ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಲೆ ಇದ್ದು 2022-23ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ಬರೋಬ್ಬರಿ 14,234 ಮಂದಿ ಅರ್ಜಿ ಸಲ್ಲಿಸಿದ್ದು ಆ ಪೈಕಿ ಇಲ್ಲಿವರೆಗೂ 5,513 ಮಂದಿಗೆ ಮಾತ್ರ ಹೊಸ ಪಡಿತರ ಚೀಟಿ ವಿತರಿಸಲಾಗಿದೆ.
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ:(ಅ.14):ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಲೆ ಇದ್ದು 2022-23ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ಬರೋಬ್ಬರಿ 14,234 ಮಂದಿ ಅರ್ಜಿ ಸಲ್ಲಿಸಿದ್ದು ಆ ಪೈಕಿ ಇಲ್ಲಿವರೆಗೂ 5,513 ಮಂದಿಗೆ ಮಾತ್ರ ಹೊಸ ಪಡಿತರ ಚೀಟಿ ವಿತರಿಸಲಾಗಿದೆ.
ಆಹಾರ (Food) ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಜಿಲ್ಲೆಯಾದ್ಯಂತ 2022-23ನೇ ಸಾಲಿನಲ್ಲಿ ಹೊಸ ಪಡಿತರ ಚೀಟಿಗಾಗಿ(Ration Card) 14,234 ಮಂದಿ ಅರ್ಜಿ ಸಲ್ಲಿಸಿದ್ದು ಆ ಪೈಕಿ ಚಿಂತಾಮಣಿ ಒಂದರಿಂದಲೇ 3,227 ಅರ್ಜಿಗಳು ಸಲ್ಲಿಕೆಯಾದರೆ, ಗೌರಿಬಿದನೂರಿನಿಂದ 2,674, ಚಿಕ್ಕಬಳ್ಳಾಪುರದಿಂದ 2,567 ಅರ್ಜಿಗಳನ್ನು, ಬಾಗೇಪಲ್ಲಿ ತಾಲೂಕಿನಲ್ಲಿ 2,316, ಗುಡಿಬಂಡೆಯಲ್ಲಿ 725, ಶಿಡ್ಲಘಟ್ಟತಾಲೂಕಿನಲ್ಲಿ 2,725 ಮಂದಿ ಅರ್ಜಿ ಸಲ್ಲಿಸಲಾಗಿದ್ದು, ಆ ಪೈಕಿ ಆ ಪೈಕಿ ಬಾಗೇಪಲ್ಲಿಯ 742, ಚಿಕ್ಕಬಳ್ಳಾಪುರದ 1,027, ಚಿಂತಾಮಣಿಯಲ್ಲಿ 1,260, ಗೌರಿಬಿದನೂರಿನಲ್ಲಿ 875, ಗುಡಿಬಂಡೆಯಲ್ಲಿ 341, ಶಿಡ್ಲಘಟ್ಟದಲ್ಲಿ 1,268 ಮಂದಿಗೆ ಹೊಸ ಪಡಿತರ ಚೀಟಿಗಳು ವಿತರಣೆಯಾಗಿದೆ.
3,719 ಅರ್ಜಿ ತಿರಸ್ಕೃತ: ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವೇಳೆ ಸಮರ್ಪಕ ದಾಖಲೆ ಒದಗಿಸದ ಒಟ್ಟು 3,719 ಅರ್ಜಿಗಳನ್ನು ಆಹಾರ ಇಲಾಖೆ ಅಧಿಕಾರಿಗಳು ತಿರಸ್ಕೃರಿಸಿದ್ದಾರೆ. ಅದರಲ್ಲಿ ಬಾಗೇಪಲ್ಲಿ 908, ಚಿಕ್ಕಬಳ್ಳಾಪುರ 679, ಚಿಂತಾಮಣಿ 578, ಗೌರಿಬಿದನೂರು 760, ಗುಡಿಬಂಡೆ 158 ಹಾಗೂ ಶಿಡ್ಲಘಟ್ಟತಾಲೂಕಿನಲ್ಲಿ 363 ಅರ್ಜಿಗಳು ತಿರಸ್ಕೃತಗೊಂಡಿವೆ. ಜಿಲ್ಲೆಯಾದ್ಯಂತ ಒಟ್ಟು 9,232 ಅರ್ಜಿಗಳನ್ನು ವಿಲೇವಾರಿ ಮಾಡಿ ಶೇ.64.86 ರಷ್ಟುಪ್ರಗತಿ ಸಾಧಿಸಲಾಗಿದೆ.
