ಅಮೆರಿಕದಲ್ಲಿ ಕೊಡಗಿನ ವೈದ್ಯರಿಗೆ ವಿಶೇಷ ಗೌರವ

Kannadaprabha News   | Asianet News
Published : Apr 25, 2020, 10:42 AM IST
ಅಮೆರಿಕದಲ್ಲಿ ಕೊಡಗಿನ ವೈದ್ಯರಿಗೆ ವಿಶೇಷ ಗೌರವ

ಸಾರಾಂಶ

ಅಮೆರಿಕದಲ್ಲಿ ವೃತ್ತಿಧರ್ಮ ಮೆರೆದ ಕರ್ನಾಟಕದ ಇಬ್ಬರು ವೈದ್ಯರಿಗೆ ವಿಶೇಷ ಗೌರವ ಸಲ್ಲಿಕೆಯಾಗಿದೆ. ಅಮೆರಿಕದ ಸೈಂಟ್‌ ಫ್ರಾನ್ಸಿಸ್‌ ಆಸ್ಪತ್ರೆಯಲ್ಲಿ ಕೋವಿಡ್‌ 19 ವಿರುದ್ಧ ಸೇವೆ ಸಲ್ಲಿಸಿದ ಕೊಡಗಿನ ಪ್ರೀತಿ ಸುಬ್ರಮಣಿ ಎಂಬ ವೈದ್ಯಗೆ ವಿಶೇಷ ಗೌರವ ನೀಡಲಾಗಿದೆ.  

ಮಡಿಕೇರಿ(ಏ.25): ಅಮೆರಿಕದಲ್ಲಿ ವೃತ್ತಿಧರ್ಮ ಮೆರೆದ ಕರ್ನಾಟಕದ ಇಬ್ಬರು ವೈದ್ಯರಿಗೆ ವಿಶೇಷ ಗೌರವ ಸಲ್ಲಿಕೆಯಾಗಿದೆ. ಅಮೆರಿಕದ ಸೈಂಟ್‌ ಫ್ರಾನ್ಸಿಸ್‌ ಆಸ್ಪತ್ರೆಯಲ್ಲಿ ಕೋವಿಡ್‌ 19 ವಿರುದ್ಧ ಸೇವೆ ಸಲ್ಲಿಸಿದ ಕೊಡಗಿನ ಪ್ರೀತಿ ಸುಬ್ರಮಣಿ ಎಂಬ ವೈದ್ಯಗೆ ವಿಶೇಷ ಗೌರವ ನೀಡಲಾಗಿದೆ.

ಕೊಡಗು ಜಿಲ್ಲೆಯ ಬಿರುನಾಣಿ ಗ್ರಾಮದ ಸುಬ್ರಮಣಿ ಅವರ ಪತ್ನಿ ಪ್ರೀತಿ ಈ ಗೌರವಕ್ಕೆ ಪಾತ್ರರಾದವರು. ಮೈಸೂರಿನ ಉಮಾ ಹಾಗೂ ಕೊಡಗಿನ ಪ್ರೀತಿ ಜತೆಯಲ್ಲೇ ಸೇವೆ ಮಾಡುತ್ತಿದ್ದಾರೆ.

ಕೊರೋನಾ ಸೋಂಕಿತ ಶವ ಸಂಸ್ಕಾರಕ್ಕೆ ಶಾಸಕರಿಂದಲೇ ವಿರೋಧ

ಪೊಲೀಸ್‌ ಅಗ್ನಿಶಾಮಕದಳದಿಂದ ವಾಹನ ಪರೇಡ್‌ ಮೂಲಕ ವಿಶೇಷವಾಗಿ ಗೌರವ ನೀಡಲಾಗಿದ್ದು, ಇವರಿಂದ ಚಿಕಿತ್ಸೆ ಪಡೆದು ಗುಣಮುಖವಾದವರಿಂದಲೂ ಗೌರವ ಸಲ್ಲಿಕೆಯಾಗಿದೆ.

ಸರಕು ಸಾಗಣೆ ವಿಮಾನದಲ್ಲಿ ಪ್ರಶಾಂತ್‌ ಕಿಶೋರ್‌ ಪಯಣ?

ಮನೆ ಮುಂದೆ ವಾಹನಗಳಲ್ಲಿ ಸಾಗಿ ಗೌರವಿಸಲಾಗಿದ್ದು, ವಾಹನದ ಸೈರನ್‌ ಮೊಳಗಿಸಿ ಕೈಬೀಸಿ ಅಭಿನಂದಿಸಿದ್ದಾರೆ. ಮೆಚ್ಚುಗೆ ಗಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರೀತಿ ಸುಬ್ರಮಣಿ ಅವರು ಕರ್ನಾಟಕ ರಣಜಿ ಮಾಜಿ ಆಟಗಾರ ರಾಜಪ್ಪ ಅವರ ಪುತ್ರಿ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು