ಬೇರ್ಪಡಿಸದೆ ತ್ಯಾಜ್ಯ ನೀಡುವವರಿಗೆ ದಂಡ : ಲೋಕಾಯುಕ್ತ ಸೂಚನೆ

By Kannadaprabha News  |  First Published Nov 1, 2021, 9:27 AM IST
  • ಹಸಿ ಹಾಗೂ ಒಣ ಕಸ ಬೇರ್ಪಡಿಸದೇ ತ್ಯಾಜ್ಯ ಕೊಡುವ ಮನೆಗಳಿಗೆ ದಂಡ ವಿಧಿಸಬೇಕು
  • ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ವಾಸ ಯೋಗ್ಯವಲ್ಲದ ಕಟ್ಟಡಗಳನ್ನು ಪತ್ತೆ ಮಾಡಿ ಅವುಗಳನ್ನು ತೆರವುಗೊಳಿಸುವಂತೆ ಸೂಚನೆ

 ಬೆಂಗಳೂರು (ಅ.01):  ಹಸಿ ಹಾಗೂ ಒಣ ಕಸ (garbage) ಬೇರ್ಪಡಿಸದೇ ತ್ಯಾಜ್ಯ ಕೊಡುವ ಮನೆಗಳಿಗೆ ದಂಡ (Penalty) ವಿಧಿಸಬೇಕು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ವಾಸ ಯೋಗ್ಯವಲ್ಲದ ಕಟ್ಟಡಗಳನ್ನು (Building) ಪತ್ತೆ ಮಾಡಿ ಅವುಗಳನ್ನು ತೆರವುಗೊಳಿಸುವಂತೆ ಉಪ ಲೋಕಾಯುಕ್ತ ಬಿ.ಎಸ್‌. ಪಾಟೀಲ್‌ (BS patil) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆಯ ರಾಜರಾಜೇಶ್ವರಿ ನಗರ (Rajrajeshwari Nagar) ವಲಯ ಕಚೇರಿಗೆ ಭೇಟಿ ನೀಡಿದ ಅವರು, ಅಲ್ಲಿನ ಕಾರ್ಯ ಚಟುವಟಿಕೆ ಪರಿಶೀಲಿಸಿ ಮಾತನಾಡಿದರು. ನಗರದಲ್ಲಿ ತ್ಯಾಜ್ಯ ವಿಲೇವಾರಿ, ಖಾತೆಗಳ ವಿಷಯ, ಒಳ ಚರಂಡಿ, ರಸ್ತೆ ಅಭಿವೃದ್ಧಿ (Road) ಸೇರಿದಂತೆ ಜನಸಾಮಾನ್ಯರು ಯಾವುದೇ ಸಮಸ್ಯೆಗಳಿಗೆ ಒಳಗಾಗದಂತೆ ಬಿಬಿಎಂಪಿ (BBMP) ಅಧಿಕಾರಿಗಳು, ಸಿಬ್ಬಂದಿಗಳು ಮೂಲಸೌಕರ್ಯ ಒದಗಿಸಬೇಕು ಎಂದು ಹೇಳಿದರು.

Latest Videos

undefined

ಕಾಫಿನಾಡಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ಕಸದ ರಾಶಿ, ಅಧಿಕಾರಿಗಳು, ಸ್ಥಳೀಯರಿಂದ ಸ್ವಚ್ಛತಾ ಅಭಿಯಾನ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ (Assembly Constituency) ಕಳಪೆ ಕಾಮಗಾರಿ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಮಳೆಯಿಂದ ರಾಜಕಾಲುವೆ ನೀರು ಬಡಾವಣೆಗೆ ನುಗ್ಗುತ್ತಿರುವ ಕುರಿತು ವರದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಎಂಜಿನಿಯರ್‌ಗಳು (Engineering) ಕರ್ತವ್ಯವನ್ನು ಜವಾಬ್ದಾರಿಯುತವಾಗಿ ಕೈಗೊಳ್ಳಬೇಕು. ತ್ಯಾಜ್ಯ ವಿಲೇವಾರಿಯಲ್ಲಿಯೂ ಘನತ್ಯಾಜ್ಯ ವಿಭಾಗದ ಎಂಜಿನಿಯರ್‌ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೆ ಕೊಡುವ ಮನೆಗಳಿಗೆ ದಂಡ ವಿಧಿಸಬೇಕೆಂದು ಸೂಚನೆ ನೀಡಿದರು.

ಪ್ರವಾಸಿಗರಿಂದ ಕಸದ ರಾಶಿಯಾಗಿದೆ ಬಲ್ಲಾಳರಾಯನ ದುರ್ಗ, ಸ್ಥಳೀಯರ ಆಕ್ರೋಶ

ವಿಶ್ವೇಶ್ವರಯ್ಯ ಬಡಾವಣೆ ಮುಖ್ಯರಸ್ತೆ, ಮಾಗಡಿ ರಸ್ತೆ, ಪೀಣ್ಯ, ಗೊರಗುಂಟೆಪಾಳ್ಯ ರಸ್ತೆ ಸೇರಿದಂತೆ ರಾಜರಾಜೇಶ್ವರಿ ನಗರ ವಲಯದ ಅನೇಕ ರಸ್ತೆಗಳು ಮಳೆಯಿಂದ ಹದಗೆಟ್ಟಿವೆ. ಕೂಡಲೇ ಅವುಗಳನ್ನು ಅಭಿವೃದ್ಧಿಪಡಿಸಿ, ಕಿತ್ತು ಹೋಗಿರುವ ಮತ್ತು ರಸ್ತೆಗಳು ಗುಂಡಿಗಳನ್ನು ಶೀಘ್ರವೇ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದರು.

