Chitradurga: ಅಕ್ರಮ ಲೇಔಟ್ ಕಾಮಗಾರಿಯಿಂದ ಗುಡ್ಡ ಕುಸಿಯುವ ಭೀತಿಯಲ್ಲಿ ಸ್ಥಳೀಯರು!

By Govindaraj SFirst Published Oct 3, 2022, 7:51 PM IST
Highlights

ಲೇಔಟ್ ನಿರ್ಮಾಣಕ್ಕಾಗಿ ರಿಯಲ್ ಎಸ್ಟೇಟ್ ದಂಧೆಕೋರರು ಸರ್ಕಾರದ ಜಾಗಗಳನ್ನು ಕಬಳಿಸೋದು ಹೊಸದೇನಲ್ಲ. ಆದರೆ ಚಿತ್ರದುರ್ಗದ ಮಾಜಿ ನಗರಸಭೆ ಸದಸ್ಯನೋರ್ವಪ್ರವಾಸಿ ತಾಣಕ್ಕೋಗುವ ರಸ್ತೆಯೇ ಕುಸಿಯುವಂತೆ ಗುಡ್ಡವನ್ನು ಕೊರೆದಿದ್ದಾನೆ.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಅ.03): ಲೇಔಟ್ ನಿರ್ಮಾಣಕ್ಕಾಗಿ ರಿಯಲ್ ಎಸ್ಟೇಟ್ ದಂಧೆಕೋರರು ಸರ್ಕಾರದ ಜಾಗಗಳನ್ನು ಕಬಳಿಸೋದು ಹೊಸದೇನಲ್ಲ. ಆದರೆ ಚಿತ್ರದುರ್ಗದ ಮಾಜಿ ನಗರಸಭೆ ಸದಸ್ಯನೋರ್ವಪ್ರವಾಸಿ ತಾಣಕ್ಕೋಗುವ ರಸ್ತೆಯೇ ಕುಸಿಯುವಂತೆ ಗುಡ್ಡವನ್ನು ಕೊರೆದಿದ್ದಾನೆ. ಹೀಗಾಗಿ ಜೋಗಿಮಟ್ಟಿಗೆ ಬರುವ ಪ್ರವಾಸಿಗರು‌ ನಿತ್ಯ ಜೀವ‌ವನ್ನು ಕೈನಲ್ಲಿ‌ ಹಿಡಿದು ಸಾಗುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹಚ್ಚ ಹಸುರಿನಿಂದ‌ ಆಕರ್ಷಿಸುತ್ತಿರುವ ಪರ್ವತಗಳು. ಗುಡ್ಡಗಳ ನಡುವೇ ಹಾದು ಹೋಗಿರುವ  ರಸ್ತೆ. ರಸ್ತೆ ಪಕ್ಕದಲ್ಲೇ  ತಲೆಯೆತ್ತುತ್ತಿರುವ ಖಾಸಗಿ ಲೇಔಟ್. ಈ ದೃಶ್ಯಗಳು ಕಂಡುಬಂದಿದ್ದು, ಕೋಟೆನಾಡು ಚಿತ್ರದುರ್ಗದ  ಪ್ರವಾಸಿ ತಾಣ  ಜೋಗಿಮಟ್ಟಿ ಬಳಿ.

ಹೌದು, ಮಿನಿ ಊಟಿ ಖ್ಯಾತಿಯ ಜೋಗಿಮಟ್ಟಿಯಲ್ಲಿ  ಮೋಡ ಹಾಗು ಮಂಜಿನ ನರ್ತನದ  ಸೊಬಗನ್ನು ನೋಡಲು, ನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಅಲ್ಲದೇ ವಿವಿಧ ಆಕರ್ಷಕ ವನ್ಯ ಮೃಗಗಳಿರುವ ಆಡುಮಲ್ಲೇಶ್ವರ ಕಿರು ಮೃಗಾಲಯ ಸಹ ಇದೇ ಹಾದಿಯಲ್ಲಿದೆ. ಆದ್ರೆ ಕಳೆದ ಮೂರು ತಿಂಗಳಿಂದ  ಚಿತ್ರದುರ್ಗದ ಮಾಜಿ ನಗರಸಭಾ ಸದಸ್ಯ ಗಾಡಿ ಮಂಜುನಾಥ್ ಹಾಗು ಆತನ ಸಹಚರರು ಲೇಔಟ್ ನಿರ್ಮಾಣಕ್ಕಾಗಿ  ಗುಡ್ಡದ ಮಧ್ಯೆ ಹಾದುಹೋಗಿರುವ ಕಿರಿದಾದ ರಸ್ತೆಯನ್ನು ಲೆಕ್ಕಿಸದೇ  ಸುಮಾರು 30 ಅಡಿಗಳಷ್ಟು ಎತ್ತರದ ಗುಡ್ಡವನ್ನು ಜೆಸಿಬಿಯಿಂದ‌ ಕೊರೆದಿದ್ದಾರೆ. ಹೀಗಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ  ಗುಡ್ಡದಲ್ಲಿ ಮಣ್ಣಿನ ಸವಕಳಿ ಶುರುವಾಗಿದೆ. ರಸ್ತೆ ಕುಸಿಯುವ ಆತಂಕ ಎದುರಾಗಿದೆ. 

