ಗಾಣಗಾಪುರ: ಭೀಮಾ ನದಿಯಲ್ಲಿ ಮುಳುಗಿ ಮಹಾರಾಷ್ಟ್ರದ ಇಬ್ಬರು ಭಕ್ತರ ದುರ್ಮರಣ..!

By Girish Goudar  |  First Published Sep 27, 2024, 12:55 PM IST

ನದಿಯ ಆಳ ಲೆಕ್ಕಿಸದೇ ಇಬ್ಬರು ಭಕ್ತರು ನೀರಿಗೆ ಇಳಿದಿದ್ದರು. ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ. ಮೃತರು ಮಹಾರಾಷ್ಟ್ರದ ಉದಗೀರ್ ಮೂಲದವರಾಗಿದ್ದಾರೆ. 


ಕಲಬುರಗಿ(ಸೆ.27): ಭೀಮಾ ನದಿಯಲ್ಲಿ ಮುಳುಗಿ ಇಬ್ಬರು ಭಕ್ತರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಬಾಲಾಜಿ ಡೊಯಿಜೋಡೆ (49) ಮತ್ತು ಮಹೇಶ್ ಡೊಯಿಜೋಡೆ (47) ಮೃತ ದುರ್ದೈವಿಗಳು. 

ನದಿಯ ಆಳ ಲೆಕ್ಕಿಸದೇ ಇಬ್ಬರು ಭಕ್ತರು ನೀರಿಗೆ ಇಳಿದಿದ್ದರು. ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. 

Tap to resize

Latest Videos

undefined

ಸನಾತನ ಧರ್ಮದ ರಕ್ಷಣೆಯೇ ನಾವು ಮಾಡಲಿಲ್ಲ ಅಂದ್ರೆ, ಹಿಂದೂ ಆಗಿ ಏನು ಪ್ರಯೋಜನ: ಮಾಧವಿ ಲತಾ

ಮೃತರು ಮಹಾರಾಷ್ಟ್ರದ ಉದಗೀರ್ ಮೂಲದವರಾಗಿದ್ದಾರೆ. ಇವರು ಗಾಣಗಾಪುರದ ದತ್ತಾತ್ರೇಯ ದೇವರ ದರ್ಶನ ಪಡೆಯಲು ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!