ನರಗುಂದ: ವಿದ್ಯುತ್‌ ಸಂಪರ್ಕಕ್ಕೆ ನದಿ ಈಜಿ ಸಾಹಸ, ಲೈನ್‌ಮೆನ್‌ ಕಾರ್ಯಕ್ಕೆ ಭಾರೀ ಮೆಚ್ಚುಗೆ

By Kannadaprabha News  |  First Published Sep 16, 2022, 12:24 PM IST

ಲೈನ್‌ಮೆನ್‌ ಮಂಜುನಾಥ ಕುಂಬಾರ ಸಾಹಸ ಕಾರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ 


ನರಗುಂದ(ಸೆ.16):  ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ಪ್ರವಾಹದಲ್ಲಿ ಈಜಿಕೊಂಡು ಹೋಗಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಚಾಲು ಮಾಡಿ ಕೊಣ್ಣೂರು ಗ್ರಾಮಕ್ಕೆ ನಿರಂತರ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡ ಕೊಣ್ಣೂರು ಭಾಗದ ಪವರ್‌ಮ್ಯಾನ್‌ (ಲೈನ್‌ ಮೆನ್‌) ಮಂಜುನಾಥ ಕುಂಬಾರ ಅವರ ಸಾಹಸ ಕಾರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈಚೆಗೆ ಬೆಳಗಾವಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ನವೀಲುತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಡುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ನದಿಗೆ ಹೊಂದಿಕೊಂಡಿರುವ ಹಲವು ಗ್ರಾಮಗಳಲ್ಲಿ ಅನೇಕ ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ. ಕೊಣ್ಣೂರ ಗ್ರಾಮಕ್ಕೆ ನಿರಂತರ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ವಿದ್ಯುತ್‌ ಟ್ರಾನ್ಸಫಾರ್ಮರ್‌ ಕೂಡಾ ನೀರಲ್ಲಿ ನಿಂತಿವೆ. ಟ್ರಾನ್ಸಫಾರ್ಮರ್‌ ಇದ್ದಲ್ಲಿಯೇ ತೆರಳಿ ಚಾಲು ಮಾಡಿದರೆ ಮಾತ್ರ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತದೆ.

Latest Videos

undefined

Gadag: ಹುಟ್ಟುಹಬ್ಬಕ್ಕೆ ಬಿಂಕದಕಟ್ಟಿಯ ಭೀಮಾ ಹೆಸರಿನ ಚಿರತೆಯನ್ನು ದತ್ತು ಪಡೆದ ಬಾಲಕ

ಪ್ರವಾಹದ ಮಧ್ಯೆ ಇರುವ ಟ್ರಾನ್ಸಫಾರ್ಮರ್‌ ಬಂದ್‌ ಮಾಡಿ ಪಕ್ಕದಲ್ಲಿರುವ ಮತ್ತೊಂದು ಟ್ರಾನ್ಸಫಾರ್ಮರ್‌ ಚಾಲು ಮಾಡಲು ನದಿಯಲ್ಲಿ ಈಜಿಯೇ ಹೋಗಬೇಕಿತ್ತು. ಇದನ್ನು ಅರಿತ ಲೈನ್‌ಮನ್‌ ಮಂಜುನಾಥ ಕೂಡಲೇ ಕಾರ್ಯಪ್ರವೃತ್ತನಾಗಿ ನದಿಯಲ್ಲಿ 10 ಅಡಿಗೂ ಹೆಚ್ಚಿನ ಪ್ರಮಾಣದ ಹರಿಯುತ್ತಿದ್ದ ನೀರಿನಲ್ಲಿಯೇ ಈಜಿಕೊಂಡು ಹೋಗಿ ಪ್ರವಾಹದ ಮಧ್ಯಭಾಗದಲ್ಲಿದ್ದ ಟ್ರಾನ್ಸಫಾರ್ಮರ್‌ ಬಂದ್‌ ಮಾಡಿ ಮತ್ತೊಂದು ಭಾಗದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ಚಾಲು ಮಾಡಿ ಮತ್ತೆ ಈಜೆ ದಡ ಸೇರಿ ಸಾಹಸ ಮೆರೆದರು. ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಲೈನ್‌ಮನ್‌ನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

click me!