ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ

By Kannadaprabha News  |  First Published Oct 27, 2022, 11:00 AM IST

ಬಿಡಾಡಿ ದನಗಳ ಆರೈಕೆಯೇ ತೊಡ್ಡ ತೊಂದರೆ, ರೈತರಿಗೆ ಗಾಯದ ಮೇಲೆ ಬರೆ ಎಳೆದ ಮಹಾಮಾರಿ


ಮಹೇಶ ಛಬ್ಬಿ

ಗದಗ(ಅ.27):  ಜಿಲ್ಲೆ​ಯಾ​ದ್ಯಂತ ಜಾನು​ವಾರು​ಗ​ಳಿಗೆ ಚರ್ಮ ಗಂಟು ರೋಗ ವ್ಯಾಪ​ಕ​ವಾಗಿ ಹರ​ಡು​ತ್ತಿದ್ದು, ಮುಂಜಾ​ಗೃತ ಕ್ರಮ​ವಾಗಿ ಜಾನು​ವಾರು​ಗ​ಳಿಗೆ ಲಸಿಕೆ ಹಾಕಿ​ಸಿ​ದರೂ ರೋಗ ಹರ​ಡು​ವಿಕೆ ನಿಯಂತ್ರ​ಣಕ್ಕೆ ಬಾರ​ದಂತಾ​ಗಿದ್ದು, ಗದಗ- ಬೆಟಗೇರಿ ಅವಳಿ ನಗ​ರದಲ್ಲಿ ಬಿಡಾಡಿ ದನ​ಗ​ಳು ಚರ್ಮ ಗಂಟು ರೋಗ ಬಾಧೆಗೆ ತುತ್ತಾಗಿ ಬಳಲುತ್ತಿ​ವೆ.

Tap to resize

Latest Videos

ಜಿಲ್ಲೆಯ ಶಿರ​ಹಟ್ಟಿ, ಲಕ್ಷ್ಮೇ​ಶ್ವರ, ಮುಂಡ​ರಗಿ, ರೋಣ, ನರ​ಗುಂದ, ಗಜೇಂದ್ರ​ಗ​ಡ ಸೇರಿ​ದಂತೆ ತಾಲೂ​ಕಿನ ಗ್ರಾಮೀಣ ಭಾಗ​ದಲ್ಲಿ ಚರ್ಮ ಗಂಟು ರೋಗ ಬಾಧೆಗೆ ಸಾಕಷ್ಟು ಜಾನು​ವಾ​ರು​ಗಳು ಸಾವನ್ನಪ್ಪಿದ್ದು, ಇದ​ರಿಂದ ಜಾನು​ವಾ​ರು​ಗ​ಳನ್ನು ಹೇಗೆ ರಕ್ಷಿ​ಸ​ಬೇಕು ಎಂಬುದು ರೈತ​ರಲ್ಲಿ ಯಕ್ಷ​ಪ್ರ​ಶ್ನೆ​ಯಾ​ಗಿ ಉಳಿ​ದಿದೆ. ಕೃಷಿ ಚಟು​ವ​ಟಿ​ಕೆ​ಗ​ಳಿಗೆ, ಹೈನು​ಗಾ​ರಿ​ಕೆಗೆ ತಂದ ಜಾನು​ವಾರುಗಳು ಚರ್ಮ​ಗಂಟು ರೋಗ ಬಾಧೆಗೆ ತುತ್ತಾ​ಗು​ತ್ತಿ​ದ್ದು, ರೈತ​ರನ್ನು ಮತ್ತಷ್ಟುಸಂಕ​ಷ್ಟಕ್ಕೆ ದೂಡಿದೆ. ಮೊದಲೇ ರಣ​ಭೀ​ಕರ ಮುಂಗಾರು ಮಳೆಗೆ ಮನೆ, ಹೊಲ, ಬೆಳೆ​ದ ಬೆಳೆ ಕಳೆ​ದು​ಕೊಂಡು ಕಂಗಾ​ಲಾ​ಗಿದ್ದ ರೈತ​ರಿಗೆ ಜಾನು​ವಾರು​ಗ​ಳಿಗೆ ವಕ್ಕ​ರಿ​ಸಿದ ರೋಗ​ದಿಂದ ಗಾಯದ ಮೇಲೆ ಬರೆ ಎಳೆ​ದಂತಾ​ಗಿದೆ.

Lumpy Skin Disease: ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಬಂತು ಪರಿಹಾರ!

