15 ವರ್ಷ ತುಂಬದ ಕೆರೆ, 2 ದಿನದಲ್ಲಿ ಭರ್ತಿ

By Web DeskFirst Published Oct 1, 2018, 6:33 PM IST
Highlights

ಈ ಕೆರೆ ತುಂಬಿರುವುದರಿಂದ ಬೆಟ್ಟದರಪುರದ ಪ್ರಸಿದ್ಧ ಜಾನುವಾರುಗಳ ಜಾತ್ರೆ ಮತ್ತು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅನುಕೂಲವಾಗಲಿದೆ

ಬೆಟ್ಟದ ಪುರ[ಅ.01]: ಹದಿನೈದು ವರ್ಷಗಳಿಂದ ತುಂಬದ ತಾವರೆಕೆರೆ ಒಂದೆರಡು ದಿನಗಳಲ್ಲಿ ಮಳೆಯಿಂದ ತುಂಬಿ ಹರಿದ ಈ ಸಮಯದಲ್ಲಿ ಈ ಭಾಗದ ರೈತರಿಗೆಲ್ಲಾ ಶುಭವಾಗಲಿ ಎಂದು ಶಾಸಕ ಕೆ. ಮಹದೇವ್ ಹಾರೈಸಿದರು.

ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಕುಶಾಲನಗರ ರಸ್ತೆಯಲ್ಲಿರುವ ತಾವರೆಕೆರೆ ಪಕ್ಕದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಮತ್ತು ಗಂಗೆ ಪೂಜೆ ಸಲ್ಲಿಸಿ, ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಇದರಿಂದ ಈ ಭಾಗದ ರೈತರು ತಮ್ಮ ಕೃಷಿಗೆ ಅನುಕೂಲವಾಗಿದ್ದು, ಕೆರೆಯ ನೀರನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಹಾರಂಗಿ ಇಲಾಖೆಯ ಅಕಾರಿಗಳು ರೈತರಿಗೆ ಯಾವ ರೀತಿ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.

ಜಾತ್ರೆಗೆ ಅನುಕೂಲ: 
ಈ ಕೆರೆ ತುಂಬಿರುವುದರಿಂದ ಬೆಟ್ಟದರಪುರದ ಪ್ರಸಿದ್ಧ ಜಾನುವಾರುಗಳ ಜಾತ್ರೆ ಮತ್ತು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅನುಕೂಲ ಎಂದು ಇಲ್ಲಿನ ಸಾರ್ವಜನಿಕರು ತಿಳಿಸಿದರು.

ಶಾಸಕರು ಬಂದಾಗ ಬೆಟ್ಟದಪುರದ ಗ್ರಾಮಸ್ಥರು ಸೆಸ್ಕ್ ಕಚೇರಿಯಿಂದ ತಾವರೆಕೆರೆ ತನಕ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸ್ವಾಗತಿಸಿದರು. ಶಾಸಕರ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೆಟ್ಟದಪುರದ ಮುಖ್ಯ ರಸ್ತೆಯಲ್ಲಿ ಇಲ್ಲಿನ ಜನರು ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಿದರು. 

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಕೆ.ಎಸ್. ಮಂಜುನಾಥ್, ರುದ್ರಮ್ಮ ನಾಗರಾಜು, ಬೆಟ್ಟದಪುರ ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ಗೀತಾ, ಸದಸ್ಯರಾದ ಅಯ್ಯರ್‌ಗಿರಿ, ಸುಮತಿ ಮಂಜುನಾಥ್, ರಾಜಶೇಖರ್, ಉದಯ, ಯುವ ಜೆಡಿಎಸ್ ಅಧ್ಯಕ್ಷ ವಿದ್ಯಾಶಂಕರ್, ಪಿಎಸಿಸಿಎಸ್ ನಿರ್ದೇಶಕ ಗಿರಿಗೌಡ, ಗಿರೀಶ್, ಶಿವು, ರಾಜು, ರೈತ ಮುಖಂಡ ಬಿ.ಜೆ. ದೇವರಾಜು, ಪ್ರೀತಿ ಅರಸ್, ಶಹಿದಾ ಬಾನು, ಕುಶಾಲ್, ಪಿಡಿಒ ಚಿದಾನಂದ್, ಹಾರಂಗಿ ಇಲಾಖೆಯ ಎಇ ರಾಜೇಗೌಡ, ಅರ್ಚಕ ಸತೀಶ್ ಕಶ್ಯಪ್, ಶಿಕ್ಷಕರಾದ ಬಿ.ಸಿ. ಮಹದೇವಪ್ಪ, ನಾಗಣ್ಣೇಗೌಡ, ರಮೇಶ್, ಕರೀಗೌಡ ಇದ್ದರು.
 

click me!