Bagalkot| ಪಂಚ​ಮ​ಸಾಲಿ ಶ್ರೀಗಳ ಟ್ರಸ್ಟ್‌ ರಚನೆ: 3ನೇ ಪೀಠಕ್ಕೆ ಮುನ್ನುಡಿ?

By Kannadaprabha News  |  First Published Nov 7, 2021, 9:47 AM IST

*  ಜಮ​ಖಂಡಿಯಲ್ಲಿ ಲಿಂಗಾ​ಯತ ಪಂಚ​ಮ​ಸಾಲಿ ಮಠಾ​ಧೀ​ಶರ ಒಕ್ಕೂಟ ಚಾರಿ​ಟೇ​ಬಲ್‌ ಟ್ರಸ್ಟ್‌ ನೋಂದಣಿ 
*  ಸಮುದಾಯದಲ್ಲಿನ ಮಠಾ​ಧೀ​ಶರ ನಡುವಿನ ಭಿನ್ನಾಭಿಪ್ರಾಯಕ್ಕೆ ತಾರ್ಕಿಕ ಅಂತ್ಯ
*  ಪಂಚಮಸಾಲಿ ಮೀಸಲಾತಿ 2ಎ ಗೆ ಒಕ್ಕೂಟದ ಸಂಪೂರ್ಣ ಬೆಂಬಲ
 


ಜಮಖಂಡಿ(ನ.07): ಪಂಚ​ಮ​ಸಾಲಿ(Panchamasali) ಸಮಾ​ಜದ ವಿವಿಧ ಮಠ​ಗಳ(Matha) ಮಠಾ​ಧೀ​ಶರ ಸೇರಿ ಶನಿ​ವಾರ ಬಾಗ​ಲ​ಕೋಟೆ(Bagalkot) ಜಿಲ್ಲೆಯ ಜಮ​ಖಂಡಿಯ ಮಿನಿ ​ವಿ​ಧಾ​ನ​ಸೌ​ಧ​ದಲ್ಲಿ ಲಿಂಗಾ​ಯತ ಪಂಚ​ಮ​ಸಾಲಿ ಮಠಾ​ಧೀ​ಶರ ಒಕ್ಕೂಟ ಚಾರಿ​ಟೇ​ಬಲ್‌ ಟ್ರಸ್ಟ್‌ ಎಂದು ನೋಂದಣಿ ಮಾಡಿ​ದ್ದಾರೆ.

"

Tap to resize

Latest Videos

ರಾಜ್ಯಾದ್ಯಂತ(Karnataka) ತೀವ್ರ ಚರ್ಚೆಗೆ ಕಾರಣವಾಗಿದ್ದ ಪಂಚಮಸಾಲಿ ಸಮುದಾಯದಲ್ಲಿನ ಮಠಾಧೀಶರ ನಡುವಿನ ಭಿನ್ನಾಭಿಪ್ರಾಯಕ್ಕೆ ತಾರ್ಕಿಕ ಅಂತ್ಯ ಕಾಣುತ್ತಿದ್ದು ಕೊನೆಗೂ ಜಿಲ್ಲೆಯ ಜಮಖಂಡಿಯಲ್ಲಿ(Jamakhandi) ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪನೆಯಾಗುವ ಮೂಲಕ ಈವರೆಗಿದ್ದ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.

ನಂತರ ಸುದ್ದಿ​ಗಾ​ರ​ರೊಂದಿ​ಗೆ ಮಾತ​ನಾ​ಡಿದ ಶ್ರೀಗಳು, ಮೂರನೇ ಪೀಠ ರಚನೆ ಸದ್ಯ​ಕ್ಕಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ​ ಅವರು ಈ ಒಕ್ಕೂಟದಲ್ಲಿ ಸುಮಾರು 30-35 ಶ್ರೀಗಳು(Swamijis) ಇದ್ದೇವೆ. ಪಂಚಮಸಾಲಿ ಮೀಸಲಾತಿ(2A Reservation) 2ಎ ಗೆ ಒಕ್ಕೂಟದ ಸಂಪೂರ್ಣ ಬೆಂಬಲವಿದೆ. ಪಂಚಮಸಾಲಿ 2ಎ ಮೀಸಲಾತಿ ನೀಡಬೇಕೆಂದು ನಮ್ಮ ಒತ್ತಡ ಸರ್ಕಾರದ ಮೇಲೆ ಇದೆ.ಅದರೆ ಯಾವುದೇ ನಿಯೋಗ ಬೆಂಗಳೂರಿಗೆ(Bengaluru) ಹೋಗುವ ವಿಚಾರ ಸದ್ಯಕ್ಕಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2ಎ ಮೀಸಲಾತಿ ಸಿಗುವತನಕ ಹೋರಾಟ: ಜಯಮೃತ್ಯುಂಜಯ ಶ್ರೀ