ಬಿಡಾಡಿ ದನ​ಗ​ಳಿಗೆ ಆರೈಕೆ ಹೇಗೆ?:

ಚರ್ಮ ಗಂಟು ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸಾಕಿದ ಜಾನು​ವಾರು​ಗ​ಳು ರೋಗ ಬಾಧೆ​ಯಿಂದ ಬಳ​ಲು​ತ್ತಿ​ದ್ದರೆ ಅದಕ್ಕೆ ತಕ್ಷ​ಣವೇ ಪಶು ಚಿಕಿ​ತ್ಸಾ​ಲ​ಯಕ್ಕೆ ಕರೆ​ದು​ಕೊಂಡು ಹೋಗಿ ಮುಂಜಾ​ಗೃತ ಲಸಿ​ಕೆ​ಯಾ​ಗಲಿ ಅಥವಾ ಚಿಕಿ​ತ್ಸೆ​ಯಾ​ಗಲಿ ನೀಡಿ ಆರೈಕೆ ಮಾಡು​ತ್ತಾರೆ. ಅಷ್ಟಾ​ದರೂ ಕೂಡಾ ರೋಗದ ತೀವ್ರ​ತೆ​ಯಿಂದ ಜಿಲ್ಲೆ​ಯಲ್ಲಿ ಸಾಕಷ್ಟುಜಾನು​ವಾ​ರ​ಗಳು ಸಾವ​ನ್ನ​ಪ್ಪಿವೆ. ಅಂತ​ದ​ರಲ್ಲಿ ಬಿಡಾಡಿ ದನ​ಗಳಿಗೆ ಯಾರು ಆರೈಕೆ ಮಾಡು​ವರು ಎಂಬ ಪ್ರಶ್ನೆ ಪ್ರಜ್ಞಾ​ವಂತ​ರಲ್ಲಿ ಕಾಡು​ತ್ತಿದೆ. ಬಿಡಾಡಿ ದನ​ಗಳು ಗುಂಪು ಗುಂಪಾ​ಗಿಯೇ ಇರು​ವು​ದ​ರಿಂದ ಒಂದು ಜಾನು​ವಾರು ರೋಗದಿಂದ ಬಳ​ಲು​ತ್ತಿ​ದ್ದರೆ ಇನ್ನು​ಳಿದ ಜಾನು​ವಾ​ರು​ಗ​ಳಿಗೂ ತೀವ್ರ​ವಾಗಿ ರೋಗ ಹರಡು​ತ್ತದೆ. ಜಿಲ್ಲಾ​ಡ​ಳಿ​ತವು ಬಿಡಾಡಿ ದನ​ಗ​ಳಿಗೆ ಮುಂಜಾ​ಗೃತ ಕ್ರಮ​ವಾಗಿ ಲಸಿಕೆ ಹಾಕಲು ಹಾಗೂ ರೋಗ​ದಿಂದ ಬಳ​ಲು​ತ್ತಿ​ರುವ ಜಾನು​ವಾ​ರು​ಗ​ಳಿಗೆ ಚಿಕಿ​ತ್ಸೆಗೆ ಕ್ರಮ ಕೈಗೊ​ಳ್ಳ​ಬೇಕು ಎಂಬುದು ಸಾರ್ವ​ಜ​ನಿ​ಕರ ಆಗ್ರ​ಹ​ವಾ​ಗಿ​ದೆ.

ಚರ್ಮ​ಗಂಟು ರೋಗಕ್ಕೆ ತುತ್ತಾಗಿರುವ ಜಾನು​ವಾ​ರು​ಗ​ಳನ್ನು ಕಳೆ​ದು​ಕೊಳ್ಳುತ್ತಿರುವ ರೈತ ಸಮು​ದಾಯದಲ್ಲಿ ಆತಂಕ ಮೂಡಿ​ಸಿದೆ. ವ್ಯಾಪ​ಕ​ವಾಗಿ ಹರ​ಡು​ತ್ತಿ​ರುವ ರೋಗದ ನಿಯಂತ್ರ​ಣ​ಕ್ಕೆ ಪರಿ​ಣಾ​ಮ​ಕಾ​ರಿ ಚಿಕಿತ್ಸೆ ಒದ​ಗಿ​ಸ​ಬೇಕು. ಜಾನು​ವಾ​ರ​ಗ​ಳನ್ನು ಕಳೆ​ದು​ಕೊಂಡ ರೈತ​ರಿಗೆ ಸರ್ಕಾರ ಕೂಡಲೆ ಪರಿ​ಹಾರ ಒದ​ಗಿ​ಸ​ಬೇಕು. ಬಿಡಾಡಿ ದನ​ಗ​ಳು ರೋಗ​ದಿಂದ ಬಳ​ಲು​ತ್ತಿದ್ದು, ಅವುಗ​ಳ ಚಿಕಿ​ತ್ಸೆಗೆ ಸಂಬಂಧ​ಪಟ್ಟ ಅಧಿ​ಕಾ​ರಿ​ಗಳು ಕೂಡಲೇ ಮುಂದಾ​ಗ​ಬೇ​ಕು ಹಾಗೂ ಜಿಲ್ಲೆಯ ಎಲ್ಲ ಬಿಡಾಡಿ ದನ​ಗ​ಳಿಗೂ ಮುಂಜಾ​ಗೃತ ಕ್ರಮ​ವಾಗಿ ಚುಚ್ಚು​ಮದ್ದು ಹಾಕು​ವು​ದಕ್ಕೆ ಕ್ರಮ ಕೈಗೊ​ಳ್ಳ​ಬೇಕು ಅಂತ ಮುಳ​ಗುಂದ ರೈತ​ ಸಂಘದ ಅಧ್ಯ​ಕ್ಷ ಬಸ​ವ​ರಾಜ ಕರಿ​ಗಾರ ತಿಳಿಸಿದ್ದಾರೆ.  
 

click me!