ಡ್ರಗ್ಸ್‌ ಮಾಫಿಯಾಕ್ಕೂ ರಾಜಕೀಯಕ್ಕೂ ನಂಟು : ಎಚ್ ವಿಶ್ವನಾಥ್ ಹೇಳಿದ್ದೇನು ?

Kannadaprabha News   | Asianet News
Published : Sep 03, 2020, 10:39 AM IST
ಡ್ರಗ್ಸ್‌ ಮಾಫಿಯಾಕ್ಕೂ ರಾಜಕೀಯಕ್ಕೂ ನಂಟು : ಎಚ್ ವಿಶ್ವನಾಥ್ ಹೇಳಿದ್ದೇನು ?

ಸಾರಾಂಶ

ಬಿಜೆಪಿ ಮುಖಂಡ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ಹಾಗೂ ಡ್ರಗ್ ಮಾಫಿಯಾಗೂ ನಂಟಿನ ಬಗ್ಗೆ ಮಾತನಾಡಿದ್ದಾರೆ.

 ಮೈಸೂರು(ಸೆ.03): ಶ್ರೀಮಂತಿಕೆಯ ವೈಭವೀಕರಣ ಸಿನಿಮಾ ರಂಗದಲ್ಲಿಯೂ ಆಗುತ್ತಿದ್ದು, ಡ್ರಗ್ಸ್‌ ಮಾಫಿಯಾ ಕುರಿತು ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಹೇಳಲಾಗುತ್ತಿಲ್ಲ, ಇದಕ್ಕೆ ಸ್ಥಳೀಯ ರಾಜಕೀಯ ಕಾರಣ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ರೇವ್‌ ಪಾರ್ಟಿ ಮಾಡುವವರು ಯಾರು? ಇಂದು ಸಿನಿಮಾ ರಂಗ ಏನಾಗಿದೆ? ಎಂದು ವಿಮರ್ಶಿಸಬೇಕು. ಸಿನಿಮಾಗಳಲ್ಲಿ ಅಪರಾಧದ ವೈಭವೀಕರಣ, ಲಾಂಗು, ಡ್ಯಾನ್ಸ್‌, ರೇಪ್‌, ಮದ್ಯ, ನಶೆ, ಕತ್ತಲ ಪ್ರಪಂಚದ ವೈಭವೀಕರಣ ಆಗುತ್ತಿದೆ. ಪೊಲೀಸರಿಗೆ ಡ್ರಗ್ಸ್‌ ಮಾಫಿಯಾ ಕುರಿತು ಗೊತ್ತಿದ್ದರೂ ಹೇಳುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸ್ಥಳೀಯ ರಾಜಕಾರಣ. ಈ ಡ್ರಗ್ಸ್‌ ಮಾಫಿಯಾಗೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅಲ್ಲಾಡಿ ಹೋಗಿದ್ದಾರೆ. ಆದ್ದರಿದ ಈ ವಿಷಯದಲ್ಲಿ ಇಡೀ ಸಮಾಜ ಜಾಗೃತವಾಗಿರಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ದೇಶದಲ್ಲಿ ಡ್ರಗ್ಸ್‌ ಪಿಡುಗೆ ವ್ಯಾಪಕವಾಗಿ ಹರಡಿದೆ. ಬಹಳ ವರ್ಷಗಳಿಂದಲೂ ಈ ದಂಧೆ ಬಹಳ ವ್ಯವಸ್ಥಿವಾಗಿ ನಡೆದುಕೊಂಡು ಬಂದಿದೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಯಾವೂದೇ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಈ ದಂಧೆ ಹಲವು ಹಂತಗಳಲ್ಲಿ ಬೆಳೆದು ಸೆಲಬ್ರೆಟಿಗಳ ತನಕ ಬಂದು ನಿಂತಿದೆ. ಪೊಲೀಸ್‌ ಇಲಾಖೆ ಮಾಡಬೇಕಾದ ಕೆಲಸವನ್ನು ಒಬ್ಬ ಸೆಲಬ್ರೆಟಿ ಮಾಡುತ್ತಿದ್ದಾರೆ ಎಂದು ಇಂದ್ರಜಿತ್‌ ಲಂಕೇಶ್‌ ಅವರನ್ನು ಶ್ಲಾಘಿಸಿದರು.

ಡ್ರಗ್ಸ್ ಉರುಳು: ಮಾದಕ ನಟಿ ರಾಗಿಣಿ ಬೆಂಗ್ಳೂರು ಬಿಟ್ಟು ಎಸ್ಕೇಪ್? ..

ಇಂದ್ರಜಿತ್‌ ಲಂಕೇಶ್‌ ಅವರನ್ನು ಗೇಲಿ ಮಾಡುವುದನ್ನು ಬಿಡಬೇಕು. ಡ್ರಗ್ಸ್ ದೇಶದ ಭವಿಷ್ಯವನ್ನು ಮಂಕು ಮಾಡುತ್ತಿದೆ. ಇದರಲ್ಲಿ ಯಾರಿದ್ದಾರೆ ಮಡಿವಂತಿಕೆ ಬಿಟ್ಟು ಬಹಿರಂಗಪಡಿಸಬೇಕು. ಸಿನಿಮಾ, ರಾಜಕಾರಣಿ, ಉದ್ಯಮಿ, ಅಧಿಕಾರಿಗಳ ಶ್ರೀಮಂತಿಕೆಯೇ ಇದಕ್ಕೆಲ್ಲ ಕಾರಣ. ಪ್ರಕರಣವನ್ನು ಬಯಲು ಮಾಡಿದ ಇಂದ್ರಜಿತ್‌ ಲಂಕೇಶ್‌ ಅವರನ್ನು ಗೇಲಿ ಮಾಡುವುದು ಬೇಡ ಎಂದು ಹೇಳಿದರು.

ಡ್ರಗ್ಸ್ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಚಿತ್ರರಂಗದಿಂದ ಯುವಕರಿಗೆ ತಪ್ಪು ಮಾಹಿತಿ ಹೋಗುತ್ತಿದೆ. ವಿದೇಶಿ ಪ್ರಜೆಗಳು ಪರವಾನಿಗೆ ಮುಗಿದರು ಇಲ್ಲಿದ್ದಾರೆ. ಕೀನ್ಯಾ ಉಗಾಂಡದಿಂದ ಬಂದವರು ಇಲ್ಲಿದ್ದಾರೆ. ಇದು ಪೊಲೀಸರಿಗೂ ಗೊತ್ತಿದೆ. ಕೋವಿಡ್‌ 19 ಪ್ರವಾಹದ ಮಾದರಿಯಲ್ಲಿ ಡ್ರಗ್ಸ್… ದಂಧೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಡ್ರW್ಸ… ದಂಧೆ ಕುರಿತು ಮಾತನಾಡಲು ಬೇರೆಯವರಿಗೆ ಹೇಳಲು ಧೈರ್ಯ ಇಲ್ಲ. ಪೊಲೀಸರ ಸಹಕಾರವೂ ಇಲ್ಲ ರಾಜಕಾರಣಿಗಳ ಸಹಕಾರವೂ ಇಲ್ಲ. ರಾಜಾಹುಲಿ ಯಡಿಯೂರಪ್ಪ ಅವರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವನಾಥ್‌ ಒತ್ತಾಯಿಸಿದರು.

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!