* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನಗಡ್ಡೆ
* ಶ್ರೀ ರಘುವರ್ಯ ತೀರ್ಥರ ಕುರಿತು ಸ್ತೋತ್ರ ಸಮರ್ಪಣೆ ಕಾರ್ಯಕ್ರಮ
* ಕೊರೋನಾ ನಿಯಮಾನುಸಾರ ಜರುಗಿದ ಕಾರ್ಯಕ್ರಮಗಳು
ಗಂಗಾವತಿ(ಜೂ.28): ಶ್ರೀಮದ್ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥರ ಆದೇಶದಂತೆ ತಾಲೂಕಿನ ಆನೆಗೊಂದಿಯ ಯಲ್ಲಿರುವ ಶ್ರೀ ರಘುವರ್ಯತೀರ್ಥ ಶ್ರೀಪಾದಂಗಳವರ ಮಧ್ಯಾರಾಧನೆ ಜರುಗಿದೆ.
ಬೆಳಗ್ಗೆ ನಿರ್ಮಾಲ್ಯ ಅಭಿಷೇಕ ಶ್ರೀ ಸತ್ಯಾತ್ಮ ತೀರ್ಥರಿಂದ ವಿರಚಿತ ಶ್ರೀ ರಘುವರ್ಯ ತೀರ್ಥರ ಕುರಿತು ಸ್ತೋತ್ರ ಸಮರ್ಪಣೆ ಕಾರ್ಯಕ್ರಮ ಜರುಗಿತು. ಶ್ರೀ ಜಯತೀರ್ಥ ವಿದ್ಯಾಪೀಠದ ಬೆಂಗಳೂರು ಪ್ರಾಂಶುಪಾಲರಾದ ಸತ್ಯ ಜ್ಞಾನಾರ್ಚಾ ಕಟ್ಟಿ ಅವರಿಂದ ಪಂಚಾಮೃತ ಅಭಿಷೇಕ. ಪುಷ್ಪಾರ್ಚನೆ, ಹಸ್ತೋದಕ, ಅಲಂಕಾರ ಬ್ರಾಹ್ಮಣರ ಭೋಜನ ತೀರ್ಥ ಪ್ರಸಾದ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಕೊರೋನಾ ನಿಯಮಾನುಸಾರ ಜರುಗಿದವು.
ಗಂಗಾವತಿ: ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜರ ಮಧ್ಯಾರಾಧನೆ
ಈ ಸಂದರ್ಭದಲ್ಲಿ ಆನಂದಾರ್ಚಾ ಜೋಶಿ, ಅನ್ವರಿ ವೆಂಕಟಗಿರಿಚಾರ, ವಿಷ್ಣುತೀರ್ಥಾಚಾರ್ಯ, ಪ್ರಸನ್ನಾಚಾರ್ಯ ಕಟ್ಟಿ, ನಾರಾಯಣಾರ್ಚಾ ಹುಲಿಗೆ, ಕಪಿಲಾಚಾರ್ಯ ಬೆಂಗಳೂರ್, ಉಪೇಂದ್ರಾರ್ಚಾ ಕೇಸಕ್ಕಿ, ಜಯತೀರ್ಥತಿಕೋಟಿರ್ಕ ಹಾಗೂ ಇನ್ನಿತರರು ಭಾಗವಹಿಸಿದ್ದರು.