ದಸರಾ ಸಂದರ್ಭ  ಎಲ್ಲೆಡೆ ಕಸದ  ರಾಶಿ

 

 ಆಯುಧ ಪೂಜೆ(Ayudha Puja) ಹಾಗೂ ವಿಜಯ ದಶಮಿ(Vijayadashami) ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ(Bengaluru) ಸುಮಾರು ಎರಡೂವರೆ ಸಾವಿರ ಟನ್‌ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದ್ದು, ನಗರದ ಮಾರುಕಟ್ಟೆ ಪ್ರದೇಶಗಳು ಹಾಗೂ ಹಲವು ರಸ್ತೆಗಳ ಬದಿಯಲ್ಲಿ ರಾಶಿಗಟ್ಟಲೇ ಕಸ ಬಿದ್ದಿದೆ.

ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ನಿತ್ಯ ಸುಮಾರು ನಾಲ್ಕು ಸಾವಿರ ಟನ್‌ ತ್ಯಾಜ್ಯ(Garbage) ಉತ್ಪಾದನೆಯಾಗುತ್ತದೆ. ಕಳೆದೆರಡು ದಿನಗಳಿಂದ ಸುಮಾರು 6,500 ಟನ್‌ ತ್ಯಾಜ್ಯ ಸೃಷ್ಟಿಯಾಗಿದೆ. ಅಂದರೆ, ಸುಮಾರು ಎರಡೂವರೆ ಸಾವಿರ ಟನ್‌ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಪಾಲಿಕೆ(BBMP) ಕಸದ ಟಿಪ್ಪರ್‌ಗಳು ಹಾಗೂ ಕ್ಯಾಂಪ್ಯಾಕ್ಟರ್‌ಗಳನ್ನು ಚಾಲಕರು ಸ್ವಚ್ಛಗೊಳಿಸಿ ಪೂಜೆ ಮಾಡಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಸಮರ್ಪಕವಾಗಿ ಕಸ ವಿಲೇವಾರಿ(Garbage Disposal) ಸಾಧ್ಯವಾಗಿಲ್ಲ. ಹೀಗಾಗಿ ಮಾರುಕಟ್ಟೆ(Market) ಪ್ರದೇಶಗಳು, ಪಾದಚಾರಿ ಮಾರ್ಗಗಳು, ಮೈದಾನದ ಮೂಲೆಗಳು, ಖಾಲಿ ನಿವೇಶನಗಳು ಸೇರಿದಂತೆ ಹಲವೆಡೆ ರಾಶಿಗಟ್ಟಲೇ ಕಸ ಬಿದ್ದಿದೆ.

ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಂದ ಮಾವಿನ ಎಲೆ, ಬಾಳೆಕಂದು, ಬೂದುಕುಂಬಳಕಾಯಿ, ಹೂವು ಸೇರಿದಂತೆ ಇತರೆ ವಸ್ತುಗಳನ್ನು ಗುರುವಾರ ನಗರಕ್ಕೆ ತಂದು ಮಾರಾಟ ಮಾಡಿದರು. ಪ್ರಮುಖವಾಗಿ ಕೆ.ಆರ್‌.ಮಾರುಕಟ್ಟೆ, ಮೈಸೂರು ರಸ್ತೆ, ಯಶವಂತಪುರ ಮಾರುಕಟ್ಟೆ, ಕೆ.ಆರ್‌.ಪುರಂ. ಯಲಹಂಕ, ಹೆಬ್ಬಾಳ, ಮಲ್ಲೇಶ್ವರ, ಬಸವನಗುಡಿ, ರಾಜಾಜಿನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಹೀಗಾಗಿ ಆ ಪ್ರದೇಶಗಳಲ್ಲಿ ಹೆಚ್ಚಿನ ತ್ಯಾಜ್ಯ ಸೃಷ್ಟಿಯಾಗಿತ್ತು. ಶುಕ್ರವಾರ ಸಂಜೆಯ ವೇಳೆಗೆ ಬಹುತೇಕ ವ್ಯಾಪಾರಿಗಳು ವ್ಯಾಪಾರ ಮುಗಿಸಿಕೊಂಡು ಮನೆಗಳತ್ತ ತೆರಳಿದರು. ಖರೀದಿಯಾಗದೆ ಉಳಿದಿದ್ದ ಬಾಳೆಕಂದು, ಬಾಳೆ ಎಲೆ, ಮಾವಿನ ಸೊಪ್ಪುಗಳನ್ನು ಅಲ್ಲಲ್ಲೇ ಬಿಟ್ಟಿರುವುದರಿಂದ ತಾಜ್ಯ ಹೆಚ್ಚಾಗಿದೆ.

click me!