ಬಿಜೆಪಿ ಶಾಸಕ ಯತ್ನಾಳರನ್ನ ಪರೋಕ್ಷವಾಗಿ ರಾಕ್ಷಸ ಎಂದ ಸ್ವಾಮೀಜಿ

By Girish Goudar  |  First Published Apr 15, 2022, 8:48 AM IST

*  ಹಗುರವಾಗಿ ಮಾತನಾಡುವವರನ್ನು ಹಗುರವಾಗೇ ಕೈಬಿಡಬೇಕು
*  ಶಾಸಕ ಯತ್ನಾಳ ಬಗ್ಗೆ ಹರಿಹರ ಪಂಚಮಸಾಲಿ ಶ್ರೀಗಳ ಹೇಳಿಕೆ
*  ಪಂಚಮಸಾಲಿ ಮೀಸಲಾತಿಗಾಗಿ ಗಡುವು ನೀಡುವುದು ಸರಿಯಲ್ಲ
 


ಕೊಪ್ಪಳ(ಏ.14):  ‘ಎಲ್ಲರನ್ನು ನಾನು ನನ್ನವರು ಎಂದು ಭಾವಿಸುತ್ತೇನೆ, ನನ್ನನ್ನು ಟೀಕೆ ಮಾಡಿದವರನ್ನು ನಾನು ಟೀಕಿಸುವುದಿಲ್ಲ. ಹಾಗೆ ಮಾಡಿದರೆ ನಾನು ಸ್ವಾಮೀಜಿಯಾಗುವುದಿಲ್ಲ. ಆದರೆ, ಹಗುರವಾಗಿ ಮಾತನಾಡುವವರನ್ನು ಹಗುರವಾಗಿಯೇ ಕೈಬಿಡಬೇಕು...’ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ(Basanagouda Patil Yatnal) ಅವರ ಹೇಳಿಕೆ ಕುರಿತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು(Vachananand Swamiji) ಪರೋಕ್ಷವಾಗಿ ವಾಗ್ದಾಳಿ ಮಾಡಿದರು. ಮಹಾಭಾರತದಲ್ಲಿನ ಒಂದು ಉಪಕತೆಯನ್ನು ಹೇಳಿ, ಯತ್ನಾಳ ಅವರನ್ನು ಪರೋಕ್ಷವಾಗಿ ರಾಕ್ಷಸ ಎನ್ನುವ ಅರ್ಥದಲ್ಲಿ ಮಾತನಾಡಿದರು.

ನಾನು ಅವರಿಗೆ ನಾನೊಂದೂ ಹೇಳಿಲ್ಲ, ಹಾಗೆ ಮಾಡುವವರು ಇರುತ್ತಾರೆ, ಅವರ ಬಗ್ಗೆ ಗಂಭೀರವಾಗಿ ಪರಿಗಣಿಸಬಾರದು, ಅವರನ್ನು ಕೈಬಿಡಬೇಕು ಎಂದರು.

Tap to resize

Latest Videos

Koppal: ಹನುಮನ ನಾಡು ಅಂಜನಾದ್ರಿ ಬೆಟ್ಟದಲ್ಲಿ ಯೋಗ ಕಾರ್ಯಕ್ರಮ

28 ವರ್ಷಗಳ ಸುದೀರ್ಘ ಹೋರಾಟ:

