Shivamogga: ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ; ಕರಗಿದ ಜಲರಾಶಿ, ರಾಜ್ಯಕ್ಕೆ ಎದುರಾಗಲಿದೆಯೇ ಪವರ್ ಕಟ್ ಭೀತಿ?

Published : Jun 27, 2026, 06:12 PM IST
Linganamakki Hydroelectric Power House Suspension

ಸಾರಾಂಶ

ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ, ಕೆಪಿಸಿಎಲ್ ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಶಿವಮೊಗ್ಗ (ಜೂ.27): ಶರಾವತಿ ನದಿಯ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದಾಗಿ, ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದ (Linganamakki Power House) ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ವಿದ್ಯುತ್ ವಿಭಾಗದ ಮುಖ್ಯ ಇಂಜಿನಿಯರ್ ಆನಂದ್ ಕುಮಾರ್ ಅವರ ಪ್ರಕಾರ, ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಜಲಾಶಯವು ಶರಾವತಿ ಕಣಿವೆಯಲ್ಲಿರುವ ಒಟ್ಟು ಐದು ಪ್ರಮುಖ ಜಲವಿದ್ಯುತ್ ಕೇಂದ್ರಗಳಿಗೆ ಪ್ರಮುಖ ನೀರಿನ ಮೂಲವಾಗಿದೆ. ಪ್ರಸ್ತುತ ಸ್ಥಗಿತಗೊಂಡಿರುವ ಈ ವಿದ್ಯುತ್ ಉತ್ಪಾದನಾ ಕೇಂದ್ರದ ಒಟ್ಟು ಸ್ಥಾಪಿತ ಸಾಮರ್ಥ್ಯ 55 ಮೆಗಾವ್ಯಾಟ್ (MW) ಆಗಿದ್ದು, ತಲಾ 27.5 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಇದು ಹೊಂದಿದೆ.

ಕರ್ನಾಟಕದ ವಿದ್ಯುತ್‌ ಬೇಡಿಕೆಯ ಸಿಂಹಪಾಲು ನೀಡುವ ಲಿಂಗನಮಕ್ಕಿ ಜಲಾಶಯ

ಶರಾವತಿ ಜಲವಿದ್ಯುತ್ ಯೋಜನೆಯು ಕರ್ನಾಟಕದ ಒಟ್ಟು ವಿದ್ಯುತ್ ಬೇಡಿಕೆಯ ಸಿಂಹಪಾಲನ್ನು ಪೂರೈಸುವ ಅತ್ಯಂತ ಪ್ರಮುಖ ಮೂಲವಾಗಿದೆ. ಲಿಂಗನಮಕ್ಕಿ ಅಣೆಕಟ್ಟು ಮುಖ್ಯವಾಗಿ ಶರಾವತಿ (1035 MW), ಗೇರುಸೊಪ್ಪ (240 MW), ಮಹಾತ್ಮ ಗಾಂಧಿ (120 MW) ಸೇರಿದಂತೆ ಐದು ವಿದ್ಯುತ್ ಕೇಂದ್ರಗಳಿಗೆ ನೀರು ಒದಗಿಸುತ್ತದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮುಂಗಾರು ಚುರುಕಾಗಿ ಜಲಾಶಯ ಭರ್ತಿಯಾಗಬೇಕಿತ್ತು. ಆದರೆ ಈ ಬಾರಿ ಮುಂಗಾರು ದುರ್ಬಲಗೊಂಡಿರುವುದರಿಂದ ರಾಜ್ಯದ ಇತರೆ ಜಲವಿದ್ಯುತ್ ಕೇಂದ್ರಗಳ ಮೇಲೂ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.

ಮಳೆ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಇತರೆ ದೊಡ್ಡ ಘಟಕಗಳಲ್ಲೂ ಉತ್ಪಾದನೆ ಕುಂಠಿತಗೊಂಡು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅಥವಾ ಪವರ್ ಕಟ್ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೆಪಿಸಿಎಲ್ ಅಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಲಭ್ಯವಿರುವ ನೀರನ್ನು ಮಿತವಾಗಿ ಬಳಸುತ್ತಿದ್ದಾರೆ. ಮುಂಗಾರು ಮಳೆ ಮತ್ತೆ ಚುರುಕಾದರಷ್ಟೇ ವಿದ್ಯುತ್ ಉತ್ಪಾದನೆ ಸಹಜ ಸ್ಥಿತಿಗೆ ಮರಳಲಿದೆ.

 

PREV
Read more Articles on
click me!

Recommended Stories

Uttara kannada ಇತಿಹಾಸಕ್ಕೆ ಹೊಸ ತಿರುವು ನೀಡಿದ ಹೊನ್ನಾವರ ಕಡತೋಕೆ ಶಾಸನದ ಮರು ಸಂಶೋಧನೆ!
ಪತ್ನಿ ದೂರು ಕೊಟ್ಟ ತಕ್ಷಣ ಪತಿ ಬಂಧನ: ಅರೆಸ್ಟ್​ ನಿಮಗೆ ಆಟನಾ? ಪೊಲೀಸರ ಬೆವರಿಳಿಸಿದ ಹೈಕೋರ್ಟ್​