50 ಸಾವಿರ ರುಪಾಯಿ ಸಾಲ ಮರುಪಾವತಿ ಮಾಡುವಂತೆ ವಿಜಯ ಬ್ಯಾಂಕ್ ನೋಟಿಸ್ ನೀಡಿತ್ತು. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತರೀಕೆರೆ[ನ.13]: ಬ್ಯಾಂಕ್ ಸಾಲ ತೀರಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಗಂಡನೊಂದಿಗೆ ಜಗಳವಾಡಿಕೊಂಡು ತನ್ನ 2 ವರ್ಷದ ಮಗುವಿನೊಂದಿಗೆ ತಾಯಿಯೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ಸಾಲ ಮರುಪಾವತಿ ಕುರಿತಂತೆ ಇದೇ ತಿಂಗಳ 2ರಂದು ವಿಜಯ ಬ್ಯಾಂಕ್ ನೋಟೀಸ್ ನೀಡಿತ್ತು. ತೋಟ ಮಾರಿ ಸಾಲ ತೀರಿಸುವ ವಿಚಾರದಲ್ಲಿ ದಂಪತಿ ನಡುವೆ ಕಲಹ ಉಂಟಾಗಿತ್ತು. ಇದರಿಂದ ಮನನೊಂದು ಇಂದು ಮುಂಜಾನೆ ಅನು[23 ವರ್ಷ], 2 ವರ್ಷದ ದರ್ಶನ್’ನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
50 ಸಾವಿರ ರುಪಾಯಿ ಸಾಲ ಮರುಪಾವತಿ ಮಾಡುವಂತೆ ವಿಜಯ ಬ್ಯಾಂಕ್ ನೋಟಿಸ್ ನೀಡಿತ್ತು. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.