ಗೃಹ ಜ್ಯೋತಿ ಯೋಜನೆ ಚಾಲನೆ: ಸಿಎಂ ಕಾರ್ಯ​ಕ್ರ​ಮ​ದಲ್ಲಿ ಭದ್ರತಾ ಲೋಪ​ವಾ​ಗ​ದಿ​ರ​ಲಿ, ಪ್ರಿಯಾಂಕ್‌

By Kannadaprabha News  |  First Published Aug 4, 2023, 10:00 PM IST

ಮುಖ್ಯಮಂತ್ರಿಗಳ ಜೊತೆಗೆ ಜ್ಯಸಭೆ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಸಚಿವರು, ಚುನಾಯಿತ ಜನಪ್ರತಿನಿಧಿಗಳು ಆಗಮಿಸುವ ಕಾರಣ ಸಕಲ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ವಿವಿಧ ತಾಲೂಕಿನಿಂದ ಸಾರ್ವಜನಿಕರು, ಫಲಾನುಭವಿಗಳು ಆಗಮಿಸುವುರಿಂದ ಶಾಸಕರ ಕೋರಿಕೆಯಂತೆ ಬಸ್‌ ಕಲ್ಪಿಸಬೇಕು: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ


ಕಲಬುರಗಿ(ಆ.04):  ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್‌ ಉಚಿತ ಒದಗಿಸುವ ಗೃಹ ಜ್ಯೋತಿ ಯೋಜನೆ ಚಾಲನೆಗೆ ನಾಳೆ(ಆಗಸ್ಟ್‌ 5)ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು ಆಗಮಿಸಲಿದ್ದು, ಕಾರ್ಯಕ್ರಮ ಶಿಷ್ಟಾಚಾರದಂತೆ ಸಾಗಬೇಕು. ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿ​ಸಿ​ದ್ದಾರೆ.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೆರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಕಾರ್ಯಕ್ರಮ ಯಶಸ್ಸಿಗೆ ವಿವಿಧ ಸಮಿತಿ ರಚಿಸಿ ಡಿಸಿ ಆದೇಶ ಹೊರಡಿಸಿದ್ದು, ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

Latest Videos

undefined

ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು: ಆರಗ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು

ಮುಖ್ಯಮಂತ್ರಿಗಳ ಜೊತೆಗೆ ಜ್ಯಸಭೆ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಸಚಿವರು, ಚುನಾಯಿತ ಜನಪ್ರತಿನಿಧಿಗಳು ಆಗಮಿಸುವ ಕಾರಣ ಸಕಲ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ವಿವಿಧ ತಾಲೂಕಿನಿಂದ ಸಾರ್ವಜನಿಕರು, ಫಲಾನುಭವಿಗಳು ಆಗಮಿಸುವುರಿಂದ ಶಾಸಕರ ಕೋರಿಕೆಯಂತೆ ಬಸ್‌ ಕಲ್ಪಿಸಬೇಕು. ಆಸನ, ಕುಡಿಯುವ ನೀರು, ಊಟದ ವ್ಯವಸ್ಥೆ ಅಚ್ಚು​ಕ​ಟ್ಟಾ​ಗಿ​ರ​ಬೇ​ಕು. ಗಣ್ಯರು, ಅಧಿಕಾರಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು ಎಂದರು.

ವಿಐಪಿ, ವಿವಿಐಪಿ, ಅಧಿಕಾರಿಗಳು, ಮೀಡಿಯಾ ಸೇರಿದಂತೆ ಸ್ವಯಂ ಸೇವಕರಿಗೆ ಪ್ರವೇಶ ಮತ್ತು ವಾಹನಗಳ ಪಾಸ್‌ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್‌ ಆಯುಕ್ತ ಚೇತನ ಆರ್‌. ಅವರಿಗೆ ಸೂಚಿಸಿದ ಸಚಿವರು, ಅಂದು ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗುವಂತೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಟ್ರಾಫಿಕ್‌ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದರು.

ಎಲ್ಲದರಲ್ಲೂ ರಾಜಕೀಯ ಬೆರೆಸುವ ಬಿಜೆಪಿ: ಸಚಿವ ಕೃಷ್ಣ ಬೈರೇಗೌಡ

ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ ಅವರು ಕಾರ್ಯಕ್ರಮ ಕುರಿತಂತೆ ಕೈಗೊಂಡ ಪೂರ್ವಸಿದ್ಧತೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್‌, ಎಸ್‌.ಪಿ.ಇಶಾ ಪಂತ್‌, ಜಿಲ್ಲಾ ಪಂಚಾಯತ್‌ ಸಿಇಓ ಭಂರ್ವಾಸಿಂಗ್‌ ಮೀನಾ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್‌, ಕೆಕೆಆರ್‌ಟಿಸಿ ಎಂ.ಡಿ. ಎಂ.ರಾಚಪ್ಪ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

click me!