ವಿದ್ಯಾರ್ಥಿ ಶುಲ್ಕ ಹೆಚ್ಚಳ ಬೇಡ ಎಂದಿದ್ದಕ್ಕೆ ಕಿವಿ ತಮಟೆ ಕಿತ್ತುಹೋಗುವಂತೆ ಹೊಡೆದ ಮುಖ್ಯ ಶಿಕ್ಷಕ!

ಇದರಿಂದಾಗಿ ಪ್ರವಾಸಿಗರು ಪ್ರಾಣಭಯದಿಂದ ಪ್ರವಾಸಿತಾಣಕ್ಕೆ ಬರುವಂತಾಗಿದ್ದೂ, ಯಾವಾಗ ಗುಡ್ದ ಕುಸಿಯುವುದೋ ಎಂಬ ಭೀತಿ ಶುರುವಾಗಿದೆ. ಆದ್ರೆ ಲೇಔಟ್‌ನಲ್ಲಿ‌ ಅಕ್ರಮದ ವಾಸನೆ ನಾರುತಿದ್ದೂ, ಅಕ್ರಮ ಲೇಔಟ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ, ನಗರಸಭೆ ಹಾಗು ನಗರಾಭಿವೃದ್ಧಿ ಪ್ರಾಧಿಕಾರ‌ದ ಅಧಿಕಾರಿಗಳು ಸಹ ಸಾಥ್ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇನ್ನು ಈ ಅಕ್ರಮ ಲೇಔಟ್ ನಿರ್ಮಾಣ ಹಾಗು ಗುಡ್ದ ಕೊರೆದಿರುವ ಬಗ್ಗೆ ಲೇಔಟ್ ನಿರ್ಮಾಣ ಮಾಡ್ತಿರುವ ಮಂಜುನಾಥ್ ಅವರನ್ನೇ ಕೇಳಿದ್ರೆ, ಚಿತ್ರದುರ್ಗದಲ್ಲಿ ಚರಂಡಿ, ಕೆರೆ ಹಾಗು ಗೋಕಟ್ಟೆಗಳೆಲ್ಲಾ ಒತ್ತುವರಿ ಆಗಿವೆ. ನಾನೇ ದೂರು ಸಲ್ಲಿಸಿದ್ದೇನೆ. ಆದ್ರೆ ಯಾವ ಡಿಸಿನು ಇಲ್ಲಿ ಬಂದು ಕೇಳಲ್ಲ ಅಂತಾರೆ. ಅಲ್ಲದೇ ನನ್ನ5 ಎಕರೆಯ ಜಮೀನಿನಲ್ಲಿ 1 ಎಕರೆ  ಹಳ್ಳದ ಪಾಲಾಗಿದೆ. 

ನಿಗಮ ಮಂಡಳಿ ನೇಮಕ ಕುರಿತು ಸಿಎಂ ಬಳಿ ಚರ್ಚೆ - ಭೈರತಿ ಬಸವರಾಜ್‌

93 ನಿವೇಶನದ‌ ಬದಲಾಗಿ‌ ಕೇವಲ 53 ಸೈಟ್‌ಗೆ ಯೋಜನೆ ಆಗಿದೆ. ಹೀಗಾಗಿ ಇರೋದ್ರಲ್ಲೇ ಲೇಔಟ್ ಮಾಡ್ತಿದಿನಿ ಅಂತ‌ ಸಮರ್ಥಿಸಿಕೊಳ್ತಾರೆ. ಹೊರೆತು ಮುಂದಾಗುವ ಅವಘಡದ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ ಎಂಬುದು ಸತ್ಯದ ವಿಷಯವಾಗಿದೆ. ಒಟ್ಟಾರೆ ಪ್ರವಾಸಿ ತಾಣ ಜೋಗಿಮಟ್ಟಿ ಪ್ರವೇಶ ದ್ವಾರದ ಬಳಿಯೇ ಅಕ್ರಮ‌ ಲೇಔಟ್ ತಲೆ ಎತ್ತುತ್ತಿದೆ. ಅದಕ್ಕಾಗಿ ಆಕರ್ಷಕ ಗುಡ್ಡ ಬಲಿಯಾಗಿದೆ. ಇದರಿಂದ ಗುಡ್ಡದ ಮೇಲೆ ಹಾದು ಹೋಗಿರುವ ರಸ್ತೆ ಸಹ ಕುಸಿಯುವ ಭೀತಿ ಪ್ರವಾಸಿಗರಲ್ಲಿದೆ. ಇನ್ನಾದರೂ ಜಿಲ್ಲಾಡಳಿತ ದೊಡ್ಡ ಅವಘಡ ಜರುಗುವ ಮುನ್ನ ಎಚ್ಚೆತ್ತು ಅಕ್ರಮಕ್ಕೆ ಬ್ರೇಕ್ ಹಾಕಬೇಕಿದೆ.

click me!