ಪ್ರಯಾಣಿಕರೇ ಗಮನಿಸಿ : ಬದಲಾಗಿದೆ ರೈಲುಗಳ ಟೈಂ ಟೇಬಲ್

By Kannadaprabha News  |  First Published Dec 11, 2020, 10:55 AM IST

ಪ್ರಯಾಣಿಕರೇ ಗಮನಿಸಿ. ರಾಜ್ಯದ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ವಿಶೇಷ ರೈಲುಗಳ ಸಂಚಾರದಿಂದ ಈ ಬದಲಾವಣೆಯಾಗಿದೆ. 


ಮೈಸೂರು (ಡಿ.11) :  ನಿಯಮಿತ ವಿಶೇಷ ರೈಲುಗಳು ಮತ್ತು ಹಬ್ಬದ ವಿಶೇಷ ರೈಲುಗಳು ಆರಂಭಗೊಂಡ ಬಳಿಕ ಪರಿಚಾಲನಾ ಕಾರಣಗಳಿಗಾಗಿ ಬಹಳಷ್ಟುಪ್ರಯಾಣಿಕ ರೈಲು ಸೇವೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ನೈಋುತ್ಯ ರೈಲ್ವೆಯಿಂದ ಆರಂಭಗೊಳ್ಳುವ/ ಅಂತ್ಯಗೊಳ್ಳುವ ರೈಲುಗಳು ಮತ್ತು ನೈಋುತ್ಯ ರೈಲ್ವೆಯ ವಲಯದ ಮೂಲಕ ಸಾಗುವ ಹಲವು ರೈಲುಗಳಿಗೆ ಅವುಗಳು ಆರಂಭದ ನಿಲ್ದಾಣದಿಂದ ಹೊರಡುವ ಸಮಯ, ಮಾರ್ಗದಲ್ಲಿನ ನಿಲ್ದಾಣಗಳನ್ನು ತಲುಪುವ ಸಮಯ, ಅಂತಿಮ ನಿಲ್ದಾಣಕ್ಕೆ ಆಗಮಿಸುವ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಆದ್ದರಿಂದ ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ಆರಂಭಕ್ಕೆ ಸಾಕಷ್ಟುಸಮಯ ಮೊದಲೇ ತಾವು ಪ್ರಯಾಣ ಮಾಡಲಿರುವ ರೈಲಿನ ಪರಿಷ್ಕೃತ ಸಮಯವನ್ನು ಏಕೀಕೃತ ವಿಚಾರಣಾ ದೂರವಾಣಿ ಸಂಖ್ಯೆ 139 ಅಥವಾ ನ್ಯಾಷನಲ್‌ ಟ್ರೈನ್‌ ಎನ್‌ಕ್ವೈರಿ ಸಿಸ್ಟಮ್‌ ವೆಬ್‌ಸೈಟ್‌ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಹತ್ತಿರದ ಆರಕ್ಷಣಾ ಕೌಂಟರ್‌/ ರೈಲು ನಿಲ್ದಾಣಗಳಲ್ಲಿರುವ ಅಧಿಕೃತ ವ್ಯಕ್ತಿಗಳ ಬಳಿ ವಿಚಾರಿಸಿ ಪರಿಶೀಲಿಸಿಕೊಳ್ಳಬೇಕು.

Latest Videos

undefined

ಮಂಗಳೂರು - ಬೆಂಗಳೂರು ಮಧ್ಯೆ ವಿಶೇಷ ರೈಲು : ಇಲ್ಲಿದೆ ಟೈಮ್ ಟೇಬಲ್ .

ಈ ವಿಶೇಷ ರೈಲುಗಳಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಸೂಚಿಸಿರುವ ಆರೋಗ್ಯಕ್ಕೆ ಸಂಬಂಧಿಸಿದ ನಿಯಮಾವಳಿಗಳಾದ ಮಾಸ್ಕ್‌ ಧರಿಸುವುದು, ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿತಕ್ಕದ್ದು.

ರೈಲಿನ ಸಮಯ ಬದಲಾವಣೆ/ ರೈಲುತಡವಾಗಿ ಚಲಿಸುತ್ತಿರುವುದು ಇವೇ ಮೊದಲಾದ ಮಾಹಿತಿಗಳನ್ನು ಪಡೆದುಕೊಳ್ಳಲು ರೈಲು ಬಳಕೆದಾರರು ಆರಕ್ಷಣಾ ಟಿಕೆಟ್‌ಗಳನ್ನು ಬುಕ್‌ ಮಾಡುವಾಗ ಪ್ರಯಾಣ ಮಾಡುವ ವ್ಯಕ್ತಿಗಳ ದೂರವಾಣಿ ಸಂಖ್ಯೆಯನ್ನು ನೀಡಬೇಕು ಎಂದು ರೈಲ್ವೆ ಇಲಾಖೆಯು ಮನವಿ ಮಾಡಿದೆ.

click me!