ಗದಗ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ

By Anusha Kb  |  First Published Sep 28, 2022, 8:02 PM IST

ಅಗ್ನಿ ಸುರಕ್ಷತಾ ಸರ್ಟಿಫಿಕೇಟ್ (ನಿರಪೇಕ್ಷಣಾ ಪತ್ರ)ನೀಡೋದಕ್ಕೆ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. 


ಗದಗ : ಅಗ್ನಿ ಸುರಕ್ಷತಾ ಸರ್ಟಿಫಿಕೇಟ್ (ನಿರಪೇಕ್ಷಣಾ ಪತ್ರ)ನೀಡೋದಕ್ಕೆ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. 

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲಿಮಠ ಶಾಲೆಗೆ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಕೊಡಲು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎನ್ ಎಸ್ ಕಗ್ಗಲಗೌಡರ್ ಹಣದ ಬೇಡಿಕೆ ಇಟ್ಟಿದ್ದರು. ಕೂಡ್ಲಿಮಠ ಶಾಲೆಯ ಮುಖ್ಯಸ್ಥ ಸಿಬಿ ಮೋಗಲಿ ಅವರಿಗೆ ಸುರಕ್ಷತಾ ಪ್ರಮಾಣ ಪತ್ರ (fire Safety Certificate) ಬೇಕಾದಲ್ಲಿ 10 ಸಾವಿರ ನೀಡುವಂತೆ ಬೇಡಿಕೆ ಇರಿಸಿದ್ದರು. ಆದರೆ ನಂತರ 7 ಸಾವಿರ ರೂಪಾಯಿಗೆ ಒಪ್ಪಂದವಾಗಿತ್ತು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಸಂಸ್ಥೆಯ ಮುಖ್ಯಸ್ಥರು ದೂರು ನೀಡಿದ್ದರು. ಪ್ರಕರಣವನ್ಮ ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಪೊಲೀಸರು (Lokayukta Police) ದಾಳಿ ನಡೆಸಿ ಅಗ್ನಿ ಶಾಮಕ ಅಧಿಕಾರಿ ಎನ್ ಎಸ್ ಕಗ್ಗಲಗೌಡರ್ (S.S. Khaggalagowder) ಅವರನ್ನ ಬಲೆಗೆ ಕೆಡವಿದ್ದಾರೆ. 

Tap to resize

Latest Videos

undefined

Bengaluru Rural: ತಾಲೂಕು ಕಛೇರಿ ಮೇಲೆ ಲೋಕಾಯುಕ್ತಾ ದಾಳಿ ಬೆಚ್ಚಿ ಬಿದ್ದ ಸಿಬ್ಬಂದಿ

ಲೋಕಾಯುಕ್ತ ಎಸ್ ಸತೀಶ್ ಚಿಟಗುಬ್ಬಿ, ಡಿವೈಎಸ್ಪಿ ಶಂಕರ ಎಮ್ ರಾಗಿ (Shankar M. Ragi) ಮಾರ್ಗದರ್ಶನದಲ್ಲಿ  ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ (Ravi purushotam) ಹಾಗೂ ಆಜೀಜ್ ಕಲಾದಗಿ ನೇತೃತ್ವದಲ್ಲಿ ದಾಳಿ ಈ ದಾಳಿ ನಡೆದಿದೆ. ಕಗ್ಗಲಗೌಡರ್ ಬಳಿ ಇದ್ದ 7 ಸಾವಿರ ರೂಪಾಯಿ‌ ನಗದನ್ನು ಸೀಜ್ ಮಾಡಲಾಗಿದೆ. ಸದ್ಯ ಅಗ್ನಿ ಶಾಮಕ ಅಧಿಕಾರಿ ಎನ್ ಎಸ್ ಕಗ್ಗಲಗೌಡರ್‌ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
 

click me!