆ. ಆರೋಪಿತ ವಿದ್ಯಾರ್ಥಿಗಳನ್ನು ಅವರ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ವಿದ್ಯಾಸಂಸ್ಥೆಯಿಂದ ಅಮಾನತು ಮಾಡಿ, ಪ್ರಕರಣ ಇತ್ಯರ್ಥವಾಗುವವರೆಗೆ ಅಮಾನಲ್ಲಿಡಬೇಕು ಎಂದು ಕಾಲೇಜ್ ಆಡಳಿತ ಮಂಡಳಿ ಜೊತೆ ಚರ್ಚಿಸಲಾಗಿದೆ.
ಉಡುಪಿ (ಫೆ.16): ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸಲು, ಜಿಲ್ಲಾ ಪೋಲಿಸ್ ನೇತೃತ್ವದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿದ್ದೇವೆ. ಆರೋಪಿತ ವಿದ್ಯಾರ್ಥಿಗಳನ್ನು ಅವರ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ವಿದ್ಯಾಸಂಸ್ಥೆಯಿಂದ ಅಮಾನತು ಮಾಡಿ, ಪ್ರಕರಣ ಇತ್ಯರ್ಥವಾಗುವವರೆಗೆ ಅಮಾನಲ್ಲಿಡಬೇಕು ಎಂದು ಕಾಲೇಜ್ ಆಡಳಿತ ಮಂಡಳಿ ಜೊತೆ ಚರ್ಚಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದರು. ಅವರು ಉಡುಪಿಯಲ್ಲಿ ಮಾತನಾಡಿ, ಮಾದಕ ದ್ರವ್ಯವನ್ನು ಸಾಗಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಕಾಲೇಜ್, ಹಾಸ್ಟೆಲ್ ಗಳಲ್ಲಿ ಮಾದಕ ದ್ರವ್ಯವನ್ನು ಮಾರಾಟ ಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ, ಕ್ರಮ ಜರುಗಿಸಲಾಗುತ್ತಿದೆ ಎಂದರು
ಮಣಿಪಾಲ ವಿದ್ಯಾಸಂಸ್ಥೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸ ಮಾಡುತ್ತಿರುವ ಮಧ್ಯಪ್ರದೇಶ ಮೂಲದ ವಿದ್ಯಾರ್ಥಿ 4.50 ಕೆಜಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದೇವೆ. ರಾಜಸ್ತಾನ, ಮಧ್ಯಪ್ರದೇಶ, ದೆಹಲಿಯಿಂದ ಗಾಂಜಾವನ್ನು ಖರೀದಿಸಿ, ಮಣಿಪಾಲದಲ್ಲಿ ಮಾರಾಟ ಮಾಡುವ ಜಾಲದಲ್ಲಿ ತೊಡಗಿದ್ದನು. ಅವರನ್ನು ಕಾಲೇಜಿನ ಆಡಳಿತ ಮಂಡಳಿ ಈಗಾಗಲೇ ಅಮಾನತಿನಲ್ಲಿಟ್ಟು, ಜಿಲ್ಲಾ ಪೋಲಿಸ್ ಮನವಿಗೆ ಸ್ಪಂದಿಸಿದ್ದಾರೆ ಎಂದವರು ಹೇಳಿದರು.
undefined
2022 ರ ಡಿಸೆಂಬರ್ 31 ರಂದು ಖಚಿತ ಮಾಹಿತಿ ಆಧರಿಸಿ, ಪಾರ್ಸೆಲ್ ನಲ್ಲಿ ತರುತ್ತಿದ್ದ ಸ್ಮಾರ್ಟ್ ವಾಚ್ ಅನ್ನು ಪರಿಶೀಲಿಸಿದಾಗ, ಅದರ ಬಾಕ್ಸ್ ನ ಸ್ಟ್ರಿಪ್ಸ್ ನಲ್ಲಿ ಎಮ್.ಡಿ.ಎಮ್.ಎ ಮಾದಕ ದ್ರವ್ಯ ಪತ್ತೆಯಾಗಿದೆ. ಮಹಾರಾಷ್ಟ್ರ ಚಂದ್ರಪುರ ಮೂಲದವನಾದ ಈತ ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈತನನ್ನು ಕಾಲೇಜ್ ಆಡಳಿತ ಮಂಡಳಿ ಅಮಾನತುಗೊಳಿಸಿದೆ ಎಂದರು.
Udupi: ಗಾಂಜಾ ಮತ್ತಿನಲ್ಲಿ ದರೋಡೆ: ಆರೋಪಿಗಳ ಹೆಡೆಮುರಿಕಟ್ಟಿದ ಪೊಲೀಸ್ ಪಡೆ
ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲಕ್ಕೆ ಸಂಭಂದಿಸಿದಂತೆ ಬಂಧನವಾದ ವೈದ್ಯರ ಪ್ರಕರಣ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲದ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಮಾರಾಟ ಮಾಡುವವರ ಜಾಡು ಹಿಡಿದು ಬಂಧಿಸುವಲ್ಲಿ ಜಿಲ್ಲಾ ಪೋಲಿಸ್ ಶ್ರಮವಹಿಸುತ್ತಿದೆ ಎಂದು ಎಸ್ಪಿ ಅಕ್ಷಯ್ ಹೇಳಿದರು.
Udupi: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ರಕ್ತದ ಗುಂಪು ಬಾಂಬೆ ಫಿನೋಟೈಪ್ ಇರುವ ಗರ್ಭಿಣಿಯ ಯಶಸ್ವಿ ನಿರ್ವಹಣೆ
ವಿದ್ಯಾರ್ಥಿಗಳ ಜೀವನ ಹಾಳು ಮಾಡುವ ಉದ್ದೇಶ ಪೋಲಿಸರಿಗಿಲ್ಲ. ಕಾನೂನಿನ ಪ್ರಕಾರ ಗಾಂಜಾ, ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡುವವರಿಗೆ ಶಿಕ್ಷೆಯಾಗುತ್ತದೆ. ಆದರೆ ಕಾಲೇಜಿನಿಂದ ಅಮಾನತು ಮಾಡದೇ ಹೋದಲ್ಲಿ, ಆರೋಪಿತ ವಿದ್ಯಾರ್ಥಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಭಯ ಹುಟ್ಟುವುದಿಲ್ಲ. ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿದರೇ, ಕಾಲೇಜ್ ನಿಂದ ಬೆಂಬಲ ಸಿಗುವುದಿಲ್ಲ ಎಂಬುದು ತಿಳಿಯಬೇಕಾದರೇ ಅಮಾನತು ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದ ಎಸ್ಪಿ ಅಕ್ಷಯ್, ಹೊರ ರಾಜ್ಯ, ರಾಷ್ಟ್ರಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕೆಂದು ಕಳುಹಿಸಿ, ಭವಿಷ್ಯವನ್ನು ಕಟ್ಟಿಕೊಡುವ ತಂದೆ ತಾಯಿಯಂದಿರಿಗೇ ಒಳ್ಳೆಯ ಮಕ್ಕಳಾಗಿ ಎಂದು ಕಿವಿಮಾತು ಹೇಳಿದರು.