ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ತನ್ನ 5 ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಲು ಹೆಣಗಾಡುತ್ತಿದೆ. ಇದಕ್ಕಾಗಿ ಹಳೆಯ ಯೋಜನೆಗಳಿಗೆ ಅನುದಾನ ನೀಡುವುದಕ್ಕೆ ತಡೆ ನೀಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಈ ನಡುವೆ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲು ಯೋಜನೆಗಳಿಗೆ ತನ್ನ ಪಾಲಿನ ಅನುದಾನಕ್ಕೆ ಸಮಸ್ಯೆ ಮಾಡಬಾರದು ಎಂಬುದು ಸಾರ್ವಜನಿಕರ ಒಕ್ಕೊರಲಿನ ಕೂಗು.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜೂ.9) : ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ತನ್ನ 5 ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಲು ಹೆಣಗಾಡುತ್ತಿದೆ. ಇದಕ್ಕಾಗಿ ಹಳೆಯ ಯೋಜನೆಗಳಿಗೆ ಅನುದಾನ ನೀಡುವುದಕ್ಕೆ ತಡೆ ನೀಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಈ ನಡುವೆ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲು ಯೋಜನೆಗಳಿಗೆ ತನ್ನ ಪಾಲಿನ ಅನುದಾನಕ್ಕೆ ಸಮಸ್ಯೆ ಮಾಡಬಾರದು ಎಂಬುದು ಸಾರ್ವಜನಿಕರ ಒಕ್ಕೊರಲಿನ ಕೂಗು.
ಗೃಹಲಕ್ಷ್ಮೇ, ಗೃಹ ಜ್ಯೋತಿ, ಶಕ್ತಿ, ಯುವ ನಿಧಿ ಸೇರಿದಂತೆ ಐದು ಗ್ಯಾರಂಟಿಗಳನ್ನು(Congress guarantee) ರಾಜ್ಯದ ಕಾಂಗ್ರೆಸ್ ಸರ್ಕಾರ(Congress government) ನೀಡುತ್ತಿದೆ. ಚುನಾವಣೆ ಪೂರ್ವದಲ್ಲಿ ತಾನು ಕೊಟ್ಟಭರವಸೆಯಂತೆ ಈ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳಿಗೆ ಹಣಕಾಸಿನ ವ್ಯವಸ್ಥೆ ಮಾಡುವುದಕ್ಕಾಗಿ ಹೆಣಗಾಡುತ್ತಿರುವ ಸರ್ಕಾರ, ಕೆಲವೊಂದಿಷ್ಟುಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂಬ ಆರೋಪ ಬಿಜೆಪಿ ಮುಖಂಡರು ಮಾಡುತ್ತಾರೆ. ಅದರಂತೆ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಕೊಡಬೇಕಾದ ತನ್ನ ಪಾಲಿನ ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಈ ಮೂಲಕ ರೈಲ್ವೆ ಕಾಮಗಾರಿಗಳು ತ್ವರಿತವಾಗಿ ಕೈಗೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂಬ ಅಭಿಪ್ರಾಯ ಪ್ರಜ್ಞಾವಂತರದ್ದು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ್ ಪೈಪೋಟಿ!...
ಏನೇನು ಕೆಲಸ:
ರೈಲ್ವೆ ಯೋಜನೆ(Railway project)ಗಳು ಸಹಜವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಡಿಯೇ ನಡೆಯುತ್ತವೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನೂ ನೀಡಲೇಬೇಕು. ನೈರುತ್ಯ ರೈಲ್ವೆ ವಲಯದಲ್ಲಿ 11 ಹೊಸ ರೈಲು ಮಾರ್ಗಗಳ ಕಾಮಗಾರಿ ನಡೆಯುತ್ತಿದ್ದರೆ, ಎರಡು ಜೋಡಿ ಮಾರ್ಗದ ಯೋಜನೆಗಳು ನಡೆಯುತ್ತಿವೆ. ಕೆಲವೊಂದಿಷ್ಟುಕೆಲಸ ಪ್ರಾರಂಭವಾಗಿ ಪ್ರಗತಿಯಲ್ಲಿದ್ದರೆ, ಕೆಲ ಯೋಜನೆಗಳಿಗೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಇವು ಇನ್ನಷ್ಟೇ ಪ್ರಾರಂಭವಾಗಬೇಕು.
