ಮಹಿಳಾ PSIಗೆ ಕೈಕೊಟ್ಟ PSI : ಬಲವಂತದ ಲೈಂಗಿಕ ಸಂಪರ್ಕ-ಗರ್ಭಪಾತವನ್ನು ಮಾಡಿಸಿದ್ದ

Kannadaprabha News   | Asianet News
Published : Dec 11, 2020, 11:50 AM ISTUpdated : Dec 11, 2020, 12:18 PM IST
ಮಹಿಳಾ PSIಗೆ ಕೈಕೊಟ್ಟ PSI : ಬಲವಂತದ ಲೈಂಗಿಕ ಸಂಪರ್ಕ-ಗರ್ಭಪಾತವನ್ನು ಮಾಡಿಸಿದ್ದ

ಸಾರಾಂಶ

ಮಹಿಳಾ ಪಿಎಸ್‌ಐಗೆ ಮತ್ತೋರ್ವ ಪಿಎಸ್‌ಐ ಪ್ರೀತಿ ಹೆಸರಲ್ಲಿ ನಾಟಕವಾಡಿ ಇದೀಗ ಮೋಸ ಮಾಡಿದ್ದಾನೆ. ಆಕೆಯೊಂದಿಗೆ ಎಲ್ಲವನ್ನೂ ಮುಗಿಸಿ ಇದೀಗ ಆಕೆಗೂ ತನಗೂ ಸಂಬಂಧವಿಲ್ಲ ಎಂದು ದೂರವಿದ್ದಾನೆ. 

ಮೈಸೂರು (ಡಿ.11): ಪ್ರೀತಿಸಿ ಕೈಕೊಟ್ಟಸಬ್‌ ಇನ್ಸ್‌ಪೆಕ್ಟರ್‌ ವಿರುದ್ಧ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ರೊಬ್ಬರು ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎನ್‌.ಆರ್‌.ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್‌ಐ ಆನಂದ್‌ ಎಂಬವರ ವಿರುದ್ಧ ನಗರದ ಮತ್ತೊಂದು ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಎಸ್‌ಐ ದೂರು ನೀಡಿದ್ದಾರೆ. ಇಬ್ಬರ ನಡುವೆ 2017ರಲ್ಲಿ ಪ್ರೇಮಾಂಕುರವಾಗಿತ್ತು.

 ಮದುವೆಯಾಗುವುದಾಗಿ ನಂಬಿಸಿ ಹಲವಾರು ಕಡೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿ, ಗರ್ಭವತಿಯನ್ನಾಗಿ ಮಾಡಿದ್ದ ಎಂದು ಆರೋಪಿಸಲಾಗಿದೆ. 

ಈಗ ಆನಂದ್‌ ಬೇರೊಂದು ಮದುವೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಆತನ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳಾ ಎಸ್‌ಐ ದೂರು ನೀಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮದುವೆ ಎರಡು ದಿನ ಇರುವಾಗ ಹುಡುಗ ಎಸ್ಕೇಪ್ : ಕಾರಣ..?

ಈ ವಿಚಾರ ತಿಳಿದ ನಂತರ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಹಾರ್ಲಿಕ್ಸ್‌, ಡ್ರೈ ಫ್ರೂಟ್ಸ್‌, ವಿಟಮಿನ್‌ ಮಾತ್ರೆಗಳೆಂದು ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದ. ಮದುವೆಯಾಗುವಂತೆ ಕೇಳಿದಾಗ ಸಣ್ಣಪುಟ್ಟವಿಚಾರಗಳಿಗೆ ಜಗಳ ಮಾಡಿ, ನೀನು ಬೇರೆ ಮದುವೆ ಮಾಡಿಕೊಂಡು ಚೆನ್ನಾಗಿರು, ನನ್ನನ್ನು ಕೇಳಿದರೆ ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದ. ಈಗ ಆನಂದ್‌ ಬೇರೊಂದು ಮದುವೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಆತನ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳಾ ಎಸ್‌ಐ ದೂರು ನೀಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!