5,002 ಅರ್ಜಿಗಳ ವಿಲೇವಾರಿ ಬಾಕಿ: ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗೆ ಒಟ್ಟಾರೆ ಅರ್ಜಿ ಸಲ್ಲಿಸಿರುವವರಲ್ಲಿ ಬರೋಬ್ಬರಿ 5,002 ಅರ್ಜಿಗಳು ಇನ್ನೂ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸದ ಕಾರಣ ಬಾಕಿ ಇದ್ದು ಆದಷ್ಟುಬೇಗ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಪಡಿತರ ಚೀಟಿ ವಿತರಿಸಬೇಕೆಂಬ ಆಗ್ರಹ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬಡವರ ಹಣ ಉಳಿಸಿದ ಒಂದು ರಾಷ್ಟ್ರ ಒಂದು ಪಡಿತರ
ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಹೆಚ್ಚು ಸಬ್ಸಿಡಿ ದರದ ಧಾನ್ಯಗಳನ್ನು ಖರೀದಿಸುವ ಸ್ವಾತಂತ್ರ್ಯದೊಂದಿಗೆ ಸುಮಾರು 80 ಕೋಟಿ ಭಾರತೀಯರಿಗೆ ಆಹಾರ ಭದ್ರತೆಯ ಅಭೂತಪೂರ್ವ ಸಬಲೀಕರಣ (ಸಶಕ್ತೀಕರಣ) ನೀಡುವ ಮೂಲಕ ದೇಶಾದ್ಯಂತ ಒಂದು ಮೌನ ಕ್ರಾಂತಿ ನಡೆಯುತ್ತಿದೆ. ಇದು ಮೋದಿ ಸರ್ಕಾರದ ಬಡವರ ಪರವಾದ ಯೋಗಕ್ಷೇಮ ವಿಧಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಪಾರ ಸಂಖ್ಯೆಯ ಜನರ ಊಹೆಗಿಂತ ಮಿಗಿಲಾಗಿ ದೇಶದ ಮೇಲೆ ದೊಡ್ಡ ಪರಿವರ್ತನೆಯ ಪ್ರಭಾವವನ್ನು ಉಂಟುಮಾಡುವ ಸಾಮರ್ಥ್ಯವನ್ನು ಈ ಪ್ರಯತ್ನವು ಹೊಂದಿದೆ.