ಲಿಂಗಾಯಿತ ಪಂಚಮಸಾಲಿ ಟ್ರಸ್ಟ್‌ ನೋಂದಣಿ ಕಾರ್ಯದಲ್ಲಿ ಕುಂಚನೂರು ಸಿದ್ಧಲಿಂಗ ಸ್ವಾಮೀಜಿ, ಬಬಲೇಶ್ವರ ಮಹಾದೇವ ಶಿವಾಚಾರ್ಯಶ್ರೀಗಳು(ಅಧ್ಯಕ್ಷ),ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು(ಕಾರ್ಯದರ್ಶಿ), ಬೆಂಡವಾಡ ಗುರುಸಿದ್ದಶಿವಲಿಂಗ ಸ್ವಾಮಿ ವಿರಕ್ತಮಠ (ಉಪಾಧ್ಯಕ್ಷ) ಸೇರಿದಂತೆ 25 ಕ್ಕೂ ಹೆಚ್ಚಿನ ಶ್ರೀಗಳು ಭಾಗಿಗಳಾಗಿದ್ದರು.

ವಿಜಯಪುರ(Vijayapura) ಜಿಲ್ಲೆ ಬಬಲೇಶ್ವರದ ಮಹಾದೇವ ಶಿವಾಚಾರ್ಯ ಶ್ರೀಗಳು ಈ ಸಂದರ್ಭದಲ್ಲಿ ಮಾತ​ನಾಡಿ, ಪಂಚಮಸಾಲಿ ಎರಡು ಪೀಠಗಳು ಕೇವಲ ರಾಜಕೀಯ(Politics) ಮನೋಭಾವನೆಯಿಂದ ಹೊರಟಿರುವುದು ಶೋಭೆ ತರಲಾರದು.ಇದರಿಂದ ಪಂಚಮಸಾಲಿ ಸಮಾಜದ ಯುವಕರು ನಾಸ್ತಿಕರಾಗುತ್ತಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಧಾರ್ಮಿಕ ಚಟುವಟಿಕೆಗಳನ್ನು ಮಾಡಬೇಕು.ವೀರಶೈವ ಲಿಂಗಾಯಿತ ಧರ್ಮದಲ್ಲಿ(Veerashaiva Lingayat Religion) 99 ಪಂಗಡಗಳಿದ್ದು, ಅದರಲ್ಲಿ ಪಂಚಮಸಾಲಿ ಒಂದು ಪಂಗಡವಾಗಿದೆ.ಯುವಕರಿಗೆ ಧಾರ್ಮಿಕ ಸಂಸ್ಕಾರ ನೀಡಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ(Karnataka) ಪಂಚಮಸಾಲಿ ಸಮಾಜ 1 ಕೋಟಿ 5 ಲಕ್ಷ ಜನಸಂಖ್ಯೆ ಹೊಂದಿದ್ದು,ಈ ಜನತೆಗಾಗಿ ಮಠಾಧೀಶರು ಏನನ್ನಾದರೂ ಮಾಡುವುದು ಕರ್ತವ್ಯವಾಗಿದೆ. ಸಮಾಜಕ್ಕಾಗಿ ಎಷ್ಟೇ ಸೇವೆ ಮಾಡಿದರೂ ಕಡಿಮೆ. ಎಲ್ಲರೂ ಸೇರಿ ಒಗ್ಗಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದ​ರು.

