ಬೆಂಗಳೂರಿನ ಮೂಲ ಸೌಕರ್ಯಕ್ಕೆ ಒತ್ತು ಸರ್ಕಾರ ಒತ್ತು ನೀಡಲಿ: ಎಸ್‌.ಎಂ.ಕೃಷ್ಣ

By Kannadaprabha NewsFirst Published Jul 30, 2023, 6:30 AM IST
Highlights

ಮುಖ್ಯಮಂತ್ರಿಯಾಗಿದ್ದಾಗ ನಾನು ‘ಬೆಂಗಳೂರನ್ನು ಸಿಂಗಪೂರ್‌ ಮಾಡುತ್ತೇನೆ’ ಎಂದು ಹೇಳಿಕೆ ನೀಡಿದ್ದೆ. ಇದಕ್ಕೆ ಮಾಧ್ಯಮಗಳು, ರಾಜಕೀಯ ವಿರೋಧಿಗಳು ಎಲ್ಲಿಯ ಸಿಂಗಪೂರ್‌, ಎಲ್ಲಿಯ ಬೆಂಗಳೂರು ಎಂದು ಆಗ ಹಾಸ್ಯ ಮಾಡಿದ್ದರು. ಆದರೆ ಈಗ ನಾವು ಆರ್ಥಿಕತೆಯಲ್ಲಿ ಸಿಂಗಪೂರ್‌ ಹಿಂದಿಕ್ಕಿದ್ದೇವೆ. ದೂರದೃಷ್ಟಿ, ದೃಢ ಯೋಜನೆಗಳಿಂದ ಇದು ಸಾಧ್ಯವಾಯಿತು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ 

ಬೆಂಗಳೂರು(ಜು.30): ವಿಶ್ವದಲ್ಲೇ ಗಮನ ಸೆಳೆಯುತ್ತಿರುವ ಬೆಂಗಳೂರಿನ ಮೂಲ ಸೌಕರ್ಯಕ್ಕೆ ನೂತನ ಸರ್ಕಾರ ಆದ್ಯತೆ ನೀಡಬೇಕಿದೆ. ನಗರದ ಅಭಿವೃದ್ಧಿಗಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ರೆಸಿಡೆನ್ಸಿ ರಸ್ತೆಯ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಬೆಂಗಳೂರು ಮ್ಯಾನೇಜ್ಮೆಂಟ್‌ ಅಸೋಸಿಯೇಷನ್‌’ನಿಂದ ಜೀವಮಾನದ ಸಾಧನೆ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಯಾಗಿದ್ದಾಗ ನಾನು ‘ಬೆಂಗಳೂರನ್ನು ಸಿಂಗಪೂರ್‌ ಮಾಡುತ್ತೇನೆ’ ಎಂದು ಹೇಳಿಕೆ ನೀಡಿದ್ದೆ. ಇದಕ್ಕೆ ಮಾಧ್ಯಮಗಳು, ರಾಜಕೀಯ ವಿರೋಧಿಗಳು ಎಲ್ಲಿಯ ಸಿಂಗಪೂರ್‌, ಎಲ್ಲಿಯ ಬೆಂಗಳೂರು ಎಂದು ಆಗ ಹಾಸ್ಯ ಮಾಡಿದ್ದರು. ಆದರೆ ಈಗ ನಾವು ಆರ್ಥಿಕತೆಯಲ್ಲಿ ಸಿಂಗಪೂರ್‌ ಹಿಂದಿಕ್ಕಿದ್ದೇವೆ. ದೂರದೃಷ್ಟಿ, ದೃಢ ಯೋಜನೆಗಳಿಂದ ಇದು ಸಾಧ್ಯವಾಯಿತು ಎಂದು ವಿವರಿಸಿದರು.

12 ಕಿ.ಮೀ. ಕೆಂಪೇಗೌಡ ಪಾರಂಪರಿಕ ಕಾರಿಡಾರ್‌; ಡಿಪಿಆರ್ ಸಿದ್ಧಪಡಿಸಲು ಸೂಚನೆ

ಆಂಧ್ರದ ಜೊತೆ ಸ್ಪರ್ಧೆ:

ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಆರೋಗ್ಯಕರ ಸ್ಪರ್ಧೆ ಉಂಟಾಗಿತ್ತು. ಆಗ ನಾನು ನಗರದ ಅಭಿವೃದ್ಧಿಗಾಗಿ ‘ಬೆಂಗಳೂರು ಅಜೆಂಡಾ ಟಾಸ್‌್ಕ ಫೋರ್ಸ್‌’ ರಚಿಸಿ ಪ್ರತಿ ಆರು ತಿಂಗಳಿಗೊಮ್ಮೆ ಸಭೆ ಕರೆಯುತ್ತಿದ್ದೆ. ಕಳೆದ 6 ತಿಂಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಪರಾಮರ್ಶಿಸುವ ಜೊತೆಗೆ ಮುಂದಿನ 6 ತಿಂಗಳಿಗೆ ಗುರಿ ನಿಗದಿ ಮಾಡಿಕೊಳ್ಳುತ್ತಿದ್ದೆವು ಎಂದು ನೆನಪಿಸಿಕೊಂಡರು.

ನನ್ನ ಜೊತೆ ಉದ್ಯಮಿಗಳು ಮಾತನಾಡಲು ಇಚ್ಛಿಸಿದರೆ ನೂರು ಬಾರಿ ಅವರ ಮನೆಗೆ ಹೋಗುತ್ತೇನೆ ಎಂದು ಸಂದರ್ಶನವೊಂದರಲ್ಲಿ ನಾನು ಹೇಳಿಕೆ ನೀಡಿದ್ದೆ. ಸರ್ಕಾರವೇ ಆಗಾಗ್ಗೆ ಉದ್ಯಮಿಗಳ ಸಭೆ ಕರೆಯುತ್ತಿದ್ದರಿಂದ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಬಹಳಷ್ಟುಸಲಹೆ ಬರುತ್ತಿದ್ದವು. ಅವುಗಳನ್ನು ಅನುಷ್ಠಾನ ಮಾಡಿದ್ದರಿಂದ ದೂರುಗಳು ಉದ್ಭವಿಸುವ ಪ್ರಶ್ನೆ ಬರುತ್ತಿರಲಿಲ್ಲ ಎಂದು ವ್ಯಾಖ್ಯಾನಿಸಿದರು.

Karnataka Budget 2023: ಬ್ರ್ಯಾಂಡ್‌ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ

ಎಫ್‌ಐಸಿಸಿಐ ಅಧ್ಯಕ್ಷ ಕೆ.ಉಲ್ಲಾಸ್‌ ಕಾರಂತ್‌, ಬೆಂಗಳೂರು ಮ್ಯಾನೇಜ್ಮೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಕೆ.ಎಸ್‌.ನಾರಾಯಣಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್‌, ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಮಧುರಾಣಿ ಗೌಡ ಮತ್ತಿತರರು ಹಾಜರಿದ್ದರು.

‘ಬೆಂಗಳೂರು ಮ್ಯಾನೇಜ್ಮೆಂಟ್‌ ಅಸೋಸಿಯೇಷನ್‌’ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಫ್‌ಐಸಿಸಿಐ ಅಧ್ಯಕ್ಷ ಕೆ.ಉಲ್ಲಾಸ್‌ ಕಾರಂತ್‌, ಅಸೋಸಿಯೇಷನ್‌ ಅಧ್ಯಕ್ಷ ಡಾ.ಕೆ.ಎಸ್‌.ನಾರಾಯಣಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್‌ ಹಾಜರಿದ್ದರು.

click me!