ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!

Kannadaprabha News   | Asianet News
Published : Apr 15, 2021, 01:55 PM ISTUpdated : Apr 15, 2021, 02:30 PM IST
ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!

ಸಾರಾಂಶ

ಸೆಲ್ಫಿ ತಗೆದುಕೊಳ್ಳುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದಿದ್ದ ಜೋಡಿಗಳ ಶವ ಪತ್ತೆ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿ ಸೂಪಾ ಜಲಾಶಯದ ಹಿನ್ನಿರಿನಲ್ಲಿ ನಡೆದಿದ್ದ ದುರ್ಘಟನೆ| ಮನೆಯಲ್ಲಿ ಪಾಲಕರಿಗೆ ತಿಳಿಸದೆ ಪ್ರವಾಸಕ್ಕಾಗಿ ಬಂದಿದ್ದ ಜೋಡಿ|   

ಜೋಯಿಡಾ(ಏ.15): ತಾಲೂಕಿನ ಗಣೇಶಗುಡಿ ಸೂಪಾ ಜಲಾಶಯದ ಹಿನ್ನಿರಿನ ಕಾಳಿ ಹರಿವಿನಲ್ಲಿ ಬ್ರೀಜ್‌ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದಿದ್ದ ಜೋಡಿಗಳ ಶವ ಮಂಗಳವಾರ ಪತ್ತೆಮಾಡುವಲ್ಲಿ ಅಗ್ನಿಶಾಮಕ ದಳ ಹಾಗೂ ಪ್ಲಾಯ್‌ ಕ್ಯಾಚರರ ತಂಡ ಯಶಸ್ವಿಯಾಗಿದೆ. 

ಯುವತಿಯನ್ನು ಬೀದರ್‌ ಮೂಲದ ರಕ್ಷಿತಾ ಹಾಗೂ ಯುವಕನನ್ನು ಪುರುಷೋತ್ತಮ ಪಾಟೀಲ್‌ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪಾಲಕರಿಗೆ ತಿಳಿಸದೆ ಇವರಿಬ್ಬರು ಪ್ರವಾಸಕ್ಕಾಗಿ ಬಂದಿದ್ದರು. 

'ಗೋಹತ್ಯೆಯಿಂದಾಗಿ ಕೊರೋನಾ ಉಲ್ಬಣ'

ದಾಂಡೇಲಿಯಿಂದ ರಿಕ್ಷಾ ಮೂಲಕ ಬಂದ ಇವರು ಸೆಲ್ಫಿ ತೆಗೆಯುವಾಗ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಅಂತಿಮವಾಗಲಿದೆ.
 

PREV
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!