ಸುವರ್ಣ ನ್ಯೂಸ್ ಸಂಕಲ್ಪಕ್ಕೆ ಸ್ಪಂದಿಸಿದ ಕರುನಾಡು

By Web Desk  |  First Published Aug 18, 2018, 3:52 PM IST

'ಸಾಧ್ಯವಾದಷ್ಟು ಸಹಾಯ ಮಾಡಿ...' ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್.ಕಾಮ್ ಕನ್ನಡಿಗರನ್ನು ಕೇಳಿ ಕೊಂಡಿದ್ದು ಇಷ್ಟೆ. ಆದರೆ, ಉದಾರ ಮನಸ್ಸಿನಿಂದ ಕೈ ತುಂಬಾ ಅಗತ್ಯ ವಸ್ತುಗಳನ್ನು ತಂದು ಕೊಟ್ಟ ಕನ್ನಡಿಗರ ಹೃದಯ ವೈಶಾಲ್ಯತೆಗೆ ಏನು ಹೇಳುವುದು? ಧನ್ಯವಾದ ಕರ್ನಾಟಕ.


ಬೆಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ನೀಡಲು ಸುವರ್ಣ ನ್ಯೂಸ್ ಹಾಗೂ ಸುವರ್ಣನ್ಯೂಸ್.ಕಾಮ್ ಕರೆ ನೀಡಿದ್ದು, ಕನ್ನಡಿಗರು ತುಂಬು ಹೃದಯದಿಂದ ಸ್ಪಂದಿಸಿದ್ದಾರೆ. ಈ ಕರೆಗೆ ನಿರೀಕ್ಷೆಗೂ ಮೀರಿ ಜನರು ಸ್ಪಂದಿಸುತ್ತಿದ್ದು, ಅಗತ್ಯ ವಸ್ತುಗಳನ್ನು ನಮ್ಮ ಕಚೇರಿಗೆ ತಲುಪಿಸಿದ್ದಾರೆ. ಇನ್ನೂ ನೆರವಿನ ಮಹಾಪೂರ ಹರಿದು ಬರುತ್ತಲೇ ಇದ್ದು, ಸಾಕೆಂದು ನಾವೇ ಮನವಿ ಮಾಡಿ ಕೊಳ್ಳುತ್ತಿದ್ದೇವೆ.

ಅಕ್ಕಿ, ನೀರು, ಜ್ಯೂಸ್, ಔಷಧಿಗಳು, ಸ್ಯಾನಿಟರಿ ಪ್ಯಾಡ್ಸ್, ಬಿಸ್ಕತ್, ಬ್ರೆಡ್, ಹೊದಿಕೆ..ಹೀಗೆ ಮೂಟೆ ಮೂಟೆ ಅಗತ್ಯ ವಸ್ತುಗಳು ಬಂದಿದ್ದು, ಲಾರಿಗಳ ಮೂಲಕ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿದೆ. 

Tap to resize

Latest Videos

ಕನ್ನಡಿಗರ ಈ ಸ್ಪಂದನೆಗೆ ನಮ್ಮ ಧನ್ಯವಾದಗಳು.

click me!