ಚಿಕ್ಕಮಗಳೂರು: ಪಾರ್ಕಿನಲ್ಲೇ ವಿಷ ಕುಡಿದ ಪ್ರೇಮಿಗಳು

By Web Desk  |  First Published Jan 8, 2019, 12:16 AM IST

ಯುವ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿದೆ.  ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಪಾರ್ಕ್​ವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಗಾಂಧಿ ಪಾರ್ಕಿನಲ್ಲಿ  ಮಧು (20) ಮತ್ತು  ರೂಪಾ (18) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಚಿಕ್ಕಮಗಳೂರು[ಜ.06]  ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿದೆ. ನಗರದ ಗಾಂಧಿ ಪಾರ್ಕ್‌ನಲ್ಲಿ ಜೋಡಿ ವಿಷ ಸೇವಿಸಿದೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೊದಲು ಯುವಕ ವಿಷ ಸೇವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಯುವತಿಯೂ ವಿಷ ಕುಡಿದಿದ್ದಾಳೆ. ಘಟನೆ ನೋಡಿದವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಸಹ ಒಂದು ಗಂಟೆ ಬಳಿಕ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Tap to resize

Latest Videos

ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ರೂಪಾಳನ್ನು ಚಿಕ್ಕಮಗಳೂರಿನ ಶಂಕರಪುರದ ನಿವಾಸಿ ಮತ್ತು ಮಧುವನ್ನು ಗಾಳಿಗಂಡಿ ನಿವಾಸಿ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆ ಮುಂದೆ ಎರಡು ಕುಟುಂಬಗಳ ರೋದನೆ ಮುಗಿಲು ಮುಟ್ಟಿತ್ತು.

click me!