Bengaluru: ಬೀದಿನಾಯಿಗಳಿಗೆ ಬಿಬಿಎಂಪಿಯಿಂದಲೇ ಆಹಾರ?

By Santosh NaikFirst Published Sep 27, 2024, 11:21 AM IST
Highlights

ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಮನುಷ್ಯರ ಮೇಲೆ ದಾಳಿ ನಡೆಸುವುದನ್ನು ತಡೆಯಲು ಬಿಬಿಎಂಪಿ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ. ಹೋಟೆಲ್‌ಗಳಲ್ಲಿ ಉಳಿದ ಆಹಾರವನ್ನು ಬೀದಿನಾಯಿಗಳಿಗೆ ನೀಡುವ ಮೂಲಕ ಅವುಗಳ ಹಸಿವನ್ನು ನೀಗಿಸಿ, ದಾಳಿಯ ಪ್ರಕರಣಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಬೆಂಗಳೂರು (ಸೆ.27): ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿನಾಯಿಗಳು ಮನುಷ್ಯರಿಗೆ ಕಚ್ಚುತ್ತಿರುವ ಹೇರಳ ಪ್ರಕರಣಗಳ ನಡುವೆ ಇನ್ನು ಮುಂದೆ ಬಿಬಿಎಂಪಿಯಿಂದಲೇ ಬೀದಿನಾಯಿಗಳಿಗೆ ಆಹಾರ ಪೂರೈಕೆ ಮಾಡುವ ಚಿಂತನೆ ಬಂದಿದೆ. ಬೀದಿ ನಾಯಿಗಳಿಗೆ ಆಹಾರ ಪೂರೈಕೆಗೆ ಬಿಬಿಎಂಪಿ ಚಿಂತನೆ ಮಾಡುತ್ತಿದೆ. ಹೋಟೆಲ್‌ಗಳಲ್ಲಿ ಉಳಿದ ಆಹಾರ  ಬೀದಿನಾಯಿಗಳಿಗೆ ವಿತರಣೆ ಮಾಡಲು ಬಿಬಿಎಂಪಿ ಯೋಚನೆ ಮಾಡುತ್ತಿದೆ ಎನ್ನಲಾಗಿದೆ. ಹಸಿವಿನ ಕಾರಣಕ್ಕೆ ಮನುಷ್ಯರ ಮೇಲೆ ಬೀದಿನಾಯೊಗಳು ದಾಳಿ ನಡೆಸಲಾಗುತ್ತಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಲು ಬಿಬಿಎಂಪಿ ಮುಂದಾಗಿದೆ.

ಬೀದಿನಾಯಿಗಳು ಹಸಿವಿನಿಂದ ಕಂಗೆಟ್ಟಾಗಲೇ ಮನುಷ್ಯರ ಮೇಲೆ ದಾಳಿ ನಡೆಸುತ್ತದೆ. ಅವುಗಳಿಗೆ ಸಮರ್ಪಕ ಆಹಾರ ನೀಡಿದಲ್ಲಿ ಹೀಗಾಗುವ ಅಪಾಯ ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕೆ ಬಿಬಿಎಂಪಿಗೆ ಈ ಚಿಂತನೆ ಬಂದಿದೆ. ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ 'ಅನಿಮಲ್ ವೆಲ್‌ಫೇ‌ರ್ ಕಮಿಟಿ' ರಚನೆ ಮಾಡುವ ಸಾಧ್ಯತದೆ ಇದೆ. ಬೀದಿ ನಾಯಿಗಳು ಹಾವಳಿ ಹೆಚ್ಚಾಗಿದ್ದು, ಮನುಷ್ಯರಿಗೆ ಕಡಿಯುವ ಪ್ರಕರಣ ಅಧಿಕವಾಗಿರೋ ಕಾರಣ ಈ ಚಿಂತನೆ ಬಂದಿದೆ.

ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಸ್ಥಳೀಯ ಹೋಟೆಲ್ ಮಾಲೀಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ಹೋಟೆಲ್‌ಗಳಲ್ಲಿ ಮಾರಾಟವಾಗದೇ ಉಳಿದ ಆಹಾರವನ್ನು ಪಡೆದು ಬೀದಿ ನಾಯಿಗಳಿಗೆ ಪೂರೈಸಲು ಯೋಜನೆ ರೂಪಿಸಲಾಗುತ್ತಿದೆ.  ಬಿಬಿಎಂಪಿಯ ಪೌರ ಕಾರ್ಮಿಕರು ಅವರು ಕಾರ್ಯ ನಿರ್ವಹಿಸುವ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರದ ಬಟ್ಟಲು ನೀಡುವುದು, ನಿರ್ದಿಷ್ಟಸ್ಥಳದಲ್ಲಿ ಆ ಬಟ್ಟಲು ಇಟ್ಟು ಆಹಾರ ಹಾಕುವ ವ್ಯವಸ್ಥೆ ಮಾಡಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಸಣ್ಣ ಜಾಗದಲ್ಲಿ 3 ನಾಯಿ, ಬೆಕ್ಕಿಗೆ ಆಶ್ರಯ: ಬೆಂಗಳೂರಿನ ಬಡ ಚಮ್ಮಾರ ತಾತಗೆ ಮಿಡಿದ ಜನ!

ಈ ಕಾರ್ಯಕ್ಕೆ ನೋಂದಣಿ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿಯಿಂದ ಶೀಘ್ರದಲ್ಲಿ ವೆಬ್ ಲಿಂಕ್ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಳರ್‌ವಿಕಾಸ್ ಕಿಶೋರ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Latest Videos

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ನಿರ್ಬಂಧವಿಲ್ಲ; ಸ್ಪಷ್ಟೀಕರಣ ಕೊಟ್ಟ ಬಿಬಿಎಂಪಿ!

click me!