ಮಧ್ಯಂತರ ಚುನಾವಣೆ ವಿರೋಧ ಪಕ್ಷಗಳ ಕನಸು: ಡಿಸಿಎಂ

Published : Sep 10, 2019, 02:32 PM IST
ಮಧ್ಯಂತರ ಚುನಾವಣೆ ವಿರೋಧ ಪಕ್ಷಗಳ ಕನಸು: ಡಿಸಿಎಂ

ಸಾರಾಂಶ

ಸರ್ಕಾರಕ್ಕೆ ಆಯಸ್ಸಿಲ್ಲ, ಮಧ್ಯಂತರ ಚುನಾವಣೆ ಆಗುತ್ತದೆ ಎಂಬುದು ವಿರೋಧ ಪಕ್ಷದವರ ಕನಸು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ತಿಳಿಸಿದ್ದಾರೆ. ನಮ್ಮದು ಸ್ಥಿರ ಸರ್ಕಾರ, ಕೇಂದ್ರದಲ್ಲಿರುವ ನಮ್ಮ ಪಕ್ಷದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ರಾಜ್ಯವನ್ನು ಅಭಿವೃದ್ಧಿ ದಿಕ್ಕಿನಂತ ಕೊಂಡಯ್ಯುವ ಗುರಿ ಹೊಂದಲಾಗಿದೆ  ಎಂದರು.

ಹಾಸನ(ಸೆ.10): ಸರ್ಕಾರಕ್ಕೆ ಆಯಸ್ಸಿಲ್ಲ, ಮಧ್ಯಂತರ ಚುನಾವಣೆ ಆಗುತ್ತದೆ ಎಂಬುದು ವಿರೋಧ ಪಕ್ಷದವರ ಕನಸು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ತಿಳಿಸಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿ ಚಿಕ್ಕೋನಹಳ್ಳಿ ಗೇಟ್‌ನಲ್ಲಿರುವ ಸಾಯಿಮಂದಿರಕ್ಕೆ ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ನೊಂದವರ ಸಹಾಯಕ್ಕಾಗಿ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಎಚ್.ಡಿ.ರೇವಣ್ಣಗೂ ಬಂದಿತ್ತಾ BJP ಆಫರ್‌ ?

ಸರ್ಕಾರಕ್ಕೆ ಆಯಸ್ಸಿಲ್ಲ, ಮಧ್ಯಂತರ ಚುನಾವಣೆ ಆಗುತ್ತದೆ ಎಂಬುದು ವಿರೋಧ ಪಕ್ಷದವರ ಕನಸಷ್ಟೆ, ನಮ್ಮದು ಸ್ಥಿರ ಸರ್ಕಾರ, ಕೇಂದ್ರದಲ್ಲಿರುವ ನಮ್ಮ ಪಕ್ಷದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ರಾಜ್ಯವನ್ನು ಅಭಿವೃದ್ಧಿ ದಿಕ್ಕಿನಂತ ಕೊಂಡಯ್ಯುವ ಗುರಿ ಹೊಂದಲಾಗಿದೆ. 5ವರ್ಷಗಳ ಕಾಲ ಯಾರಿಗೂ ಚುನಾವಣೆ ಬೇಕಿಲ್ಲ ಎಂದರು.

ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ:

65ಸಾವಿರ ಮನೆಗಳ ನಿರ್ಮಾಣಕ್ಕಾಗಿ ತಲಾ 5ಲಕ್ಷ ರು., ಭಾಗಶಃ ಹಾನಿಗೊಳಗಾದ ಮನೆಗಳಿಗೆ 1ಲಕ್ಷ, ಮನೆಯಿಲ್ಲದವರಿಗೆ 50ಸಾವಿರ ಹಣ ನೀಡಲಾಗಿದೆ. ಇದು ಇತಿಹಾಸದಲ್ಲಿ ಯಾವುದೇ ಸರ್ಕಾರ ನೀಡದ ಪರಿಹಾರವಾಗಿದೆ. ಇನ್ನೂ ರಸ್ತೆ, ಶಾಲೆ, ಆಸ್ಪತ್ರೆ ಸೇರಿ ಸರ್ಕಾರಿ ಆಸ್ತಿಯನ್ನು ತ್ವರಿತವಾಗಿ ರಿಪೇರಿ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!