
ಬೆಳಗಾವಿ (ಫೆ.22): ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಭಾಷಾ ಸಂಘರ್ಷ ಇನ್ನಷ್ಟು ವಿಕೋಪಕ್ಕೆ ಏರುವ ಲಕ್ಷಣ ಕಾಣುತ್ತಿದೆ. ಮರಾಠಿ ಮಾತನಾಡಲು ಬರೋದಿಲ್ಲ ಎನ್ನುವ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಮರಾಠಿಗರು ಹಲ್ಲೆ ಮಾಡಿದ ಬೆನ್ನಲ್ಲಿಯೇ, ಶುಕ್ರವಾರ ರಾತ್ರಿ ಚಿತ್ರದುರ್ಗದಲ್ಲಿ ಮಹಾರಾಷ್ಟ್ರಕ್ಕೆ ಹೋಗುವ ಬಸ್ ತಡೆದು ಚಾಲಕನಿಗೆ ಕನ್ನಡಿಗರು ಮಸಿ ಬಳಿದಿದ್ದರು. ಮಹಾರಾಷ್ಟ್ರದ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್‌ಅನ್ನು ತಡೆದು ಇಡೀ ಬಸ್‌ಗೆ ಜೈ ಕರ್ನಾಟಕ, ಜೈ ಕನ್ನಡ, ಬೆಳಗಾವಿ ನಮ್ಮದು, ಮರಾಠಿಗರು ಪುಂಡಾಟಿಕೆ ನಿಲ್ಲಿಸಬೇಕು ಎಂದು ಕಪ್ಪು ಮಸಿ ಬಳಿದಿದ್ದಲ್ಲದೆ, ಚಾಲಕ ಹರಿ ಜಾಧವ್ ಮುಖಕ್ಕೂ ಕಪ್ಪು ಮಸಿ ಎರಚಿದ್ದರು.
ಇದರ ಬೆನ್ನಲ್ಲಿಯೇ ಶನಿವಾರ ಕರ್ನಾಟಕ ಸಾರಿಗೆಯ ಐಷಾರಾಮಿ ಅಂಬಾರಿ ಬಸ್‌ಗೆ ಕಪ್ಪು ಮಸಿ ಬಳಿದು ಮಹಾರಾಷ್ಟ್ರದಲ್ಲಿ ಮನಸೇ ಪುಂಡಾಟ ನಡೆಸಿದೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಉದ್ಧಟತನ ಮೆರೆದಿದ್ದು, ಪುಣೆಯಿಂದ ಬೆಳಗಾವಿಗೆ ಬರ್ತಿದ್ದ ಐಷಾರಾಮಿ ವೋಲ್ವೋ ಬಸ್ ತಡೆದು ಕಪ್ಪು ಮಸಿ ಬಳಿದಿದ್ದಾರೆ.
ಮರಾಠಿ ಮಾತನಾಡುವಂತೆ ಕನ್ನಡ ಕಂಡಕ್ಟರ್ ಮೇಲೆ ಪುಂಡರ ಹಲ್ಲೆ, ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ!
ಕನ್ನಡ ಬೋರ್ಡ್‌ಗೂ ಕಪ್ಪು ಮಸಿ ಬಳಿದು ಮನಸೇ ಕಾರ್ಯಕರ್ತರು ಉದ್ಧಟತನ ಮೆರೆದಿದ್ದಾರೆ. ಮರಾಠಿ ಭಾಷೆಯಲ್ಲಿ ಬಸ್ ಮೇಲೆ ಮನಸೆ ಎಂದು ಬರೆದು ಪುಂಡಾಟ ಮೆರೆದಿದ್ದಾರೆ. 'ಅಯ್ಯೋ ದೇವರೇ ..ನಮ್ಮ ಕಿತ್ತೂರು ಕರ್ನಾಟಕದ ಏಕೈಕ ಅಲ್ಟ್ರಾ ಲಕ್ಸುರಿ ಬಸ್ ( ಬೆಳಗಾವಿ - ನಾಶಿಕ - ಬೆಳಗಾವಿ) ನ ಹಾಳ್ ಮಾಡಿ ಬಿಟ್ರಲ್ಲ ಪಾಪಿಗಳು. ದಯವಿಟ್ಟು ಮಹಾರಾಷ್ಟ್ರಕ್ಕೆ ಹೋಗುವ ಎಲ್ಲಾ ಪ್ರೀಮಿಯಂ ಬಸ್ ಸೇವೆ ಕೂಡಲೇ ನಿಲ್ಲಿಸಿ' ಎಂದು ಕನ್ನಡಿಗರು ಮನವಿ ಮಾಡಿದ್ದಾರೆ.
ಬೆಳಗಾವಿ ಬಸ್‌ನಲ್ಲಿ ಕನ್ನಡ ಮಾತನಾಡಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರು!