ಬೆಂಗಳೂರಿನ ಮಾಂಸಪ್ರಿಯರಿಗೆ ಶಾಕ್‌: ವೀಕೆಂಡ್‌ನಲ್ಲಿ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

Published : Feb 16, 2023, 01:32 PM ISTUpdated : Feb 16, 2023, 01:47 PM IST
ಬೆಂಗಳೂರಿನ ಮಾಂಸಪ್ರಿಯರಿಗೆ ಶಾಕ್‌:  ವೀಕೆಂಡ್‌ನಲ್ಲಿ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

ಸಾರಾಂಶ

ಫೆಬ್ರವರಿ 18 ರಂದು ಮಹಾ ಶಿವರಾತ್ರಿ ಹಬ್ಬ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳನ್ನು ಬಂದ್‌ ಮಾಡಲಾಗುತ್ತಿದ್ದು, ಎಲ್ಲ ರೀತಿಯ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ.

ಬೆಂಗಳೂರು (ಫೆ.16): ಫೆಬ್ರವರಿ 18 ರಂದು ಮಹಾ ಶಿವರಾತ್ರಿ ಹಬ್ಬ ಹಿನ್ನಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ (ಬಿಬಿಎಂಪಿ) ವ್ಯಾಪ್ತಿಯ ಎಲ್ಲ ಕಸಾಯಿಖಾನೆಗಳನ್ನು ಬಂದ್‌ ಮಾಡಲಾಗಿರುತ್ತದೆ. ಜೊತೆಗೆ, ಯಾವುದೇ ರೀತಿಯ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಧಾರ್ಮಿಕ ಆಚರಣೆಯಾದ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಫೆಬ್ರವರಿ 18 ರಂದು ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿ ವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ದಿನವಾದ ಶನಿವಾರ ಎಲ್ಲ ರೀತಿಯ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಈ ಬಗ್ಗೆ ಯಾರೊಬ್ಬರೂ ನಿಯಮ ಹಾಗೂ ಪಾಲಿಕೆಯ ಆದೇಶವನ್ನು ಉಲ್ಲಂಘನೆ ಮಾಡಬಾರದು ಎಂದು ಬಿಬಿಎಂಪಿ ಪಶುಪಾಲನೆಯ ಜಂಟಿ ನಿರ್ದೇಶಕ ರವಿಕುಮಾರ್ ಆದೇಶಿಸಿದ್ದಾರೆ.

BBMP: ಬಾಕಿ ಪಾವತಿಗಾಗಿ ಮತ್ತೆ ಬೀದಿಗೆ ಇಳಿದ ಪಾಲಿಕೆ ಗುತ್ತಿಗೆದಾರರು

ಮಾಂಸಪ್ರಿಯರಿಗೆ ಶಾಕ್‌: ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸುಮಾರು 10 ಸಾವಿರಕ್ಕೂ ಅಧಿಕ ಕುರಿ, ಆಡು, ಮೇಕೆಗಳನ್ನು ವಧೆ ಮಾಡಿ ಮಾಂಸ ಸರಬರಾಜು ಮಾಡುತ್ತಿದ್ದವರಿಗೆ ಹಿನ್ನಡೆ ಉಂಡಾಗಿದೆ, ಮತ್ತೊಂದೆಡೆ ವೀಕೆಂಡ್‌ ದಿನಗಳಾದ ಶನಿವಾರ ಮಾಂಸ ಸೇವನೆ ಮಾಡುವ ಅಭ್ಯಾಸ ಹೊಂದಿದವರಿಗೆ ಬಿಬಿಎಂಪಿ ಆದೇಶ ಶಾಕ್‌ ನೀಡಿದೆ. ಇನ್ನು ಹೋಟೆಲ್‌ಗಳಲ್ಲಿಯೂ ಮಾಂಸದೂಟ ಸೇವನೆಗೆ ಸಮಸ್ಯೆ ಎದುರಾಗಲಿದೆ. ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿಕೊಂಡು ಸೇವನೆ ಮಾಡಬೇಕು ಎನ್ನುವವರಿಗೂ ಬಿಬಿಎಂಪಿ ಆದೇಶದಿಂದ ಅತೃಪ್ತಿ ಕಾಡುವಂತಾಗಿದೆ.

