ಧಾರವಾಡ: ಬಾವಿಯನ್ನ ಹುಡುಕಿಕೊಡುವಂತೆ ದೂರು, ಶಾಸಕರೇ ಬಾವಿ ನುಂಗಿದ್ರಾ?

By Suvarna NewsFirst Published Oct 3, 2022, 5:10 PM IST
Highlights

ಪುರಾತನ ಬಾವಿಯೊಂದನ್ನ ತಮ್ಮ ನಿವಾಸದೊಳಗೆ ಅತಿಕ್ರಮಣ ಮಾಡಿಕೊಂಡಿರುವ ಆರೋಪದ ಮೇಲೆ ಶಾಸಕ ಅರವಿಂದ ಬೆಲ್ಲದ  ಅವರ ವಿರುದ್ದ ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ  ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಅ.3): ಶಾಸಕ ಅರವಿಂದ ಬೆಲ್ಲದ  ಅವರ ವಿರುದ್ದ ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುರಾತನ ಬಾವಿಯೊಂದನ್ನ ತಮ್ಮ ನಿವಾಸದೊಳಗೆ ಅತಿಕ್ರಮಣ ಮಾಡಿಕ್ಕೊಂಡು ಮನೆಯ ಕಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪಶ್ಚಿಮ ಕ್ಷೆತ್ರದ ಶಾಸಕ ಅರವಿಂದ ಬೆಲ್ಲದ ಅವರ ಕ್ಷೆತ್ರದಲ್ಲಿ ಬರುವ ಮರಾಠಾ ಕಾಲೋನಿಯಲ್ಲಿ ಅರವಿಂದ ಬೆಲ್ಲದ ಅವರ ನಿವಾಸ ಇದ್ದು ಆ ನಿವಾಸಕ್ಕೆ ಅಂಟಿಕ್ಕೊಂಡು ಮುಖ್ಯ ರಸ್ತೆ ಹಳೆಯ ಬಾವಿಯೊಂದು ಇತ್ತು. ಸದ್ಯ ಆ ಭಾವಿಯನ್ನ ಶಾಸಕ ಅರವಿಂದ ಬೆಲ್ಲದ ಅವರು ಅತಿಕ್ರಮಣ ಮಾಡಿಕೊಂಡು ತಮ್ಮ‌ ಮನೆಯ ಕಂಪೌಂಡ್ ಒಳಗಡೆ ಮಾಡಿಕ್ಕೋಂಡು ಭಾವಿಯನ್ನ‌ ಅರವಿಂದ ಅವರು ಅತಿಕ್ರಮಣ ಮಾಡಿ ಮುಂಚಿತವಾಗಿ ಹಾಕಿದ್ದಾರೆ ಆ ಭಾವಿಯನ್ನ ಹುಡುಕಿಕೊಡಿ ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಇಂದು ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಇನ್ನು ಧಾರವಾಡ ಪಶ್ಚಿಮ ಕ್ಷೆತ್ರದಲ್ಲಿದಲ್ಲಿ ಬಿಜೆಪಿಯಿಂದ ಶಾಸಕ ಅರವಿಂದ ಬೆಲ್ಲದ ಅವರು ಆಯ್ಕೆ ಯಾಗಿದ್ದಾರೆ. ಆದರೆ ಅವರ  ವಿರುದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌರಿ ಎಂದು ಮಾತುಗಳು ಸ್ಥಳಿಯ ವಲಯದಲ್ಲಿ ಕೇಳಿ ಬರುತ್ತಿದೆ.

ಮೌಲ್ವಿಗಳ ಸರ್ವೆ ಯಾಕೆ? ಶಾಸಕ ಅರವಿಂದ್ ಬೆಲ್ಲದ್ ಕೊಟ್ಟ ಕಾರಣ ಇದು

ಇನ್ನು ಈ ಭಾವಿ ಕಳೆದು ಹೋಗಿದೆ ಎಂದು ನಾಗರಾಜ್ ಗೌರಿ ಜಿಲ್ಲಾಧಿಕಾರಿಗಳಿಗೆ ಮೇ‌ 30, 2022 ರಂದು ಅರ್ಜಿ ಕೊಡಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರಿಗೂ ಇಗಾಗಲೆ ದೂರು ಕೊಟ್ಟು 5 ತಿಂಗಳು ಕಳೆದು ಹೋಗಿದೆ ಆದರೆ ಇನ್ನು ವರೆಗೂ ಇದ್ದ ಭಾವಿಯನ್ನ ಯಾರು ಹುಡುಕಿ ಕೊಡ್ತಿಲ್ಲ‌ ಎಂದು ಸದ್ಯ ನಾಗರಾಜ್ ಗೌರಿ ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಭಾವಿಯನ್ನ ಹುಡುಕಿಕೊಡಿ ಎಂದು ದೂರು ದಾಖಲಿಸಿದ್ದಾರೆ.

ಶಾಸಕ ಅರವಿಂದ ಬೆಲ್ಲದ ಅಕ್ರಮಗಳನ್ನು ಬಯಲಿಗೆ ಎಳೆಯುವೆ: ನಾಗರಾಜ್ ಗೌರಿ

ಆದರೆ ಈ‌ ಪ್ರಕರಣವನ್ನ‌ ಉಪನಗರ ಸಿಪಿಐ ಅವರು ಸದ್ಯ ದೂರನ್ನ‌ ಪಡೆದುಕ್ಕೋಂಡು ಆ ದೂರಿನ ಅನ್ವಯವಾಗಿ ಯಾವ ರಿತಿಯಾಗಿ ತನಿಖೆ ಮಾಡ್ತಾರೆ, ಮತ್ತು ಭಾವಿಯನ್ನ‌ ಹುಡುಕಲು ಸದ್ಯ ಪೋಲಿಸರು ಕೂಡಾ ಪ್ರಯತ್ನವನ್ನ ಮಾಡಬೇಕಾಗುತ್ತೆ..ಆದರೆ ಆರೋಪಿಗಳನ್ನ ಬಂದಿಸಿದಷ್ಟು ಈ ಭಾವಿಯನ್ನ ಪೋಲಿಸರು ಹುಡುಕುವುದು ಸುಲಭವಲ್ಲ ಆದರೆ ಪೋಲಿಸರು ಈ ಭಾವಿ ಪ್ರಕರಣವನ್ನ‌ ಹೇಗೆ ಬೇದಿಸುತ್ತಾರೆ ಮತ್ತು ಬೇದಿಸುವಾಗ ಎನೆಲ್ಲ‌ ಕ್ರಮಗಳನ್ನ ಅನುಸರಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ..

click me!