ಒಂದು ರಾಷ್ಟ್ರ-ಒಂದು ಪಡಿತರ ಚೀಟಿ (ಒಎನ್‌ಒಆರ್‌ಸಿ) ಯೋಜನೆಯು ಕೇವಲ ಹಿಂದುಳಿದವರನ್ನು ಬೆಂಬಲಿಸುವ ಮತ್ತು ಪೋಷಿಸುವ ಹೆಚ್ಚಿನ ಪರಿಣಾಮ ಬೀರುವ ಕಲ್ಯಾಣ ಯೋಜನೆ ಅಲ್ಲ. ಇದು ನ್ಯಾಯಬೆಲೆ ಅಂಗಡಿಗಳನ್ನು ತೀವ್ರ ಪೈಪೋಟಿಗೆ ಒಡ್ಡುತ್ತದೆ. ವಲಸೆ ಕಾರ್ಮಿಕರು ಈಗ ನಗರಗಳಲ್ಲಿ ಹೆಚ್ಚು ಸಬ್ಸಿಡಿ ಧಾನ್ಯಗಳನ್ನು ಖರೀದಿಸಲು ಸಮರ್ಥರಾಗಿರುವುದರಿಂದ ಆರ್ಥಿಕತೆ ಚಲನಶೀಲವಾಗಿದೆ. ಅರ್ಹ ಫಲಾನುಭವಿಗಳು ಉಳಿಸಿದ ಸ್ವಲ್ಪ ಹಣದಿಂದ ಸಬ್ಸಿಡಿ ದರದ ಆಹಾರ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ಭಾರತದಲ್ಲಿ ಸುಮಾರು 6 ಕೋಟಿ ಜನರು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. 8 ಕೋಟಿ ಜನರು ತಮ್ಮ ರಾಜ್ಯದೊಳಗೆ ಕಾಲೋಚಿತವಾಗಿ ವಲಸೆ ಹೋಗುತ್ತಾರೆ. ಈ ಯೋಜನೆಯು ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಲಸೆ ಕಾರ್ಮಿಕರಿಗೆ ಪರಿವರ್ತನೀಯ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಹಿಂದೆ, ಅಂತಹ ಕಾರ್ಮಿಕರು ಕೆಲಸ ಮಾಡಲು ನಗರಗಳಿಗೆ ಹೋದಾಗ, ಅವರು ನ್ಯಾಯಬೆಲೆ ಅಂಗಡಿಗಳಿಂದ ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯುವುದರಿಂದ ವಂಚಿತರಾಗಿದ್ದರು. ಅವರು ತಮ್ಮ ಊರಿನ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಾಯಿಸಿದ್ದರೂ ಸಹ, ಅವರ ಕುಟುಂಬಗಳು ಹೆಚ್ಚಿನ ಮಾರುಕಟ್ಟೆದರ ನೀಡಿ ಆಹಾರ ಧಾನ್ಯಗಳನ್ನು ಖರೀದಿಸುತ್ತಿದ್ದವು. ಈಗ ಆ ಸಮಸ್ಯೆಗೆ ಮುಕ್ತಿ ನೀಡಲಾಗಿದೆ.
ಆತ್ಮನಿರ್ಭರ ಬದುಕಿಗೆ ಹಾದಿ:
ಒಎನ್‌ಒಆರ್‌ಸಿ ಯೋಜನೆಯೊಂದಿಗೆ, ಕಾರ್ಮಿಕ ಅಥವಾ ಕೆಲಸಗಾರ ಮತ್ತು ಆತನ ಕುಟುಂಬದ ಸದಸ್ಯರು ಸುಲಭವಾಗಿ ಆಹಾರ ಧಾನ್ಯಗಳನ್ನು ಪಡೆಯುವ ಪ್ರಯೋಜನಗಳನ್ನು ಪಡೆಯಬಹುದು. ಅವರ ಉಳಿತಾಯವು ದೊಡ್ಡದಾಗಿದೆ. ಏಕೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಹೆಚ್ಚಿನ ಸಬ್ಸಿಡಿ ಆಹಾರ ಧಾನ್ಯಗಳನ್ನು ಹೊರತುಪಡಿಸಿ, ಅವರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ ಉಚಿತ ಆಹಾರ ನೀಡಲಾಗುತ್ತಿದೆ.
ಇದು ಭಾರತೀಯ ಕಾರ್ಮಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದರಿಂದ, ಈ ಯೋಜನೆಯು ಈಗ ಆತ್ಮನಿರ್ಭರ ಭಾರತ್ ಅಭಿಯಾನದ ಅಡಿ ಪ್ರಧಾನ ಮಂತ್ರಿ ಅವರ ತಂತ್ರಜ್ಞಾನ ಚಾಲಿತ ವ್ಯವಸ್ಥೆಯ ಸುಧಾರಣೆಗಳ ಒಂದು ಭಾಗವಾಗಿದೆ.