ಬೆಂಗಳೂರು: ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು

By Kannadaprabha News  |  First Published Jul 30, 2023, 6:00 AM IST

ಪ್ರಾಯೋಗಿಕ ರೈಲು ಸಂಚಾರ ಬೆಳಗ್ಗೆ 11.27ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 4.15ರವರೆಗೆ ನಡೆಯಿತು. ಗರಿಷ್ಠ 10 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಿತು. ಏಕಕಾಲಕ್ಕೆ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಹಾಗೂ ಕೆಂಗೇರಿ - ಚಲ್ಲಘಟ್ಟ ಮೆಟ್ರೋ ಮಾರ್ಗವನ್ನು ಸೆಪ್ಟೆಂಬರ್‌ಗೆ ಜನಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಮುಂದಾಗಿದೆ. ಇದರ ಭಾಗವಾಗಿ ಕಳೆದ ಬುಧವಾರ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿತ್ತು.

ಬೆಂಗಳೂರು(ಜು.30): ‘ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿ ಕೆಂಗೇರಿ-ಚಲ್ಲಘಟ್ಟಮೆಟ್ರೋ ನಿಲ್ದಾಣಗಳ (1.9 ಕಿ.ಮೀ.) ನಡುವೆ ರೈಲಿನ ಮೊದಲ ಪ್ರಯೋಗಿಕ ಸಂಚಾರ ಶನಿವಾರದಿಂದ ಪ್ರಾರಂಭವಾಯಿತು.

ಪ್ರಾಯೋಗಿಕ ರೈಲು ಸಂಚಾರ ಬೆಳಗ್ಗೆ 11.27ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 4.15ರವರೆಗೆ ನಡೆಯಿತು. ಗರಿಷ್ಠ 10 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಿತು. ಏಕಕಾಲಕ್ಕೆ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಹಾಗೂ ಕೆಂಗೇರಿ - ಚಲ್ಲಘಟ್ಟ ಮೆಟ್ರೋ ಮಾರ್ಗವನ್ನು ಸೆಪ್ಟೆಂಬರ್‌ಗೆ ಜನಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಮುಂದಾಗಿದೆ. ಇದರ ಭಾಗವಾಗಿ ಕಳೆದ ಬುಧವಾರ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿತ್ತು.

Tap to resize

Latest Videos

Bengaluru: ಕೆ.ಆರ್.ಪುರ- ಬೈಯಪ್ಪನಹಳ್ಳಿಗೆ ಮೊದಲ ಮೆಟ್ರೋ ಸಂಚಾರ ಯಶಸ್ವಿ

ಪ್ರಾಯೋಗಿಕ ಚಾಲನೆ ವೇಳೆ ರೈಲು ಹಾಗೂ ಪ್ಲಾಟ್‌ಫಾಮ್‌ರ್‍ ನಡುವಿನ ಅಂತರ, ಸಿಗ್ನಲಿಂಗ್‌ ವ್ಯವಸ್ಥೆ, ಟ್ರ್ಯಾಕ್‌ ಸಾಮರ್ಥ್ಯ, ವೇಗ ಹಾಗೂ ನಿಧಾನ ಚಾಲನೆ, ದ್ವಿಮುಖ ಚಾಲನೆ ಹಾಗೂ ಎರಡೂ ಟ್ರ್ಯಾಕ್‌ಗಳಲ್ಲಿನ ಸಂಚಾರ, ನಿಲುಗಡೆ ಸೇರಿ ಇತರೆ ತಾಂತ್ರಿಕ ವಿಚಾರ ಪರಿಶೀಲಿಸಲಾಯಿತು. ನ್ಯೂನತೆ ಹಾಗೂ ಆಗಬೇಕಾದ ಬದಲಾವಣೆಗಳನ್ನು ಗುರುತಿಸಿಕೊಂಡು ಅದನ್ನು ಸರಿಪಡಿಸಿಕೊಳ್ಳಲಾಗುವುದು. ಮುಂದಿನ 15 ದಿನ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು ನಿಗಮ ತಿಳಿಸಿದೆ.

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

2021ರ ಆಗಸ್ಟ್‌ 31ರಂದು ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53ಕಿಮೀ ಮೆಟ್ರೋ ಮಾರ್ಗ ಜನಸಂಚಾರಕ್ಕೆ ಮುಕ್ತವಾಗಿತ್ತು. ಇದೀಗ ಎರಡು ವರ್ಷಗಳ ಬಳಿಕ ಮುಂದುವರಿದ ಮಾರ್ಗ ಲೋಕಾರ್ಪಣೆ ಆಗುತ್ತಿದೆ. ಇದರಿಂದ ಸನಿಹದಲ್ಲೇ ನಿರ್ಮಾಣ ಆಗುತ್ತಿರುವ ನಾಡಪ್ರಭು ಕೆಂಪೇಗೌಡ ಲೇಔಟ್‌ ನಿವಾಸಿಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲ ಆಗಲಿದೆ.

ಚಲ್ಲಘಟ್ಟದಲ್ಲೇ ಬಿಎಂಆರ್‌ಸಿಎಲ್‌ ಮೆಟ್ರೋದ ಹೊಸ ಡಿಪೋ ಕೂಡ ನಿರ್ಮಾಣವಾಗುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಇಲ್ಲಿಂದಲೇ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚವಾಣ್‌ ತಿಳಿಸಿದರು.

click me!