ಕಾಂಗ್ರೆಸ್‌ ಸೇರಿದ ಮಾಜಿ ಶಾಸಕ : ಡಿಕೆಶಿ ಸಮ್ಮುಖ ಕೈ ಪಾಳೆಯಕ್ಕೆ

By Kannadaprabha News  |  First Published Oct 14, 2022, 5:35 AM IST

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಮಾಜಿ ಶಾಸಕ ಎಂ.ಶಿವಾನಂದ ಕಾಂಗ್ರೆಸ್‌ ಸೇರ್ಪಡೆಗೊಂಡು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.


 ಚಿಕ್ಕಬಳ್ಳಾಪುರ: (ಅ.14) :  ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಶಿವಾನಂದ ಸದ್ದಿಲ್ಲದೆ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಎಐಸಿಸಿ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆ ವೇಳೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಮಾಜಿ ಶಾಸಕ ಎಂ.ಶಿವಾನಂದ ಕಾಂಗ್ರೆಸ್‌ ಸೇರ್ಪಡೆಗೊಂಡು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.

ಮಾತೃ ಪಕ್ಷಕ್ಕೆ ಸೇರಿದ್ದೇನೆ:

Tap to resize

Latest Videos

ಕಾಂಗ್ರೆಸ್‌ (Congress)  ಸೇರ್ಪಡೆಯಾಗಿರುವುದನ್ನು ಗುರುವಾರ ಸ್ವತಃ ಮಾಜಿ ಶಾಸಕ ಎಂ.ಶಿವಾನಂದ್‌ (M Shivananda)   ಖಚಿತಪಡಿಸಿದ್ದು ನಮ್ಮದು ಸ್ವಾತಂತ್ರ್ಯ ಹೋರಾಟದ ಹಿನ್ನಲೆ ಇರುವ ಕುಟುಂಬ. ನಾನು ನಮ್ಮ ಮಾತೃ ಪಕ್ಷ ಕಾಂಗ್ರೆಸ್‌ಗೆ ಸೇರಿದ್ದೇನೆಂದರು. ಬಹುಶಃ ಬೃಹತ್‌ ಕಾಲ್ನಡಿಗೆ ಯಾತ್ರೆಯನ್ನು ದೇಶದ ಉದ್ದಗಲಕ್ಕೂ ಮಹಾತ್ಮಗಾಂಧಿ ಬಿಟ್ಟರೆ ರಾಹುಲ್‌ಗಾಂಧಿಯವರೆ ನಡೆಸುತ್ತಿರುವುದು. ಇದೊಂದು ದೊಡ್ಡ ನಿರ್ಧಾರ.

ಭಾರತ್‌ ಜೋಡೊ ಯಾತ್ರೆ ಸಾಗಿದ ಕಡೆಯಲ್ಲಾ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಯುವಕರು ಕೂಡ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು. ನಾನು ಬಿಜೆಪಿಗೆ ಸೇರಿರಲಿಲ್ಲ. ಸಚಿವ ಡಾ.ಕೆ.

ಸುಧಾಕರ್‌ ನನಗೆ ಬೆಸ್ಟ್‌ ಫ್ರೆಂಡ್‌ ಅವರು ಕೂಡ ಈ ಹಿಂದೆ ಕಾಂಗ್ರೆಸ್‌ನಲ್ಲಿಯೆ ಇದ್ದವರು. ಎರಡು ಬಾರಿ ನಾನು ಅವರಿಗೆ ಬೆಂಬಲ ಕೊಟ್ಟು ಸಚಿವ ಡಾ.ಕೆ.ಸುಧಾಕರ್‌ ಜೊತೆ ಇದ್ದಿದ್ದು ನಿಜ. ಆದರೆ ನಾನು ಬಿಜೆಪಿ ಪಕ್ಷಕ್ಕೆ ಸೇರಲಿಲ್ಲ. ಈಗ ನನ್ನನ್ನು ನಾನು ಅರಿತುಕೊಂಡು ನಮ್ಮ ಮಾತೃ ಪಕ್ಷ ಕಾಂಗ್ರೆಸ್‌ಗೆ ಸೇರಿದ್ದೇನೆಂದು ಎಂ.ಶಿವಾನಂದ್‌ ತಿಳಿಸಿದರು.

