ಮೊದಲು ನಿಮ್ಮ ಮನೆ ತೊಳ್ಕಳ್ಳಿ: ಸಿದ್ದುಗೆ ಮಾಧುಸ್ವಾಮಿ ಟಾಂಗ್

By Web Desk  |  First Published Sep 10, 2019, 2:59 PM IST

ಸಚಿವ ಮಾಧುಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸಿದ್ದು ಹೇಳಿಕೆಗೆ ಮಾಧುಸ್ವಾಮಿ ಪ್ರತ್ಯುತ್ತರ ನೀಡಿದ್ದು, ನಮ್ಮ ಮನೆ ನಾವು ತೊಳೆದುಕೊಳ್ಳುತ್ತೇವೆ, ಮೊದಲು ಅವರ ಮನೆ ತೊಳೆದುಕೊಳ್ಳಲು ಹೇಳಿ ಎಂದಿದ್ದಾರೆ.


ಕೊಪ್ಪಳ(ಸೆ.10): ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಂಪೂರ್ಣ ದೇವೆಗೌಡರ ಹಂಗಲ್ಲಿ, ನೆರಳಲ್ಲಿ ಬದುಕಿದವರು. ಅಂತವರು ನಳಿನ್ ಬಗ್ಗೆ ಏನ್ ಮಾತಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ದೇವಗೌಡರ ನೆರಳಲ್ಲಿ ಬದುಕಿ ಕಾಂಗ್ರೆಸ್ ಲೀಡರ್ ಆಗ್ತಾರೆ. ಸವರೀಗ ಎಲ್ಲಿದ್ದರೂ, ಸಿದ್ದರಾಮಯ್ಯ ಯಾರ ಗರಡಿಯಲ್ಲಿ ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ನಮ್ಮನ್ನು ಟೀಕೆ ಮಾಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಥೂ ಇದೆಂಥಾ ಜನ... 100 ರೂ. ಬಾಕಿ ಕೂಲಿ ಕೇಳಿದ್ದಕ್ಕೆ ಕೊಲೆ ಮಾಡ್ಬಿಟ್ರು!

ಸಿದ್ದರಾಮಯ್ಯ ಅವರ ಯೋಗ್ಯತೆಗೆ ಅವರನ್ನು ಪಕ್ಷದ ನಾಯಕರನ್ನಾಗಿ ಮಾಡಿಲ್ಲ. ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಕೇಳುತ್ತಲೇ ಇದ್ದೇವೆ.  ಒಂದು ತಿಂಗಳಿಂದ ಕೇಳುತ್ತಿದ್ದೇವೆ. ಅದರೆ ಒಬ್ಬ ನಾಯಕರ ಹೆಸರನ್ನು ಕೊಡುವುದಕ್ಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು  ಮೊದಲು ಅವರ ಮನೆಯನ್ನು ತೊಳೆದುಕೊಳ್ಳಲಿ ಎಂದಿದ್ದಾರೆ.

ಕೊಪ್ಪಳ: ಹೆತ್ತ ಮಗನನ್ನೇ ಉಸಿರುಗಟ್ಟಿಸಿ ಕೊಂದ ತಾಯಿ..!

ಮೊದಲು ಸಿದ್ದರಾಮಯ್ಯ ನಮ್ಮ ನಾಯಕರೆಂದು ಡಿಕೆಶಿ, ಪರಮೇಶ್ವರ, ಪಾಟೀಲ್ ಅವರಿಂದ ಹೇಳಿಸಿ. ನಾವು ಯಡಿಯೂರಪ್ಪ ಅವರು ನಮ್ಮ ನಾಯಕರೆಂದು ತೀರ್ಮಾನ ಮಾಡಿದ್ದೇವೆ. ನಮ್ಮ ಮನೆ ನಾವು ತೊಳೆದುಕೊಳ್ಳುತ್ತೇವೆ. ಮೊದಲು ಅವರ ಮನೆ ತೊಳೆದುಕೊಳ್ಳಲು ಹೇಳಿ.  ಸಿದ್ದರಾಮಯ್ಯ ಟೀಕೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

click me!