* ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಆದಿಶಂಕರರು, ಶಾರದಾಪರಮೇಶ್ವರಿಗೆ ಕುಂಭಾಭಿಷೇಕ ನೆರವೇರಿಸಲಿರುವ ಶ್ರೀಗಳು
* ಕಾರ್ಯಕ್ರಮದಲ್ಲಿ ‘ಕನ್ನಡಪ್ರಭ’-‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗಿ
* ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ
ಕೊಪ್ಪ(ಏ.14): ತುಂಗೆಯ ಮಡಿಲಲ್ಲಿರುವ ಹರಿಹರಪುರ ಮಠದಲ್ಲಿ(Hariharapura Matha) ಶುಕ್ರವಾರ ಮಹಾಕುಂಭಾಭಿಷೇಕ ನಡೆಯಲಿದೆ. ಬೆಳಗ್ಗೆ 8.20ಕ್ಕೆ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ(Lakshminarasimhaswamy) ಹಾಗೂ ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿದೇವಿಗೆ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರ ಅಮೃತಹಸ್ತದಲ್ಲಿ ಮಹಾಕುಂಭಾಭಿಷೇಕ ಜರುಗಲಿದೆ.
ಈ ಧರ್ಮಪೀಠದ ದೇವಾಲಯಗಳ(Temple) ಪುನರ್ ನಿರ್ಮಾಣ ಮಹಾಕಾರ್ಯ ಕಳೆದ ಹನ್ನೊಂದು ವರ್ಷಗಳಿಂದ ಜರುಗುತ್ತಿದೆ. ಇದೀಗ ಈಶ್ವರಾನುಗ್ರಹದಿಂದ ಸಾಂಗವಾಗಿ ಸಂಪನ್ನಗೊಂಡಿದೆ. ಶುಭ ಶುಕ್ರವಾರದಂದು ಮಹಾಕುಂಭಾಭಿಷೇಕ ನಡೆಯಲಿದೆ. ಶುಕ್ರವಾರ ನಡೆಯಲಿರುವ ಮಹಾಕುಂಭಾಭಿಷೇಕದಲ್ಲಿ(Mahakumbabhisheka) ‘ಕನ್ನಡಪ್ರಭ’ - ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ(Ravi Hegde) ಪಾಲ್ಗೊಳ್ಳಲಿದ್ದಾರೆ. ರಾಜ್ಯದ(Karnataka) ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು(Devotees) ಇಲ್ಲಿಗೆ ಆಗಮಿಸಲಿದ್ದಾರೆ.
undefined
Chikkamagaluru: ಆಧುನಿಕ ಭರಾಟೆ ಮಧ್ಯೆಯೂ ನೋಡುಗರ ಮನಸೆಳೆದ ಎತ್ತಿನಗಾಡಿ ಸ್ಪರ್ಧೆ
ಕಾರ್ಯಕ್ರಮದ ಅಂಗವಾಗಿ ಏ.24ರವರೆಗೆ ಶ್ರೀಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ನಾಡಿನ ಗಣ್ಯರು ಶ್ರೀಧರ್ಮಪೀಠಕ್ಕೆ ಭೇಟಿ ನೀಡುತ್ತಿದ್ದಾರೆ. ಗುರುವಾರ ಶ್ರೀಮಠದಲ್ಲಿ ಶ್ರೀ ಶಾರದಾ ಪರಮೇಶ್ವರಿ ಹಾಗೂ ಆದಿಶಂಕರ ಭಗವತ್ಪಾದರಿಗೆ ಆದಿವಾಸ ಹೋಮ, ತತ್ವಾನ್ಯಾಸ, ಕಲಾನ್ಯಾಸ, ಪಿಂಡಿಕಾ ರತ್ನಾನ್ಯಾಸ, ಶಯ್ಯಾದಿವಾಸ, ಅಷ್ಟಾವಧಾನ ಸೇವೆ, ಮಹಾಕುಂಭಾಭಿಷೇಕ ಮಹೋತ್ಸವದ ಪ್ರತಿಷ್ಠಾಂಗ ಪೂರ್ವವಿಧಿಗಳು ಗುರುದತ್ತಾತ್ರೇಯ ಮಹಾಯಾಗ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ನಂತರ ಭಕ್ತಾಧಿಗಳು ಶ್ರೀಗಳಿಂದ ಆಶೀರ್ವಾದ ಪಡೆದರು.
ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಶ್ರೀ ಮಠಕ್ಕೆ ಅಗಮಿಸಿದ ಹಿರಿಯ ಭಕ್ತರ ಕಾಲು ತೊಳೆಸಿ, ಬರಮಾಡಿ ಕೊಂಡರು. ಮಹಾಕುಂಭಾಭಿಷೇಕದ ಹಿನ್ನೆಲೆ ಗುರುವಾರ ಸಂಜೆಯಿಂದಲೇ ಭರದ ತಯಾರಿ ಆರಂಭಗೊಂಡಿದೆ. ದಿವ್ಯಕ್ಷೇತ್ರ ಹರಿಹರಪುರದಲ್ಲಿ ನಡೆಯುತ್ತಿರುವ ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮತ್ತೂರು ಪಾಲ್ಗೊಂಡಿದ್ದರು.
ಮಲೆನಾಡಲ್ಲಿ ಮಹಾ ಕುಂಭಾಭಿಷೇಕ್ಕೆ ಭರದ ಸಿದ್ಧತೆ; ಭವ್ಯತೆಗೆ ಬೆರಗಾದ ಭಕ್ತರು
ಉಚಿತ ಬಸ್ ವ್ಯವಸ್ಥೆ:
ಶ್ರೀ ಕ್ಷೇತ್ರ ಹರಿಹರಪುರದಲ್ಲಿ ಶುಕ್ರವಾರ ನಡೆಯಲಿರುವ ಮಹಾಕುಂಭಾಭಿಷೇಕ ಮಹೋತ್ಸವದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ನಂತರ ರಾತ್ರಿ 10 ಗಂಟೆಗೆ ಕೊಪ್ಪ, ಶೃಂಗೇರಿ, ಬಿದರಗೋಡು, ಕಮ್ಮರಡಿ ಹಾಗೂ ಬೊಮ್ಮಲಾಪುರಗಳಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.