ಅನಧಿಕೃತ ಪ್ರಾಣಿವಧೆ ಮೇಲೆ ಹದ್ದಿನ ಕಣ್ಣು: ಅನಧಿಕೃತವಾಗಿ ಪ್ರಾಣಿವಧೆ ಮಾಡಿ ಮಾಂಸ ಮಾರಾಟ ಮಾಡುವುದರ ಮೇಲೆಯೂ ಬಿಬಿಎಂಪಿ ಹದ್ದಿನ ಕಣ್ಣು ಇಟ್ಟಿದ್ದು, ಮಾರ್ಷಲ್‌ಗಳು ಗಸ್ತು ತಿರುತಗುತ್ತಾರೆ. ಈ ವೇಳೆ ಅನಧಿಕೃತ ಪ್ರಾಣಿವಧೆ, ಮಾಂಸ ಮಾರಾಟ ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಅಥವಾ ಮಾಂಸ ಮಾರಾಟ ಮಳಿಗೆಯ ಪರವಾನಗಿ ರದ್ದುಗೊಳಿಸಬಹುದು. ಹೀಗಾಗಿ, ಪ್ರತಿನಿತ್ಯ ಮಾಂಸ ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳು ಕೂಡ ಯಾವುದೇ ವ್ಯಾಪಾರ ವಹಿವಾಟು ನಡೆಸದೇ ಮುಚ್ಚಿರುತ್ತವೆ. 

Bengaluru news: ಸ್ಯಾಂಕಿ ಕೆರೆ ಫ್ಲೈಓವರ್‌ನ ಭವಿಷ್ಯ ಭೂ ಸಾರಿಗೆ ಪ್ರಾಧಿಕಾರ ಅಂಗಳಕ್ಕೆ

ಯಲಹಂಕದಲ್ಲಿ 20 ದಿನ ಮಾಂಸ ಮಾರಾಟ ನಿಷೇಧ: ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಮಾಂಸ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಮುಂದಿನ 20 ದಿನಗಳ ಕಾಲ ಬೆಂಗಳೂರಿನಲ್ಲಿ ಈ ಭಾಗದಲ್ಲಿ ಮಾಂಸ ಮಾರಾಟ  ಮಾಡುವಂತಿಲ್ಲ. ಬಿಬಿಎಂಪಿ ಯಲಹಂಕ ಝೋನ್​ನಲ್ಲಿ  ಮಾಂಸ ಮಾರಾಟ ಬ್ಯಾನ್ ಮಾಡಲಾಗಿದೆ. ಯಲಹಂಕ ವಲಯದ ಸುತ್ತಲೂ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶ ಪ್ರಕಟಿಸಿತ್ತು. ಈ ಆದೇಶ ಇನ್ನೂ ಚಾಲ್ತಿಯಲ್ಲಿದೆ. ಅದರ ನಡುವೆಯೇ ಈಗ ಪಾಲಿಕೆ ವ್ಯಾಪ್ತಿಯ ಎಲ್ಲ ಭಾಗಗಳಲ್ಲಿ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ.

ಹೋಟೆಲ್, ಡಾಬಾಗಳಲ್ಲೂ ಮಾಂಸಾಹಾರ ಇರಲ್ಲ: ಈ 20 ದಿನಗಳ ಅವಧಿಯಲ್ಲಿ ಯಲಹಂಕ ವಲಯದಲ್ಲಿ ಎಲ್ಲಾ ತರಹದ ಮಾಂಸ ಮಾರಾಟ ನಿಷೇಧಿಸಲಾಗಿದೆ. ಜೊತೆಗೆ, ಹೋಟೆಲ್ ಹಾಗೂ ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಮಾಡಿತ್ತು. 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