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಮೀಸಲಾತಿಗಾಗಿ(Pachamasali) ಗಡುವು ನೀಡುತ್ತಿರುವುದು ಸರಿಯಲ್ಲ. ಅದು ಕುಲಶಾಸ್ತ್ರ ಅಧ್ಯಯನ ನಡೆಯಬೇಕಾಗಿದೆ ಎಂದರು.
ಮೀಸಲಾತಿ(Reservation) ಅಷ್ಟು ಸುಲಭವಾಗಿ ಧಕ್ಕುವುದಲ್ಲ, ಹಾಗೊಂದು ವೇಳೆ ಅವಸರದಲ್ಲಿ ಪಡೆಯಲು ಹೋಗಿ ಯಡವಟ್ಟು ಆಗಬಹುದು ಅಥವಾ ಕಾನೂನು ತೊಡಕು ಆಗಬಹುದು. ಹೀಗಾಗಿ, ಅದನ್ನು ಕಾನೂನುಬದ್ಧವಾಗಿಯೇ ಪಡೆಯಬೇಕಾಗಿರುವುದರಿಂದ ಪ್ರಕ್ರಿಯೆ ನಡೆದಿರುವುದರಿಂದ ಅವಸರ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕಳೆದ 28 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಇದರ ಸಂಘಟನೆ ಪ್ರಾರಂಭವಾಗಿದ್ದೇ ಕೊಪ್ಪಳದಲ್ಲಿಯೇ. ಇಡೀ ಲಿಂಗಾಯತ ಸಮುದಾಯ ಒಂದಾಗಬೇಕು ಎಂದರೆ ಸಮಾನವಾದ ಮೀಸಲಾತಿ ಸಿಗುವಂತಾಗಬೇಕು ಎನ್ನುವ ಬಯಕೆ ಇದೆ ಎಂದರು.

ಕಾನೂನಾತ್ಮಕವಾಗಿ 2ಎ ಮೀಸಲಾತಿಗೆ ಪ್ರಯತ್ನ

ಕಾನೂನಾತ್ಕವಾಗಿ 2ಎ ಮೀಸಲಾತಿ(2A Reservation) ಹಾಗೂ ಒಬಿಸಿ(OBC) ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಇದರಿಂದ ಪಂಚಮಸಾಲಿ ಸಮಾಜಕ್ಕೆ ಶಾಶ್ವತವಾಗಿ ಮೀಸಲಾತಿ ಪಡೆಯಲು ಸಾಧ್ಯ ಎಂದು ವಚನಾನಂದ ಸ್ವಾಮೀಜಿ ಹೇಳಿದರು. 

ವಚನಾನಂದ ಶ್ರೀಗೆ ಕರೆ ಮಾಡಿದ ಉಪ ರಾಷ್ಟ್ರಪತಿ Venkaiah Naidu

2ಎ ಮೀಸಲಾತಿ ಸಂಬಂಧಿಸಿದಂತೆ ಕೇಂದ್ರದ ಹಿಂದುಳಿದ ಆಯೋಗದ ವಿವಿಧ ತಾಲೂಕುಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸೂಕ್ತ ಮಾಹಿತಿ ಒದಗಿಸಿ ಶಾಶ್ವತವಾಗಿ 2ಎ ಮೀಸಲಾತಿಗಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ಸಣ್ಣ-ಪುಟ್ಟ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ ಯುವ ಸಮೂಹ ದುಶ್ಚಟದ ದಾಸರಾಗಿದ್ದಾರೆ. ಅವರನ್ನು ಗುರುತಿಸಿ ಸಂಸ್ಕಾರವನ್ನು ಆಧ್ಯಾತ್ಮಿಕ ಮಾರ್ಗದ ಮೂಲಕ ನೀಡುವುದು ಎಲ್ಲ ಗುರುಪೀಠದ ಜಗದ್ಗುರುಗಳದ್ದಾಗಿರುತ್ತದೆ. ಈ ದಿಸೆಯಲ್ಲಿ ಪಂಚಾಮಸಾಲಿ ಪೀಠ(Panchamasali Peetha) ಮಹತ್ವದ ಹೆಜ್ಜೆ ಇಟ್ಟು ಸಾಗುತ್ತಿದೆ ಎಂದು ತಿಳಿಸಿದರು. ಮುಖಂಡರಾದ ಬಸನಗೌಡ ತೊಂಡಿಹಾಳ, ಕರಿಯಪ್ಪ ಮೇಟಿ, ಕೆ.ಜಿ. ಪಲ್ಯದ್‌, ಶಿವಪ್ಪ ಯಲಬುರ್ಗಾ, ಕಳಕನಗೌಡ ಪಾಟೀಲ್‌ ಹಾಗೂ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್‌ ಇದ್ದರು.
 

click me!