ಮೈಸೂರಿಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧಿ

By Web DeskFirst Published Oct 2, 2018, 5:47 PM IST
Highlights

1934 ರಲ್ಲಿ ನಂಜನಗೂಡು ತಾಲೂಕು ಬದನವಾಳಿನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ, ಮೈಸೂರಿನ ಕೆ.ಆರ್. ಮಿಲ್, ಲ್ಯಾನ್ಸ್‌ಡೌನ್ ಕಟ್ಟಡ ಮೊದಲಾದ ಕಡೆ ಭೇಟಿ ನೀಡಿದ್ದರು. ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರವಿದೆ. ಗಾಂಧೀಜಿ ಗ್ರಾಮಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಆವರಣದಲ್ಲಿ ಗಾಂಧಿ ಪುತ್ಥಳಿ ಇದೆ. ಅಲ್ಲದೇ ಇದಿಯಮ್ಮ ದೇವಸ್ಥಾನದ ಎದುರು ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. 

ಮೈಸೂರು[ಅ.02]: ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನರನ್ನು ಪ್ರೇರೇಪಿಸಲು ರಾಷ್ಟ್ರಪತಿ ಮಹಾತ್ಮ ಗಾಂಯವರು ಇಡೀ ದೇಶಾದ್ಯಂತ ಪ್ರವಾಸ ಡುತ್ತಿದ್ದರು. ಮೂವತ್ತರ ದಶಕದಲ್ಲಿ ಎರಡು ಬಾರಿ ಮೈಸೂರಿಗೆ ಭೇಟಿ ನೀಡಿದ್ದರು. 

1934 ರಲ್ಲಿ ನಂಜನಗೂಡು ತಾಲೂಕು ಬದನವಾಳಿನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ, ಮೈಸೂರಿನ ಕೆ.ಆರ್. ಮಿಲ್, ಲ್ಯಾನ್ಸ್‌ಡೌನ್ ಕಟ್ಟಡ ಮೊದಲಾದ ಕಡೆ ಭೇಟಿ ನೀಡಿದ್ದರು. ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರವಿದೆ. ಗಾಂಧೀಜಿ ಗ್ರಾಮಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಆವರಣದಲ್ಲಿ ಗಾಂಧಿ ಪುತ್ಥಳಿ ಇದೆ. ಅಲ್ಲದೇ ಇದಿಯಮ್ಮ ದೇವಸ್ಥಾನದ ಎದುರು ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. 2015ರ ಏಪ್ರಿಲ್‌ನಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಖಾದಿ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವಂತೆ ಆಗ್ರಹಿಸಿ ಬದನವಾಳು ಸತ್ಯಾಗ್ರಹ ನಡೆಸಿದ್ದರು. ಆ ಸಂದರ್ಭದಲ್ಲಿ ಇಡೀ ರಾಜ್ಯದ ಗಮನ ಬದನವಾಳು ಸತ್ಯಾಗ್ರಹದ ಮೇಲಿತ್ತು.

ಮೈಸೂರು ಭಾಗದ ಹಿರಿಯ ಸ್ವಾತಂತ್ರ್ಯಹೋರಾಟಗಾರರಾಗಿದ್ದ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ವಿಜೇತರೂ ಆದ ದಿ. ತಗಡೂರು ರಾಮಚಂದ್ರರಾವ್ ಅವರು ಗಾಂಧಿ ಅವರನ್ನು ಮೈಸೂರಿನ ಹೃದಯ ಭಾಗದಲ್ಲಿರುವ ಖದ್ದರ್ ಕೋ- ಆಪ್ ಸೊಸೈಟಿಗೆ ಕರೆ ತಂದಿದ್ದರು. 1925 ರಲ್ಲಿ ಈ ಸೊಸೈಟಿ ಆರಂಭಕ್ಕೆ ತಾತಯ್ಯ ಎಂದೇ ಖ್ಯಾತರಾದ ‘ವೃದ್ಧಾ ಪಿತಾಮಹ’ ಎಂ. ವೆಂಕಟಕಷ್ಣಯ್ಯ ಕಾರಣಕರ್ತರು. ತಗಡೂರು ರಾಮಚಂದ್ರ ರಾವ್, ತಗಡೂರು ಸುಬ್ಬಣ್ಣ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರು ಅಲ್ಲಿಗೆ ಬರುತ್ತಿದ್ದರು.

ಈ ಸೊಸೈಟಿಯ  ಅಧ್ಯಕ್ಷರಾಗಿದ್ದ ಶ್ರೀನಿವಾಸ್ ಅವರ ಪ್ರಕಾರ, ಗಾಂಧೀಜಿಯವರನ್ನು ತಗಡೂರು ರಾಮಚಂದ್ರರಾವ್ ಅವರು ಮೂವತ್ತರ ದಶಕದಲ್ಲಿ ಸೊಸೈಟಿಗೆ ಕರೆ ತಂದಿದ್ದು ನಿಜ. ಆದರೆ ಸೊಸೈಟಿಯಲ್ಲಿ ಇದಕ್ಕೆ ಯಾವುದೇ ಫೋಟೋ ಅಥವಾ ದಾಖಲೆ ಇಲ್ಲ. ಕಳೆದ 93 ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಸೊಸೈಟಿಗೆ ಮಹಾತ್ಮಗಾಂಧಿಯವರು ಬಂದಿದ್ದನ್ನು ಆಡಳಿತ ಮಂಡಳಿಯ ಸದಸ್ಯರು ಕಾಲಾನುಕಾಲಕ್ಕೆ  ಪ್ರಸ್ತಾಪಿಸುತ್ತಲೇ ಬಂದಿದ್ದಾರೆ.

ಮೈಸೂರಿನಲ್ಲಿ ಪುರಭವನ ಪಕ್ಕದ ಗಾಂಧಿ ಚೌಕದಲ್ಲಿ ಗಾಂಧಿ ಪ್ರತಿಮೆ, ನ್ಯಾಯಾಲಯದ ಎದುರು ಗಾಂಧಿ ಪುತ್ಥಳಿ, ಜೆಎಸ್‌ಎಸ್ ಆಸ್ಪತ್ರೆಯಿಂದ ರೇಸ್‌ಕೋರ್ಸ್ ಕಡೆಗೆ ಸಾಗುವ ರಸ್ತೆಗೆ ಮಹಾತ್ಮಾಗಾಂಧಿ ರಸ್ತೆ ಎಂಬ ಹೆಸರಿದೆ. ಉದಯಗಿರಿ ಬಡಾವಣೆಯಲ್ಲಿಯೂ ಮಹಾತ್ಮಗಾಂಧಿ ರಸ್ತೆ ಇದೆ. ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಗಾಂಧಿ ಭವನ, ಗಾಂಧಿ ಅಧ್ಯಯನ ಕೇಂದ್ರ ಇದೆ.
 

click me!