ಗಂಡ ಸಾವು : ಊರು ತೊರೆದ ಪತ್ನಿ, ಅನಾಥರಾದ ಮಕ್ಕಳು

By Kannadaprabha News  |  First Published Jun 28, 2021, 3:42 PM IST
  • ತಂದೆ ತಾಯಿ ಇಲ್ಲದೆ ಅನಾಥರಾಗಿರುವ ಮೂವರು ಮಕ್ಕಳು
  • ತಂದೆ ತಾಯಿ ಇಲ್ಲದೆ ಸಂಕಷ್ಟದಲ್ಲೇ ದಿನ ದೂಡುತ್ತಿ ಮಕ್ಕಳು
  • ಸ್ಥಳೀಯರ ನೆರವಿನಿಂದ ಜೀವನ ನಿರ್ವಹಣೆ

ಬಾಳೆಹೊನ್ನೂರು (ಜೂ.28): ಇಲ್ಲಿನ ಮಾಗುಂಡಿ ಗ್ರಾಮ ಪಂಚಾಯತ್ ಮಹಲ್ಗಂಡು ಹರಿಜನ ಕಾಲೋನಿಯ ಮೂವರು ಪುಟಾಣಿಗಳು ತಂದೆ ತಾಯಿ ಇಲ್ಲದೆ ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ. ಅನಾಥರಾಗಿರುವ ಮಕ್ಕಳು ನೆರವಿನ ನಿರೀಕ್ಷೆಯಲ್ಲಿದ್ದಾರೆ. 

ಮಾಗುಮಡಿ ಗ್ರಾಪಂ ವ್ಯಾಪ್ತಿಯ ಮಹಲ್ಗೊಂಡಯ ಗ್ರಾಮದ ರುದ್ರೇಶ್ ಎಂಬುವರಿಗೆ ಮೂವರು  ಮಕ್ಕಳಿದ್ದು, ಇವರು ಕಳೆದ ಎಂಟು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. 

Tap to resize

Latest Videos

ಹುಟ್ಟುಹಬ್ಬದಂದು ಅನಾಥ ಮಕ್ಕಳಿಗೆ ನೆರವಾದ ಸಚಿವ ಸುಧಾಕರ್

ರುದ್ರೇಶ್ ನಿಧನರಾದ ನಂತರ ಅವರ ಪತ್ನು ವಿನೋದ ತನ್ನ ಮಡಿಲಲ್ಲಿ ಬೆಳೆಯುತ್ತಿರುವ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳ ಭವಿಷ್ಯವನ್ನು ಲೆಕ್ಕಿಸದೆ ಊರು ತೊರೆದಿದ್ದರು. 

ರುದ್ರೇಶದ ಹಿರಿಯ ಮಗಳು ನಿಶ್ಮಿತಾ ತನ್ನ ಸಂಬಂಧಿಕರು ಊರವರ ನೆರವು  ಪಡೆದು ಕಷ್ಟದಲ್ಲಿಯೇ ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದು ಇದೀಗ ತನ್ನ ಸಹೋದರರ ಜೀವನವನ್ನು ಸುಖಮಯಗೊಳಿಸಲು  ಓದು ಬಿಟ್ಟು ಪಕ್ಕದ ಎಷ್ಟೇಟ್‌ಗೆ ಕೆಲಸಕ್ಕೆ ಹೋಗುತ್ತಿದ್ದಾಳೆ. 

ಆಕೆಯ ತಮ್ಮಂದಿರಾದ  ನಿಖಿತ್ (12), ನಿಶಾಂತ್ (9), ಏಳು ಹಾಗೂ ಮುರನೆ ತರಗತಿಯಲ್ಲಿ ಓದುತ್ತಿದ್ದಾರೆ. 

ನಿಖಿತ್‌ಗೆ ಕೆಲ ವರ್ಷಗಳ ಹಿಂದೆ ಮೂತ್ರಪುಂಡ ಸಮಸ್ಯೆಯಾಗಿ ಗ್ರಾಮಸ್ಥರ ಸಹಕಾರದಿಮದ ಪ್ರಾಣಾಪಾಯದಿಂದ ಪಾರಾಗಿ ಆತನೂ ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾನೆ. ಯಾರೂ ದಿಕ್ಕಿಲ್ಲದ ಕುಟುಂಬಕ್ಕೆ ಸ್ಥಳೀಯರೇ ನೆರವಾಗಿದ್ದಾರೆ.

click me!