ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು. ಈ ಬಗ್ಗೆ ಗಮನಕ್ಕಿದ್ದರು ಸಹ ನೂತನ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಲಬುರಗಿ ಜಿಲ್ಲೆಗೆ ಏಮ್ಸ್ ತರುವುದಾಗಿ ನೀಡಿರುವ ಹಿನ್ನೆಲೆ ಗೋಬ್ಯಾಕ್ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ರಾಯಚೂರು (ಜೂ.9) : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು. ಈ ಬಗ್ಗೆ ಗಮನಕ್ಕಿದ್ದರು ಸಹ ನೂತನ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಲಬುರಗಿ ಜಿಲ್ಲೆಗೆ ಏಮ್ಸ್ ತರುವುದಾಗಿ ನೀಡಿರುವ ಹೇಳಿಕೆ ಖಂಡನೀಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜಿಲ್ಲೆಗೆ ಬಂದರೆ ಅವರ ವಿರುದ್ಧ ಗೋಬ್ಯಾಕ್ ಚಳವಳಿ ಮಾಡಲಾಗುವುದು ಎಂದು ರಾಯಚೂರು ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ಸಂಚಾಲಕ ಅಶೋಕ ಕುಮಾರ ಜೈನ್ ಎಚ್ಚರಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ 392 ದಿನಗಳಿಂದ ಏಮ್ಸ್‌ಗಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಆದರೆ, ಸಚಿವರು ಕಲಬುರಗಿಗೆ ಏಮ್ಸ್ ಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ನುಡಿದಿರುವುದು ಖಂಡನೀಯ. ಕಲ್ಯಾಣ ಕರ್ನಾಟಕವೆಂದರೆ ಕೇವಲ ಕಲಬುರಗಿ ಮಾತ್ರವಲ್ಲ. ಐಐಟಿಯನ್ನು ಧಾರವಾಡಕ್ಕೆ ಕೊಂಡ್ಯೊಯ್ಯಲಾಯಿತು. ಬಿಜೆಪಿ ಆಡಳಿತದಲ್ಲಿ ಏಮ್ಸ್‌ನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಯತ್ನಿಸಿದರು. ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿಯೂ ಏಮ್ಸ್ ವಿಚಾರದಲ್ಲಿ ಅಂಥÜದ್ದೆ ಹುನ್ನಾರವನ್ನು ಕಲಬುರಗಿ ರಾಜಕಾರಣಿಗಳು ಮಾಡುತ್ತಿದ್ದು, ಯಾವುದೇ ಕಾರಣಕ್ಕು ಇದನ್ನು ಸಹಿಸುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಗೆ ಏಮ್ಸ್: ಶರಣ ಪ್ರಕಾಶ ಹೇಳಿಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ
ಕಾಂಗ್ರೆಸ್ ಪ್ರಣಾಳಿಕೆ (Congress manifesto)ಯಲ್ಲಿ ರಾಯಚೂರಿಗೆ ಏಮ್ಸ್ (Raichur AIIMS)ಕೊಡಿಸುವುದಾಗಿ ಭರವಸೆ ನೀಡಿದೆ. ಅದನ್ನು ಕಾಂಗ್ರೆಸ್ ಮಂತ್ರಿಗಳು ತಿಳಿದುಕೊಂಡು ಮಾತನಾಡಬೇಕು. ಕೂಡಲೇ ಸಚಿವ ಎನ್.ಎಸ್.ಬೋಸರಾಜು(Minister NS Bosaraju) ಮುಖ್ಯಮಂತ್ರಿ ಬಳಿ ಏಮ್ಸ್ ಹೋರಾಟಗಾರರ ನಿಯೋಗವನ್ನು ಭೇಟಿ ಮಾಡಿಸಿ, ಎಲ್ಲ ಪಕ್ಷಗಳ ಶಾಸಕರು, ಸಂಸದರು ಈ ಬಗ್ಗೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ ಎಂ.ಆರ್.ಭೇರಿ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ವಿರುದ್ಧವೆ ಸಚಿವ ಶರಣ ಪ್ರಕಾಶ್ ಪಾಟೀಲ್(Dr Sharanaprakash patil) ಮಾತನಾಡಿದ್ದು, ಇದು ಪಕ್ಷ ವಿರೋಧಿ ಧೋರಣೆಯಾಗಿದೆ. ಕೂಡಲೇ ಹೈಕಮಾಂಡ್ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಬೇಕು. ಪ್ರಣಾಳಿಕೆಯಲ್ಲಿ ಏಮ್ಸ್ ಬಗ್ಗೆ ನೀಡಿರುವ ಭರವಸೆ ಈಡೇರಿಸಬೇಕು. ಇಲ್ಲದಿದ್ದರೆ ಜನರು ಬಿಜೆಪಿಗೆ ಕಲಿಸಿದ ಪಾಠ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೂ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಜಾನ್ ವೆಸ್ಲಿ, ಶರಣಪ್ಪ ಬಾಡಿಯಾಳ, ಕಾಮರಾಜ, ಬಸವರಾಜ, ನರಸಪ್ಪ ಇದ್ದರು.