KODAGU: ಸ್ಥಳೀಯ ರೈತರಿಗೆ ಹಾರಂಗಿ ಹಿನ್ನೀರಿನಲ್ಲಿ ಮೀನುಗಾರಿಕೆ ಪರವಾನಗಿಗೆ ರೈತ ಸಂಘ ಆಗ್ರಹ

By Kannadaprabha News  |  First Published Aug 3, 2022, 12:50 PM IST

ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದ ಹಿನ್ನೀರಿನ ಜಾಗದಲ್ಲಿ ವಾಸ ಮಾಡುತ್ತಿರುವ ರೈತರಿಗೆ ಇಲ್ಲಿ ಮೀನುಗಾರಿಕೆ ನಡೆಸಲು ಪರವಾನಗಿ ನೀಡಬೇಕು ಎಂದು ರೈತ ಸಂಘ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ, ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿತು. 


ವಿರಾಜಪೇಟೆ (ಆ.3) : ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದ ಹಿನ್ನೀರಿನ ಜಾಗದಲ್ಲಿ ವಾಸ ಮಾಡುತ್ತಿರುವ ರೈತರಿಗೆ ಇಲ್ಲಿ ಮೀನುಗಾರಿಕೆ ನಡೆಸಲು ಪರವಾನಗಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್‌ ಬೋಪಯ್ಯ ಹಾಗೂ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್‌ ಸುಬ್ಬಯ್ಯ ಮುಂದಾಳತ್ವದಲ್ಲಿ ಹಲವು ರೈತರು ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ಭಾಗದ ರೈತರು ಭೂಮಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೊರ ಜಿಲ್ಲೆಯ ಕೆಲವು ಗುತ್ತಿಗೆದಾರರು ಸಹಕಾರ ಸಂಘದ ನೆಪದಲ್ಲಿ ಇಲ್ಲಿನ ಸ್ಥಳೀಯ ರೈತರನ್ನು ಕತ್ತಲೆಯಲ್ಲಿಟ್ಟು, ತಾವೇ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ರೈತರಿಗೆ ಅನ್ಯಾಯವಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್‌ ಹಾಗೂ ಸುಭಾಷ್‌ ಆರೋಪಿಸಿದರು. ಹಾರಂಗಿ ಜಲಾನಯನ ಪ್ರದೇಶದ ರೈತರು ಈಗಾಗಲೇ ಭೂಮಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಜೀವನಧಾರವಾದ ಮೀನುಗಾರಿಕೆ ಕೂಡ ಈಗ ಇಲ್ಲದಂತಾಗಿದೆ. ಆದ್ದರಿಂದ ಇಲ್ಲಿನ ಸ್ಥಳೀಯ ರೈತರಿಗೆ ಮೀನುಗಾರಿಕೆ ಪರವನಗಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್‌ ಅವರಿಗೆ ಮನವಿ ಮಾಡಿದರು.

Latest Videos

undefined

Karnataka Reservoir Water Level:ಮುಂಗಾರು ಅಬ್ಬರದ ಮಧ್ಯೆ ಇಂದು ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ?

ಮೀನುಗಾರಿಕೆ ಜಿಲ್ಲಾ ನಿರ್ದೇಶಕರಾದ ದೀಪಾಂಜಲಿ, ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿ ಮೀನುಗಾರಿಕೆ ವಿಚಾರದಲ್ಲಿ ಇಲಾಖೆಯು ಸದಾ ರೈತರ ಪರವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸ್ಥಳೀಯ ರೈತರಿಗೆ ಮೀನುಗಾರಿಕೆ ಹಕ್ಕನ್ನು ನೀಡಲು ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಹಕ್ಕನ್ನು ಯಾರಿಗೂ ನೀಡಿಲ್ಲ, ಟೆಂಡರ್‌ ಮೂಲಕ ನೀಡುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ ನಿರ್ದೇಶಕಿ ದೀಪಾಂಜಲಿ, ಮುಂದಿನ ದಿನದಲ್ಲಿ ರೈತರೊಂದಿಗೆ ಸಭೆ ನಡೆಸಿ ಸರ್ಕಾರದ ತೀರ್ಮಾನ ಪ್ರಕಟಿಸುವುದಾಗಿವ ಭರವಸೆ ನೀಡಿದರು.

ಕೊಡಗು: ಹಾರಂಗಿ ಡ್ಯಾಂ ಭರ್ತಿ, 1200 ಕ್ಯೂಸೆಕ್‌ ನೀರು ನದಿಗೆ ಬಿಡುಗಡೆ

ಈ ವೇಳೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್‌ ಮಾತನಾಡಿ, ಹೊರ ಜಿಲ್ಲೆಯಿಂದ ಆಗಮಿಸಿದ ಕೆಲವರು ಇಲ್ಲಿನ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ಪಡೆಯದೆ ಸಂಘಕ್ಕೆ ಸದಸ್ಯರನ್ನು ತಮಗೆ ಇಷ್ಟಬಂದವರನ್ನು ಸೇರಿಸಿಕೊಂಡು ಅನ್ಯಾಯ ಮಾಡಿದ್ದಾರೆ. ಜಲಾನಯನ ಪ್ರದೇಶದ ಪ್ರತಿವೊಬ್ಬ ರೈತನನ್ನು ಸಂಘದಲ್ಲಿ ಸದಸ್ಯರನ್ನಾಗಿ ಮಾಡಲು ಕ್ರಮ ಕೈಗೊಳ್ಳಲು ಮನವಿ ಮಾಡಿದರು. ರೈತ ಸಂಘದ ಮನವಿ ಸ್ವೀಕರಿಸಿದ ನಿರ್ದೇಶಕಿ ದೀಪಾಂಜಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಭೇಟಿಯ ವೇಳೆ ಸೋಮವಾರಪೇಟೆ ತಾಲೂಕಿನ ಅಧ್ಯಕ್ಷ ದಿನೇಶ್‌, ಪದಾಧಿಕಾರಿಗಳಾದ ಕೀಜನ ಲಕ್‌್ಷ$್ಣ, ಹಾರಂಗಿ ಜಲಾನಯನ ಪ್ರದೇಶದ ರೈತರಾದ ಚೆರಿಯಮನೆ ಮಿಟ್ಟು, ಚಂದ್ರಪಾಲ, ಶಿವಕುಮಾರ್‌, ಕೆ.ಎಸ್‌. ಬಾಲಕೃಷ್ಣ, ಸುರೇಶ್‌, ಗಿರೀಶ್‌ ಕುಮಾರ್‌, ವಿನು, ಮಚ್ಚಂಡ ಹಾಗೂ ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.

click me!