ಪಕ್ಷೇತರ ಶಾಸಕರಾಗಿದ್ದ ಎಂ.ಶಿವಾನಂದ್‌:

ಕಾಂಗ್ರೆಸ್‌ ಸೇರ್ಪಡೆಗೊಂಡಿರುವ ಎಂ.ಶಿವಾನಂದ್‌, ಮೀಸಲು ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1994ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಾತಂತ್ರ್ಯ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದರು. ಜೆಡಿಎಸ್‌ ಪಕ್ಷದ ಕೆ.ಎಂ.ಮುನಿಯಪ್ಪ 18,976 ಮತಗಳ ಅಂತರದಿಂದ ಗೆಲುವು ಸಾಧಿಸಿ 1999 ರವರೆಗೂ ಶಾಸಕರಾಗಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇವರ ತಂದೆ ಎ.ಮುನಿಯಪ್ಪ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದವರು.

ಪಾದಯಾತ್ರೆಯಲ್ಲಿ ಜೆಡಿಎಸದ ಶಾಸಕ 

 

ತುಮಕೂರು (ಅ.09): ಪಾದಯಾತ್ರೆ ಟಿ.ಬಿ. ಕ್ರಾಸ್‌ ಬಿಟ್ಟು ನಂದಿಕಲ್‌ ಕೆರೆ ಗೇಟ್‌ ಸಮೀಪ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಉಚ್ಛಾಟಿತ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಿದರು.

ಪಾದಯಾತ್ರೆ ನಡುವೆಯೇ ಜೆಡಿಎಸ್‌ ಉಚ್ಛಾಟಿತ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ರನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ರಾಹುಲ್‌ಗಾಂಧಿಯವರಿಗೆ ಪರಿಚಯ ಮಾಡಿಕೊಟ್ಟರು.

ಪೂರ್ಣಕುಂಭ ಸ್ವಾಗತ : 

ಸಮಾಜದ ಸಾಮರಸ್ಯ ಹಾಗೂ ದೇಶವನ್ನು ಒಗ್ಗೂಡಿಸುವ ಘೋಷ ವಾಕ್ಯದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಕೈಗೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 9ನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ಬೆಳಿಗ್ಗೆ ಕಲ್ಪತರುನಾಡು ತುಮಕೂರು ಜಿಲ್ಲೆಗೆ ಆಗಮಿಸಿತು.

ಶುಕ್ರವಾರ ರಾತ್ರಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ 6.30ಕ್ಕೆ ತುರುವೇಕೆರೆ ತಾಲೂಕಿನ ಮಾಯಸಂದ್ರಕ್ಕೆ ಆಗಮಿಸಿದ ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯನ್ನು ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು ಅಭೂತಪೂರ್ವವಾಗಿ ಸ್ವಾಗತಿಸಿದರು.

ಇದೇ ವೇಳೆ ಮಾಯಸಂದ್ರ ಪ್ರವೇಶಿಸಿದ ತಮ್ಮ ನೆಚ್ಚಿನ ನಾಯಕ ರಾಹುಲ್‌ಗಾಂಧಿಯವರನ್ನು ಹಿರಿಯ ಕಾಂಗ್ರೆಸ್‌ ನಾಯಕರಾದ ಡಾ.ಜಿ. ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ವೆಂಕಟಮರಣಪ್ಪ, ಡಾ. ರಫೀಕ್‌ಅಹಮದ್‌, ಆರ್‌. ರಾಜೇಂದ್ರ ಸೇರಿದಂತೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ರಾಹುಲ್‌ಗಾಂಧಿಯವರೊಂದಿಗೆ ಕಾಂಗ್ರೆಸ್‌ ನಾಯಕರಾದ ಸುರ್ಜೇವಾಲಾ, ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು, ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಬೆಳಿಗ್ಗೆ 6.45ಕ್ಕೆ ಮಾಯಸಂದ್ರದ ಪೊಲೀಸ್‌ ಠಾಣೆ ಮುಂಭಾಗದಿಂದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್‌ ಜೋಡೋ ಯಾತ್ರೆ ಪುನರಾರಂಭವಾಯಿತು. ಈ ಯಾತ್ರೆಯಲ್ಲಿ ರಾಹುಲ್‌ಗಾಂಧಿಯವರ ಎಡ ಮತ್ತು ಬಲ ಭಾಗದಲ್ಲಿ ಹೆಜ್ಜೆ ಹಾಕಲು ಜಿಲ್ಲಾ ಮಟ್ಟದ ನಾಯಕರು ಮುಗಿ ಬೀಳುತ್ತಿದ್ದ ದೃಶ್ಯಗಳು ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಕಂಡು ಬಂತು.

click me!