ಮಾಜಿ ಸಿಎಂಗಳಿಂದ ಪಂಚಮಸಾಲಿಗೆ ಅನ್ಯಾಯ: ಸ್ವಪಕ್ಷದವರ ವಿರುದ್ಧ ಗುಡುಗಿದ ಯತ್ನಾಳ್‌

ಪಂಚಮಸಾಲಿ ಸಮುದಾಯದ 20ಕ್ಕೂ ಹೆಚ್ಚು ಸ್ವಾಮೀಜಿಗಳು ಕಳೆದ ನಾಲ್ಕಾರು ತಿಂಗಳಿನಿಂದ ಜಮಖಂಡಿ ಭಾಗದಲ್ಲಿ ನಿರಂತರ ಸಭೆ ನಡೆಸಿ ಮಠಾಧೀಶರ ಒಕ್ಕೂಟ ಸ್ಥಾಪನೆಗೆ ಮುಂದಾಗಿದ್ದರು. ಜೊತೆಗೆ ಸಮುದಾಯದಲ್ಲಿನ ಹರಿಹರ ಹಾಗೂ ಕೂಡಲಸಂಗಮ ಪೀಠದ ಶ್ರೀಗಳಿಂದ ಸಮುದಾಯಕ್ಕೆ ನಿರೀಕ್ಷಿತವಾದ ಉಪಯೋಗವಾಗುತ್ತಿಲ್ಲ ಎಂಬ ಮಾತುಗಳನ್ನು ಆಡುತ್ತಾ ಪರ್ಯಾಯ ಪೀಠದ ಬಗ್ಗೆ ಯೋಚಿಸಿದ್ದ ಇವರುಗಳು ಕೊನೆಗೂ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸುವ ಮೂಲಕ ಸಮುದಾಯದಲ್ಲಿ ಮತ್ತೊಂದು ಶಕ್ತಿ ಪೀಠ ಸ್ಥಾಪನೆಗೆ ಮುಂದಾದಂತಾಗಿದೆ.

ರಾಜ್ಯವ್ಯಾಪಿ ವಿಸ್ತರಣೆ:

ಜಮಖಂಡಿ ತಾಲೂಕಿನ ಅಲಗೂರ ಕೇಂದ್ರವನ್ನಾಗಿಟ್ಟುಕೊಂಡು ಶನಿವಾರ ಜಮಖಂಡಿಯ ಉಪನೋಂದಣಾಧಿ​ಕಾರಿಗಳ ಕಚೇರಿಯಲ್ಲಿ 15ಕ್ಕೂ ಹೆಚ್ಚು ಶ್ರೀಗಳು ವೀರಶೈವ ಲಿಂಗಾಯತ ಪಂಚಮಸಾಲಿ ಮಠಾ​ಧೀ​ಶರ ಒಕ್ಕೂಟದ ಚಾರಿಟೇಬಲ್‌ ಟ್ರಸ್ಟ್‌(Lingayat Panchamasali Charitable Trust) ಸ್ಥಾಪನೆ ಅಸ್ತಿತ್ವಕ್ಕೆ ತಂದಿದ್ದು ಟ್ರಸ್ಟ್‌ ಅಧ್ಯಕ್ಷರಾಗಿ ಬಬಲೇಶ್ವರದ ಡಾ.ಮಹಾದೇಶ್ವರ ಶಿವಾಚಾರ್ಯ ಶ್ರೀಗಳು, ಉಪಾಧ್ಯಕ್ಷರಾಗಿ ಬೆಂಡವಾಡದ ಶ್ರೀಗಳು, ಕಾರ್ಯದರ್ಶಿಗಳಾಗಿ ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳು ನೇಮಕವಾಗಿದ್ದು ಈ ಟ್ರಸ್ಟ್‌ ರಾಜ್ಯವ್ಯಾಪಿ ಕಾರ್ಯವಿಸ್ತರಣೆ ಹೊಂದಿದ್ದಾಗಿ ತಿಳಿಸಲಾಗಿದೆ. ಟ್ರಸ್ಟ್‌ ಮೂಲಕ ಸಮಾಜದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಪ್ರಸ್ತಾಪವನ್ನು ಟ್ರಸ್ಟ್‌ನ ಕಾರ್ಯಚಟುವಟಿಕೆಯಲ್ಲಿ ವಿವರಿಸಲಾಗಿದೆ.
 

click me!