ದಾಬಸ್‌ಪೇಟೆ: ಹೊನ್ನೇನಹಳ್ಳಿ ಬಳಿ ಚಿರತೆ ಪ್ರತ್ಯಕ್ಷ, ರೈತರಲ್ಲಿ ಆತಂಕ

By Kannadaprabha News  |  First Published Aug 4, 2023, 9:45 PM IST

ಕೆಂಗಲ್‌ ಬೆಟ್ಟದಲ್ಲಿ ಎರಡು ವಾರದಿಂದಲೂ ಎರಡು-ಮೂರು ಚಿರತೆಗಳು ಸಂಚರಿಸುತ್ತಿವೆ. ಇದಲ್ಲದೆ ರಾತ್ರಿ ವೇಳೆ ರಸ್ತೆ ಬದಿ ಮತ್ತು ಶಿವಗಂಗೆ, ಕೆಂಗಲ್‌ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿವೆ. ಹೀಗಾಗಿ ರೈತರು ಜಾನುವಾರುಗಳನ್ನು ಮೇಯಿಸಲು ಹೊಲಗದ್ದೆಗಳ ಬಳಿ ರಾತ್ರಿ ವೇಳೆ ಓಡಾಡಲು ಹೆದರುತ್ತಿದ್ದಾರೆ. 

ದಾಬಸ್‌ಪೇಟೆ(ಆ.04):  ಸೋಂಪುರ ಹೋಬಳಿಯ ಹೊನ್ನೇನಹಳ್ಳಿಯ ವಿಷಕಂಠಪ್ಪ ಕ್ವಾರೆ ಸಮೀಪ ಚಿರತೆ ಪ್ರತ್ಯಕ್ಷವಾಗಿದ್ದು, ಹೊನ್ನೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. 

ಕೆಂಗಲ್‌ ಬೆಟ್ಟದಲ್ಲಿ ಎರಡು ವಾರದಿಂದಲೂ ಎರಡು-ಮೂರು ಚಿರತೆಗಳು ಸಂಚರಿಸುತ್ತಿವೆ. ಇದಲ್ಲದೆ ರಾತ್ರಿ ವೇಳೆ ರಸ್ತೆ ಬದಿ ಮತ್ತು ಶಿವಗಂಗೆ, ಕೆಂಗಲ್‌ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿವೆ. ಹೀಗಾಗಿ ರೈತರು ಜಾನುವಾರುಗಳನ್ನು ಮೇಯಿಸಲು ಹೊಲಗದ್ದೆಗಳ ಬಳಿ ರಾತ್ರಿ ವೇಳೆ ಓಡಾಡಲು ಹೆದರುತ್ತಿದ್ದಾರೆ. 

Tap to resize

Latest Videos

undefined

ಚಾಮರಾಜನಗರ: ಕೊಳ್ಳೇಗಾಲದಲ್ಲಿ ಚಿರತೆ ಸೆರೆ, ನಿಟ್ಟು​ಸಿರು ಬಿಟ್ಟ ಜನ

ಹೊನ್ನೇನಹಳ್ಳಿ, ಬರಗೇನಹಳ್ಳಿ, ಕೆಂಗಲ್‌, ಗೊಲ್ಲರಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಕಾಡಂಚಿನಲ್ಲಿದ್ದು ಸಾಕುಪ್ರಾಣಿಗಳು, ಮಕ್ಕಳನ್ನು ಹೊರಗೆ ಬಿಡಲು ಹೆದರುವಂತಾಗಿದೆ. ಇದೀಗ ಚಿರತೆಯನ್ನು ಕಂಡಿರುವ ರೈತರು ತಮ್ಮ ಹೊಲಗಳಿಗೆ ಹೋಗಲು ಭಯಪಡುತ್ತಿದ್ದಾರೆ. 

ಚಿರತೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಂಗಲ್‌, ಹೊನ್ನೇನಹಳ್ಳಿ ಗ್ರಾಮದ ರೈತರ ಆಗ್ರಹಿಸಿದ್ದಾರೆ.

click me!