ಹೊಸ ರೈಲು ಮಾರ್ಗ:
ರಾಜ್ಯ ಹಾಗೂ ಕೇಂದ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಮುಖ ಕಾಮಗಾರಿಗಳೆಂದರೆ, ಗಿಣಗೇರ- ರಾಯಚೂರು ಮಧ್ಯದಲ್ಲಿ ಹೊಸ ರೈಲು ಮಾರ್ಗ 2007ರಲ್ಲಿ ಮಂಜೂರಾಗಿ ಈ ವರೆಗೆ 66 ಕಿಮೀ ಮಾರ್ಗ ನಿರ್ಮಾಣವಾಗಿದೆ. ಇನ್ನು 100 ಕಿಮೀ ನಿರ್ಮಾಣವಾಗಬೇಕಿದೆ. ಗದಗ- ವಾಡಿ 257 ಕಿಮೀ ಪೈಕಿ ಈವರೆಗೆ 35 ಕಿಮೀ ಹಳಿ ನಿರ್ಮಾಣವಾಗಿದೆ. ಬಾಗಲಕೋಟೆ- ಕುಡಚಿ 142 ಕಿಮೀ ಪೈಕಿ ಈವರೆಗೆ 30 ಕಿಮೀ ರೈಲು ಮಾರ್ಗ ಪೂರ್ಣಗೊಂಡಿದೆ. ಕಡೂರು- ಸಂಕಲೇಶಪುರ 93 ಕಿಮೀ ಪೈಕಿ 46 ಕಿಮೀ ಪೂರ್ಣಗೊಂಡಿದೆ. ಇವೆಲ್ಲವೂ ರಾಜ್ಯ ಹಾಗೂ ಕೇಂದ್ರದ 50;50 ಅನುದಾನದ ಕೆಲಸಗಳಾಗಿವೆ.
ಇನ್ನೂ ಬೆಳಗಾವಿ-ಧಾರವಾಡ, ತುಮಕೂರ- ದಾವಣಗೆರೆ, ಶಿವಮೊಗ್ಗ- ಶಿಕಾರಿಪುರ- ರಾಣಿಬೆನ್ನೂರ, ಮೈಸೂರ- ಕುಶಾಲನಗರ, ಹಾಸನ- ಬೇಲೂರ ಯೋಜನೆಗಳು ಮಂಜೂರಾತಿ ಸಿಕ್ಕಿವೆ. ಆದರೆ ಇನ್ನೂ ಕೆಲಸ ಶುರುವಾಗಿಲ್ಲ. ಕೆಲವೊಂದಿಷ್ಟುಸಮೀಕ್ಷೆ ಪೂರ್ಣಗೊಂಡಿದ್ದರೆ, ಕೆಲವೊಂದು ಸಮೀಕ್ಷೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಯೋಜನೆಗಳೂ ಅಭಿವೃದ್ಧಿಗೆ ಪೂರಕವಾಗಿರುವಂತಹವು. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅನುದಾನವನ್ನೆಲ್ಲ ಬಿಡುಗಡೆ ಮಾಡುತ್ತಿತ್ತು. ಈ ತರಹದ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಬಗೆಯ ತಾರತಮ್ಯ ಮಾಡದೇ ಅನುದಾನ ಬಿಡುಗಡೆ ಮಾಡಬೇಕು. ಈ ಮೂಲಕ ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.
ಧಾರವಾಡ: ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಚಿವ ಲಾಡ್ ಫುಲ್‌ಕ್ಲಾಸ್..!
ರೈಲ್ವೆ ಯೋಜನೆಗಳಿಗೆ ಅನುದಾನ ಕೊಡುವಲ್ಲಿ ಹಿಂದೇಟು ಹಾಕದೇ ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡಬೇಕು. ಈ ವಿಷಯದಲ್ಲಿ ಮೀನಮೇಷ ಎಣಿಸಿದರೆ ಹೋರಾಟ ಮಾಡಬೇಕಾಗುತ್ತದೆ.
- ಲಕ್ಷ್ಮೇಕಾಂತ ಘೋಡಕೆ, ಯುವ ಮುಖಂಡ