ರೈತರ ಆರ್ಥಿಕ ಸಬಲತೆಗೆ ಹಲಸು ಉಪ ಬೆಳೆಯಾಗಲಿ

Published : Jul 30, 2023, 05:47 AM IST
 ರೈತರ ಆರ್ಥಿಕ ಸಬಲತೆಗೆ ಹಲಸು ಉಪ ಬೆಳೆಯಾಗಲಿ

ಸಾರಾಂಶ

ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಳ್ಳಿ ಸಿರಿ ಸಂಘ ತೋವಿನಕೆರೆ ಇವರ ಸಂಯುಕ್ತಾಶ್ರಯದಲ್ಲಿ ತಡಸೂರಿನಲ್ಲಿ ನಡೆದ ಹಲಸಿನ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನು ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.

  ತಿಪಟೂರು :  ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಳ್ಳಿ ಸಿರಿ ಸಂಘ ತೋವಿನಕೆರೆ ಇವರ ಸಂಯುಕ್ತಾಶ್ರಯದಲ್ಲಿ ತಡಸೂರಿನಲ್ಲಿ ನಡೆದ ಹಲಸಿನ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನು ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.

ಕೆವಿಕೆಯ ಮುಖ್ಯಸ್ಥರಾದ ಡಾ. ವಿ.ಗೋವಿಂದಗೌಡ ಮಾತನಾಡಿ, ರೈತರು ಹಲಸು ಬೆಳೆಯನ್ನು ಉಪ ಬೆಳೆಯಾಗಿ ಪರಿಗಣಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ-ಹೊಸ ವಿವಿಧ ಬಗೆಯ ಹಲಸು ಬೆಳೆಯನ್ನು ಬೆಳೆಯುವವರ ಜೊತೆಗೆ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದರು.

ಸಿರಿ ಸಂಘದ ಸಂಸ್ಥಾಪಕರಾದ ಪದ್ಮರಾಜು ಮಾತನಾಡಿ, ಹಲಸಿನಹಣ್ಣಿನ ಸೀಸನ್‌ ಈಗಾಗಲೇ ಬಂದಾಗಿದೆ, ನಾಲಿಗೆಗೆ ರುಚಿ ನೀಡುವ ಈ ಹಲಸಿನ ಹಣ್ಣಿನಲ್ಲಿ ಅತ್ಯದ್ಬುತವಾದ ಔಷಧೀಯ ಗುಣಗಳು ಅಡಗಿವೆ. ಹಿಂದೆ ಹಳ್ಳಿಗಳಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಸೀಮಿತವಾಗಿದ್ದ ಹಲಸಿನ ಹಣ್ಣಿನ ಸೇವೆನೆ ಇದೀಗ ಪಟ್ಟಣಗಳಲ್ಲಿ ಸೂಪರ್‌ ಮಾರ್ಕೆಟ್‌ನಲ್ಲಿ ದೊರಕುತ್ತದೆ. ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ತಿಳಿಸಿದರು.

ಆಯಷ್‌ ವೈದ್ಯಕೀಯ ಅಧಿಕಾರಿ ಡಾ.ಸುಮನಾ ಮಾತನಾಡಿ, ಹಲಸಿನ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು ದೇಹಕ್ಕೆ ತುಂಬಾ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ವಿಟಮಿನ್‌ ಸಿ ಮತ್ತು ವಿಟಮಿನ್‌ ಎ ಹೇರಳವಾಗಿ ಕಂಡುಬರುತ್ತದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಸೇವಿಸುವುದರಿಂದ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಆರ್ಥಿಕ ಸಲಹಗಾರರು ಹಾಗೂ ರೈತ ಉತ್ಪಾದಕರ ಸಂಘದ ನಿರ್ದೇಶಕಿ ಪಿ.ರೇಖಾ ಬ್ಯಾಂಕ್‌ಗಳ ಹಣಕಾಸಿನ ನೆರವಿನ ಮಾಹಿತಿಯನ್ನು ನೀಡಿದರು. ಭಾರತೀಯ ಕಿಸಾನ್‌ ಸಂಘ ಮಹಿಳಾ ಪ್ರಮುಖ್‌ ನವೀನ್‌ ಸದಾಶಿವಯ್ಯ ಮಾತನಾಡಿ, ರೈತರು ಮುಖ್ಯಬೆಳೆಗೆ ಸಿಗುವ ಬೆಳೆಯ ಬಗ್ಗೆ ಯೋಚಿಸಿ ಉಳಿದ ಬೆಳೆಗಳನ್ನು ನಿರ್ಲಕ್ಷಿಸುವುದು ಬೇಡ. ಪ್ರತಿಯೊಂದರ ಮೌಲ್ಯವರ್ಧನೆಯನ್ನು ಮಾಡಿ ಹಣಗಳಿಸಬಹುದು ಎಂದು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಹಲಸಿನ ಹಣ್ಣು ಮತ್ತು ಬೀಜಗಳಿಂದ ತಯಾರಿಸಿದ ತಿನಿಸಿಗಳು ನೋಡುಗರ ಬಾಯಲ್ಲಿ ನಿರೂರುವಂತೆ ಮಾಡಿದವು. ಹಲಸಿನ ಪಕೋಡ, ಬೋಂಡ, ಹಲಸಿನ ದೋಸೆ, ಹಲಸಿನ ಹೋಳಿಗೆ, ಹಲಸಿನ ಹಪ್ಪಳ, ಹಲಸಿನ ಶಾವಿಗೆ, ಹಲಸಿನ ಕೇಸರಿಬಾತ್‌, ಹಲಸಿನ ಬೀಜದ ಸೂಪ್‌ ತಯಾರಿಸುವ ತರಬೇತಿ ನೀಡಲಾಯಿತು. ಹಳ್ಳಿ ಸಿರಿ ಸಂಘದ ಮಂಜಮ್ಮ, ಸವಿತ, ಪುಷ್ಪಲತಾ, ಶಾನುವಾಜ್‌ ಹಲಸಿನ ಹಣ್ಣು ಮೌಲ್ಯವರ್ಧಿತ ಪದಾರ್ಥಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ತಡಸೂರು ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಯಿತು. ತಿಪಟೂರು ಗ್ರಾಮಾಂತರ ಪೋಲಿಸ್‌ ವೃತ್ತ ನಿರೀಕ್ಷಕ ಸಿದ್ಧರಾಮೇಶ್ವರ, ಕೆವಿಕೆ ವಿಜ್ಞಾನಿಗಳಾದ ಡಾ. ಕೆ.ನಿತ್ಯಾಶ್ರೀ, ದರ್ಶನ್‌, ಡಾ. ಕೆ. ಕೀರ್ತಿಶಂಕರ್‌, ಮನೋಜ್‌, ತಡಸೂರಿನ ನಾಗರಾಜು, ಯೋಗನಂದಮೂರ್ತಿ, ತ್ರಿವೇಣಿ ಸೇರಿದಂತೆ ಗ್ರಾಮಸ್ಥರು, ಕೆವಿಕೆ ಸಿಬ್ಬಂದಿಗಳು ಭಾಗವಹಿಸಿದ್ದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