ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ವ್ಯಾಪಾರಿ ಮಳಿಗೆಯಲ್ಲಿ ಕುಳಿತು ಫೋನಿನಲ್ಲಿ ಮಾತನಾಡುತ್ತಲೇ ಚೇರಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕೊಡಗು (ಆ.13): ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ತನ್ನ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತ ಕುಳಿತಿದ್ದ ವ್ಯಕ್ತಿ ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹುಟ್ಟಿದ ಮೇಲೆ ಸಾವು ಖಚಿತ ಎನ್ನುವುದೇನೋ ಸರಿ. ಆದರೆ ಸಾವು ಹೇಗೆಲ್ಲಾ ಬರುತ್ತದೆ ಎನ್ನುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಕುಳಿತು ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತನನ್ನು ರೆಡ್ಡಿ (55) ವ್ಯಾಪಾರಿ ಎಂದು ಗುರುತೊಸಲಾಗಿದೆ. ಈ ಘಟನೆ ಕೊಡಗು ಜಿಲ್ಲೆ ಗೋಣಿಕೊಪ್ಪಲಿನಲ್ಲಿ ನಡೆದಿದೆ. ಗೋಣಿಕೊಪ್ಪಲು ಪಟ್ಟಣದ ಮಂಜುನಾಥ ಟ್ರೇಡರ್ಸ್ ನ ಮಾಲೀಕ ರೆಡ್ಡಿ ಮೃತರಾಗಿದ್ದಾರೆ.
Breaking ಶಿವಮೊಗ್ಗದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಎಂದಿನಂತೆ ಮಂಗಳವಾರವೂ ಮಳಿಗೆಯನ್ನು ತೆರೆದ ರೆಡ್ಡಿ ಅವರು ಅಂಗಡಿಯಲ್ಲಿ ಕುಳಿತುಕೊಂಡು ವ್ಯವಹಾರದ ಬಗ್ಗೆ ಫೋನಿನಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ಬೆಳಗ್ಗೆ 9.40ಕ್ಕೆ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿದೆ. ಅಲ್ಲಿದ್ದವರು ಸಹಾಯಕ್ಕೆ ಮುಂದಾದರೂ ಎದೆ ಹಿಡಿದುಕೊಂಡು ಚೇರಿನ ಮೇಲೆಯೇ ಹಿಂದಕ್ಕೆ ಒರಗಿ ಬಿದ್ದವರು ಪುನಃ ಮೇಲೆ ಏಳಲೇ ಇಲ್ಲ. ಈ ಘಟನೆ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳಿದ್ರಾ ನಟ ಯಶಸ್ ಸೂರ್ಯ?
ಇನ್ನು ಅಕ್ಕಪಕ್ಕದಲ್ಲಿರುವವರು ರೆಡ್ಡಿ ಎದೆ ಹಿಡಿದು ಚೇರಿನಲ್ಲಿ ಹಿಂದಕ್ಕೆ ಬಿದ್ದ ಕೂಡಲೇ ತಕ್ಷಣ ನೆರವಿಗೆ ಬಂದು ಎದೆಯನ್ನು ಒತ್ತಿ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಪ್ರಜ್ಞೆ ತಪ್ಪಿರಬಹುದು ಎಂದು ಮುಖಕ್ಕೆ ನೀರು ಹಾಕಿ ಎಚ್ಚರಿಸಲು ಪ್ರಯತ್ನ ಮಾಡಿದ್ದಾರೆ. ಯಾವುದೇ ಪ್ರಯತ್ನ ಸಫಲವಾಗಿಲ್ಲ. ಚೇರಿನಲ್ಲಿ ಬಿದ್ದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅದಾಗಲೇ ರೆಡ್ಡಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.