ಒಟ್ಟಾರೆಯಾಗಿ ಕೋಟೆ ಅಂದ್ಮೇಲೆ ಬೆಳಗಿನ ವೇಳೆ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಿಗಳು ವಾಕ್ ಮಾಡೋದು ಸಹಜ. ಆದ್ರೆ ಅಧಿಕಾರಿಗಳು ದುಡ್ಡು ಮಾಡುವ ನೆಪದಲ್ಲಿ ವಾಯು ವಿಹಾರಿಗಳ ಮೇಲೆ ಶುಲ್ಕ ಹಾಕಲು ಮುಂದಾಗಿರೋದು ಬೇಸರದ ಸಂಗತಿ. ಇನ್ನಾದ್ರು ಇದಕ್ಕೆ ಬ್ರೇಕ್ ಹಾಕಿ ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜು.20): ನಗರದ ಹೃದಯ ಭಾಗದಲ್ಲಿರುವ ಏಳು ಸುತ್ತಿನ ಕಲ್ಲಿನ ಕೋಟೆಯ ಅವರಣದಲ್ಲಿ ಯೋಗಭ್ಯಾಸ ಹಾಗೂ ವಾಯು ವಿಹಾರಕ್ಕೆ ತೆರಳುವ ಸ್ಥಳಿಯರಿಗೆ ಶುಲ್ಕ ವಿಧಿಸುವ ಪದ್ದತಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಚಿತ್ರದುರ್ಗ ವಾಯು ವಿಹಾರಿಗಳ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
undefined
ಶತಮಾನಗಳಿಂದಲೂ ಕೋಟೆಯ ಆವರಣದಲ್ಲಿ ವಾಯು ವಿಹಾರಿಗಳು ತಮ್ಮ ಆರೋಗ್ಯ ದೃಷ್ಟಿಯಿಂದ ವಾಕ್ ಮಾಡಿಕೊಂಡು ಬರ್ತಿದ್ದಾರೆ. ಅದೇ ರೀತಿ ಯೋಗ ಮಾಡುವವರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ನಿತ್ಯ ಕೋಟೆಯಲ್ಲಿ ಯೋಗಾಭ್ಯಾಸ ಮಾಡುತ್ತಾರೆ. ಆದ್ರೆ ಇತ್ತೀಚೆಗೆ ಪುರತತ್ವ ಇಲಾಖೆ ಮಾಡ್ತಿರುವ ಕೆಲ ವಿಭಿನ್ನ ರೂಲ್ಸ್ ಗಳು ಸ್ಥಳೀಯರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ. ಅದ್ರಲ್ಲಂತೂ ವಾಯುವಿಹಾರಿಗಳು ಹಾಗೂ ಯೋಗಾಭ್ಯಾಸ ಮಾಡುವವರಿಗರ ಶುಲ್ಕ ವಿಧಿಸಲು ಮುಂದಾಗಿರೋ ಪುರತತ್ವ ಇಲಾಖೆ ವಿರುದ್ದ ಸ್ಥಳೀಯರು ಸಿಡಿದೆದ್ದಿದ್ದಾರೆ. ಇಷ್ಟು ವರ್ಷ ಇಲ್ಲದ ರೂಲ್ಸ್ ಈಗ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಎಳು ಸುತ್ತಿನ ಕೋಟೆ ಚಿತ್ರದುರ್ಗ ಜನರ ಸ್ವತ್ತು. ಅಧಿಕಾರಿಗಳು ಈ ರೀತಿ ಶುಲ್ಕ ವಿಧಿಸಲು ಮುಂದಾಗಿರೋದು ಖಂಡನೀಯ. ಬೆಳಗ್ಗೆ ೬ ರಿಂದ ೮ರ ವರೆಗೆ ಹಾಗೂ ಸಂಜೆ ೪ ರಿಂದ ೬ ರವರೆಗೆ ನಿತ್ಯ ಜನರು ವಾಯುವಿಹಾರಕ್ಕಾಗಿ ಕೋಟೆಗೆ ಆಗಮಿಸೋದು ಸರ್ವೇ ಸಾಮಾನ್ಯ. ಹಾಗಾಗಿ ಈ ಕುರಿತು ಜಿಲ್ಲಾಧಿಕಾರಿಗಳು ಕೋಟೆ ಪ್ರವೇಶಕ್ಕೆ ನಿಗದಿತ ವೇಳೆಯಲ್ಲಿ ಅವಕಾಶ ಕಲ್ಪಿಸಿ, ಶುಲ್ಕ ವಿಧಿಸಬಾರದು ಎಂದು ಮನವಿ ಸಲ್ಲಿಸಿದರು.
ಚಿತ್ರದುರ್ಗ: ಸೊಪ್ಪಿನ ಬೆಲೆ ಕುಸಿತದಿಂದ ಕಂಗಾಲಾದ ರೈತ..!
ಇನ್ನೂ ಈ ಕುರಿತು ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು ಏಳು ಸುತ್ತಿನ ಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪುರತತ್ವ ಇಲಾಖೆ ಅಧಿಕಾರಿಗಳು ಹಾಜರಿದ್ದು, ಕೋಟೆಗೆ ಅಗತ್ಯವಾಗಿ ಬೇಕಾಗುವ ಕೆಲಸಗಳು ಮೊದಲು ಆಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದ್ರಲ್ಲಂತೂ ಕೋಟೆಗೆ ಆಗಮಿಸುವ ಜನರಿಗೆ ಕುಡಿಯುವ ನೀರಿಯ ವ್ಯವಸ್ಥೆ ಸರಿಯಾಗಿ ಇಲ್ಲ ಅದು ಮೊದಲು ಆಗಬೇಕು ಎಂದು ತಿಳಿಸಿದರು. ಅದೇ ರೀತಿ ವಾಯು ವಿಹಾರಿಗಳಿಗೆ ಶುಲ್ಕ ವಿಧಿಸಿರುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಸಾರ್ವಜನಿಕರು ಹಾಗೂ ವಾಯುವಿಹಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಂದು ಜನರ ಒಳಿತಿಗಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಒಟ್ಟಾರೆಯಾಗಿ ಕೋಟೆ ಅಂದ್ಮೇಲೆ ಬೆಳಗಿನ ವೇಳೆ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಿಗಳು ವಾಕ್ ಮಾಡೋದು ಸಹಜ. ಆದ್ರೆ ಅಧಿಕಾರಿಗಳು ದುಡ್ಡು ಮಾಡುವ ನೆಪದಲ್ಲಿ ವಾಯು ವಿಹಾರಿಗಳ ಮೇಲೆ ಶುಲ್ಕ ಹಾಕಲು ಮುಂದಾಗಿರೋದು ಬೇಸರದ ಸಂಗತಿ. ಇನ್ನಾದ್ರು ಇದಕ್ಕೆ ಬ್ರೇಕ್ ಹಾಕಿ ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.