ಅಡ್ವಾಣಿಯವರಿಗೆ ಭಾರತ ರತ್ನ ನೀಡಿದ್ದಕ್ಕೆ ತಕರಾರಿಲ್ಲ, ಸಿದ್ಧಗಂಗಾ ಶ್ರೀಗಳಿಗೂ ನೀಡಲಿ: ಡಿಕೆಶಿ

By Kannadaprabha News  |  First Published Feb 4, 2024, 9:15 PM IST

ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದರು. ಅವರಿಗೆ ಗೌರವ ಸಲ್ಲಿಸಬೇಕು ಅನ್ನೋದು ನಮ್ಮ ಒತ್ತಾಯವಿದೆ. ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದ ಡಿಸಿಎಂ ಡಿ.ಕೆ.ಶಿವಕುಮಾರ 


ಬಸವನಬಾಗೇವಾಡಿ(ಫೆ.04): ಅಡ್ವಾಣಿಯವರು ದೇಶದಲ್ಲಿ ಹಿರಿಯ ರಾಜಕಾರಣಿ. ಅವರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರು ಇಲ್ಲ. ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಮ್ಮ ಸರ್ಕಾರ ಮನವಿ ಮಾಡಿತ್ತು. ಅವರಿಗೂ ಭಾರತರತ್ನ ನೀಡಬೇಕಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು. ಬಸವನಬಾಗೇವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದರು. ಅವರಿಗೆ ಗೌರವ ಸಲ್ಲಿಸಬೇಕು ಅನ್ನೋದು ನಮ್ಮ ಒತ್ತಾಯವಿದೆ. ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.

ವಿಜಯಪುರ: ನಾವು ಮಠಗಳ ಜೊತೆ ಇದ್ದೇವೆ: ಡಿಕೆಶಿ

Tap to resize

Latest Videos

ಧರ್ಮ ಎಲ್ಲರನ್ನು ಕಟ್ಟುವ ಮಾರ್ಗ, ಧರ್ಮ ಅಂದರೆ ಎಲ್ಲರನ್ನು ಪ್ರೀತಿಸುವ ಮಾರ್ಗ. ಸಮಾನತೆಯಿಂದ ಎಲ್ಲರ ನೋಡುವ ಮಾರ್ಗ ಧರ್ಮ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮಾತನಾಡಿದ ಅವರು, ಶಾಂತಿ‌ ನೆಮ್ಮದಿ ಮೂಡಿಸಿಕೊಳ್ಳಲು ಇಲ್ಲಿ ಬಂದಿದ್ದೇವೆ. ಇಲ್ಲಿ ಬಂದಿರೋದೆ ಪುಣ್ಯ. ನಮಗೆ ಜ್ಞಾನದಿಂದ ಅರಿವು ಮೂಡಿಸುವ ಸಂದರ್ಭವಿದು. 50 ವರ್ಷದಲ್ಲೆ ಕೊಪ್ಪಳದಂತ ಜಾತ್ರೆಯನ್ನು ಕಂಡಿಲ್ಲ. 10 ಲಕ್ಷ ಜನರು ಜಾತ್ರೆಯಲ್ಲಿದ್ದರು. ಮನೆ ಕಾಪಾಡಿದಂತೆ, ಮಠವನ್ನು ನಾವು ಕಾಪಾಡಬೇಕು. ಮನೆ ಮಠವನ್ನು ನೋಡಿಕೊಳ್ಳಬೇಕು. ಮಠಗಳಿಗೆ ಭಕ್ತರು ಸಹಕಾರ ನೀಡಬೇಕು ಎಂದರು.

ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್‌ ಶುದ್ಧವಾಯ್ತು: ಸಚಿವ ಎಂ.ಬಿ.ಪಾಟೀಲ್‌

ಧರ್ಮದಲ್ಲಿ ರಾಜಕಾರಣ ಮಾಡ್ತಿದ್ದಾರೆ. ರಾಜಕಾರಣದಲ್ಲಿ ಧರ್ಮವಿರಲಿ, ಧರ್ಮದಲ್ಲಿ ರಾಜಕಾರಣ ಮಾಡಬಾರದು. ಈ ಬಗ್ಗೆ ಈಗ ನಾನು ಮಾತನಾಡಲ್ಲ.ಈಗ ಧರ್ಮದಲ್ಲಿ ರಾಜಕಾರಣ ಬೆರೆಸುತ್ತಿದ್ದಾರೆ. ಗ್ಯಾರಂಟಿ ಮಾಡಿದ್ದು ನಾನು ಅಂತ ಹೇಳಲ್ಲ. ಬಸ್ ಪ್ರೀ, ಕರೆಂಟ್ ಪ್ರೀ.. ಎಂದಾದರೂ ಇಂಥದ್ದು ಕಂಡಿದ್ದೀರಾ? ಜನರ ಅಕೌಂಟ್‌ಗೆ ತಿಂಗಳಿಗೆ ಮೂರರಿಂದ ₹5 ಸಾವಿರ ಅಕೌಂಟ್‌ಗೆ ನೀಡುತ್ತಿದ್ದೇವೆ. ರೈತರನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ನಿಮ್ಮ ರಕ್ಷಣೆಗೆ ಬದ್ಧವಾಗಿದೆ. ಮಠಗಳ ಜೊತೆಯಲ್ಲಿ ಇದ್ದೇವೆ ಎಂದು ಹೇಳಲು ನಾವು ಬಂದಿದ್ದೇವೆ. ಇತಿಹಾಸ ಯಾರು ಮರೆಮಾಚಲು ಸಾಧ್ಯವಿಲ್ಲ. ನಾನು ಸಹ ಈ ಮಠದ ಭಕ್ತ. ನಾನು ಡಿಸಿಎಂ ಅನ್ನೋದು ಬದಿಗಿಡಿ, ಈ ಮಠದ ಭಕ್ತ ಅಂತ ನೋಡಿ ಎಂದರು.

click me!